ಬಿಗ್ ಬಾಸ್ (Bigg Boss) ರಿಯಾಲಿಟಿ ಶೋಗಾಗಿಯೇ ಕಾದು ಕೂರುವ ಅಭಿಮಾನಿಗಳಿದ್ದಾರೆ. ಈ ಬಾರಿ ಅದ್ದೂರಿಯಾಗಿ ಟಿವಿ ಪರದೆಗೆ ತರಲು ತಾಲೀಮು ನಡೆಯುತ್ತಿದೆ. ಕನ್ನಡದ ಬಿಗ್ ಬಾಸ್ 10ರ ಸೀಸನ್ ಬರುತ್ತಿರುವ ಹಲವು ವಿಶೇಷಗಳಿದೆ. ಇದರ ಮಧ್ಯೆ ಬಿಗ್ ಬಾಸ್ ಪ್ರೋಮೋ ಶೂಟ್ಗೆ ಮತ್ತು ಶೋ ಪ್ರಸಾರಕ್ಕೆ ಮುಹೂರ್ತ ಫಿಕ್ಸ್ ಆಗಿದೆ
ಈ ಸೀಸನ್ನಲ್ಲಿ ಒಟಿಟಿಗೆ ಅಂತ್ಯ ಹಾಡಿ ಬಿಗ್ ಬಾಸ್ ಕನ್ನಡದ ಸೀಸನ್ 10ಗೆ ಮಸ್ತ್ ಆಗಿ ಪ್ಲ್ಯಾನ್ ನಡೆಯುತ್ತಿದೆ. ಇದೇ ಸೆಪ್ಟೆಂಬರ್ 10ರಂದು ಬಿಗ್ ಬಾಸ್ ಪ್ರೋಮೋ ಶೂಟ್ ನಡೆಯಲಿದೆ. ಸಿನಿಮಾ ಶೂಟಿಂಗ್ ಮಧ್ಯೆ ಬಿಡುವು ಮಾಡಿಕೊಂಡು ನಟ, ನಿರೂಪಕ ಸುದೀಪ್(Kichcha Sudeep) ಭಾಗಿಯಾಗ್ತಿದ್ದಾರೆ.
ವಾಹಿನಿ ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ, ಸೆ.15ರಂದು ಬಿಗ್ ಬಾಸ್ ಪ್ರಸಾರ ಯಾವಾಗ ಎಂಬ ಬಗ್ಗೆ ಅಧಿಕೃತ ಮಾಹಿತಿ ನೀಡಲಿದ್ದಾರೆ. 10ನೇ ಸೀಸನ್ ಹೊಸ ರೂಪದಲ್ಲಿ ಹೊಸ ವೈಖರಿಯಲ್ಲಿ ಟಿವಿ ಪರದೆಗೆ ತರಲು ತಂಡ ಯೋಜನೆ ರೂಪಿಸಿಕೊಂಡಿದೆ.
ಇನ್ನೂ ಈ ಬಾರಿ ಬಿಗ್ ಬಾಸ್ ಮನೆಯ ಆಟದಲ್ಲಿ ನಾಗಿಣಿ 2 ನಟಿ ನಮ್ರತಾ ಗೌಡ, ಸೋಷಿಯಲ್ ಮೀಡಿಯಾ ಸ್ಟಾರ್ ಭೂಮಿಕಾ ಬಸವರಾಜ್, ನಟ ಸುನೀಲ್ ರಾವ್, ಕೆಜಿಎಫ್ ನಟಿ ರೂಪಾ ರಾಯಪ್ಪ ಸ್ಪರ್ಧಿಗಳಾಗಿ ಭಾಗವಹಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.