ಬೆಂಗಳೂರು, ಸೆ 4: ಸಾಮನ್ಯವಾಗಿ ಬಸ್ ಗಳಲ್ಲಿ ಒಂದೇ ಕಿರಿ ಕಿರಿ.. ಚಿಲ್ಲರೆ ಕೊಟ್ಟು ಸಹಕರಿಸಿ ಅಂತ ಕಂಡೆಕ್ಟರ್ ಹೇಳ್ತಾನೆ ಇರುತ್ತಾರೆ.. ಚಿಲ್ಲರೆ ಇದ್ದರೆ ಕೊಡೊಲ್ವಾ ಅಂತ ಪ್ಯಾಸೆಂಜರ್ ಹೇಳುತ್ತಾನೆ ಇರುತ್ತಾರೆ. ಈ ರೀತಿಯ ಸಮಸ್ಯೆಗಳು ಮೊದಲು ಚಿಕ್ಕ ಸಂಭಾಷಣೆ ಅಲ್ಲಿ ಆರಂಭವಾಗಿ ನಂತರ ಜಗಳಕ್ಕೆ ಟರ್ನ್ ಪಡೆದುಕೊಳ್ಳುವ ಉದಾಹರಣೆಗಳು ಬೇಕಾದಷ್ಟು ಸಿಗುತ್ತವೆ.
ನಿತ್ಯ ಈ ತರಹದ ಸಾಕಷ್ಟು ಪ್ರಸಂಗಗಳು ನಡೆದಿರುವ ಉದಾಹರಣೆ ಇದೆ, ಆದರೆ ಈಗ ರಾಜ್ಯ ಸರ್ಕಾರದ ಮಹತ್ವದ ಶಕ್ತಿ ಯೋಜನೆ ಜಾರಿಗೆ ಬಂದ ಮೇಲೆ ಮಹಿಳಾ ಮಣಿಯರಿಗೆ ಈ ತಲೆಬೇನೆ ತಪ್ಪಿದೆ. ಚಿಲ್ಲರೆ ವಿಚಾರಕ್ಕೆ ಮಾತ್ರ ಕಂಡಕ್ಟರ್ ಜೊತೆ ಕಿರಿಕ್ ಮಾಡಿಕೊಳ್ಳುವ ಅವಕಾಶ ಇಲ್ಲ.
ಫ್ರೀ ಫ್ರೀ ಅಂತ ಸೀಟಿಗಾಗಿ ಬಡಿದಾಡಿಕೊಳ್ಳುವ ಘಟನೆಗಳಿಗಷ್ಟೇ ಸೀಮಿತ ಆಗಿದೆ. ಇನ್ನೂ ಈ ಪ್ರಯಾಣಿಕರ ಜೊತೆ ಕಂಡಕ್ಟರ್ ಗಳ ಚಿಲ್ಲರೆ ವ್ಯಾಜ್ಯಕ್ಕೆ ಪೂರ್ಣ ವಿರಾಮ ಇಡಲು, ಸಾರಿಗೆ ಇಲಾಖೆ ಮಾಸ್ಟರ್ ಐಡಿಯಾ ಮಾಡಿದೆ, ಅದೇ ಡಿಜಿಟಲ್ ಪ್ಲಾನ್.
ಪ್ರಯಾಣಿಕರು ಇನ್ನು ಮುಂದೆ ಪೇಟಿಎಂ, ಫೋನ್‌ಪೇ, ಗೂಗಲ್ ಪೇ ಮೂಲಕ ಹಣ ಪಾವತಿಸಿ, ಟಿಕೆಟ್ ಖರೀದಿಸಬಹುದಾಗಿದೆ. ನಗದು ರಹಿತ ಪಾವತಿ ಮೂಲಕ ಗ್ರಾಹಕರು ಹಾಗೂ ಸಾರಿಗೆ ಸಿಬ್ಬಂದಿಗೆ ಇಬ್ಬರಿಗೂ ಕೂಡ ಚಿಲ್ಲರೆ ವಿಚಾರಕ್ಕೆ ಜಗಳ ಆಗದೆ ಇರೋ ರೀತಿ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಈ ಪ್ಲಾನ್ ರೂಪಿಸಲಾಗಿದೆ.
ಡಿಜಟಲೀಕರಣದಲ್ಲಿ ಸಾರಿಗೆ ಇಲಾಖೆ ಮಹತ್ವದ ಹೆಜ್ಜೆ ಇಡುತ್ತಿದ್ದು ಬಸ್ ಗಳಲ್ಲಿ ಟಿಕೆಟ್ ಪಡೆಯಲು ಇನ್ನಷ್ಟು ಅನುಕೂಲ ಸಾರಿಗೆ ಇಲಾಖೆ ಮಾಡಿ ಕೊಡುತ್ತಿದೆ. ಇನ್ಮುಂದೆ ನಿಮ್ಮ ಮೊಬೈಲ್ ನಲ್ಲಿ UPI ಪೇಮೆಂಟ್ ಅವಕಾಶ ಇದ್ದರೆ ಸಾಕು ಬಸ್ ನಲ್ಲಿ ಟಿಕೆಟ್ ಪಡೆಯಬಹುದು. UPI ಕೋಡ್ ಸ್ಕ್ಯಾನ್ ಮಾಡಿ ಟಿಕೆಟ್ ಪಡೆಯಲು ಅವಕಾಶ ಸಾರಿಗೆ ಇಲಾಖೆ ಮಾಡಿಕೊಟ್ಟಿದ್ದು ಪ್ರಯೋಗಿಕವಾಗಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬಸ್ ಗಳಲ್ಲಿ ಆರಂಭ ಮಾಡಲಾಗಿದೆ.
ಪೋನ್ ಪೇ, ಗೂಗಲ್ ಪೇ
ಪೋನ್ ಪೇ, ಗೂಗಲ್ ಪೇ ಸೇರಿದಂತೆ UPI ಮೂಲಕ ಪೇಮೆಂಟ್ ಗೆ ಅವಕಾಶ ಕಲ್ಪಿಸಿಕೊಡಲಾಗಿದೆ. ಮುಂದಿನ ದಿನಗಳಲ್ಲಿ ಬಿಎಂಟಿಸಿ, ಕೆಎಸ್ಆರ್ಟಿಸಿ, ಕೆಕೆಆರ್ಟಿಸಿಯಲ್ಲೂ ವಿಸ್ತರಿಸಲು ಇಲಾಖೆ ಚಿಂತನೆ ನಡೆಸುತ್ತಿದೆ. ಇನ್ನೂ UPI ಪೇಮೆಂಟ್ ನಿಂದಾಗುವ ಅನುಕೂಲಗಳು ಏನಪ್ಪಾ ಅಂತ ನೋಡೋದಾದ್ರೆ ನಗದು ರಹಿತ ಪಾವತಿ ಮಾಡಲು ಅನುಕೂಲಕರ.
ಮೊಬೈಲ್ ನಲ್ಲಿ UPI ಆ್ಯಪ್
ಮೊಬೈಲ್ ನಲ್ಲಿ UPI ಆ್ಯಪ್ ಇದ್ದರೆ ಸಾಕು ಬಸ್ ನಲ್ಲಿ ಸಂಚರಿಸಬಹುದು. ಮೊಬೈಲ್ UPI ಮೂಲಕ ಪೇಮೆಂಟ್ ಮಾಡಿ ಟಿಕೆಟ್ ಪಡೆಯಬಹುದು. ಎಲ್ಲಕ್ಕಿಂತ ಮುಖ್ಯವಾಗಿ ಚಿಲ್ಲರೆ ಸಮಸ್ಯೆಯಿಂದ ಮುಕ್ತಿ ಸಿಗುತ್ತೆ. ಚಿಲ್ಲರೆ ಇಲ್ಲ ಅನ್ನೋ ಪ್ರಯಾಣಿಕರು ಮತ್ತು ಕಂಡಕ್ಟರ್ ಸಮಸ್ಯೆ ದೂರವಾಗುತ್ತೆ, ಕಂಡಕ್ಟರ್ ಟಿಕೆಟ್ ನೀಡಿಲ್ಲ ಅನ್ನೋ ಭಯವಿರಲ್ಲ.
ಕಂಡಕ್ಟರ್ ಹಾಗೂ ಪ್ರಯಾಣಿಕರಿಬ್ಬರಿಗೂ ಸಮಯ ಉಳಿತಾಯ
ಕಂಡಕ್ಟರ್ ಹಾಗೂ ಪ್ರಯಾಣಿಕರಿಬ್ಬರಿಗೂ ಸಮಯ ಕೂಡ ಉಳಿತಾಯ ಆಗುತ್ತೆ. ಆದಾಯ ಸೋರಿಕೆ ತಡೆಯುವ ಪ್ಲಾನ್ ಕೂಡ ಹೌದು. ಒಟ್ಟಿನಲ್ಲಿ ಸಾರಿಗೆ ನಿಗಮ ಕೂಡ ಡಿಜಿಟಲ್ ಆಗಿ ಸಾಕಷ್ಟು ಅಭಿವೃದ್ಧಿ ಹೊಂದಿದ್ದು ಇನ್ನೋವೇಟಿವ್ ಐಡಿಯಾಗಳ ಇಂಪ್ಲಿಮೆಂಟ್ ಮಾಡುತ್ತಾ ಇದ್ದು ಒಂದೊಂದೇ ಉತ್ತಮ ಹೆಜ್ಜೆ ಇಟ್ಟು ‘ದಿ ಬೆಸ್ಟ್ ಟ್ರಾನ್ಸ್ಪೋರ್ಟ್ ಸಿಸ್ಟಂ’ ಅಂತ ಅನ್ನಿಸಿಕೊಳ್ಳುವತ್ತ ಸಾಗುತ್ತಾ ಇದೆ.