ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಅವರು ಸನಾತನ ಧರ್ಮ ನಿರ್ಮೂಲನೆ ಆಗಬೇಕಿದೆ, ಸನಾತನ ಧರ್ಮ ಅನ್ನುವುದು ಮಲೇರಿಯಾ, ಡೆಂಗ್ಯೂ ಇದ್ದ ಹಾಗೆ ಎಂದು ಹೇಳಿಕೆ ನೀಡಿದ್ದಾರೆ. ಅವರು ನೀಡಿರುವ ಹೇಳಿಕೆಗೆ ಮಾಜಿ ಐಪಿಎಸ್, ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ಅವರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಡಿಎಂಕೆ ಪಕ್ಷದ ವಿರುದ್ಧವೂ ವಾಗ್ದಾಳಿ ನಡೆಸಿದ ಅವರು, ಡಿ ಎಂದರೆ ಡೆಂಗ್ಯೂ, ಎಂ ಎಂದರೆ ಮಲೇರಿಯಾ, ಕೆ ಅಂದರೆ ಕೊಸು (ಸೊಳ್ಳೆ) ಎಂದು ಟ್ವೀಟ್ ಮಾಡಿದ್ದಾರೆ.
ಅವರು ಮತ್ತು ಬರೆಯುತ್ತಾ “ತಮಿಳುನಾಡಿನಿಂದ ಏನಾದರೂ ನಿರ್ಮೂಲನೆ ಬೇಕಾದರೆ, ಅದು ಡಿಎಂಕೆ. ಮುಂದೆ, ಜನರು ಈ ಮಾರಣಾಂತಿಕ ಕಾಯಿಲೆಗಳನ್ನು ಡಿಎಂಕೆಯೊಂದಿಗೆ ಸಂಯೋಜಿಸುತ್ತಾರೆ ಎಂಬುದು ನಮಗೆ ಖಚಿತವಾಗಿದೆ” ಎಂದಿದ್ದಾರೆ ಅಣ್ಣಾಮಲೈ.