ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ 10ನೇ ಸೀಸನ್‌ನ ಎರಡನೇ ಪ್ರೋಮೋ ಬಿಡುಗಡೆಯಾಗಿದೆ. ಕಿಚ್ಚ ಸುದೀಪ್ ಬ್ಲಾಕ್ ಸೂಟ್‌ನಲ್ಲಿ ಕಾಣಸಿಕೊಂಡಿದ್ದು, ಬನ್ನಿ ಎಲ್ಲರೂ ಸೇರಿ ಹಬ್ಬ ಮಾಡೋಣ ಎಂಬ ಸುಳಿವನ್ನೂ ನೀಡಿದ್ದಾರೆ.
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಲಿರುವ ಬಿಗ್ ರಿಯಾಲಿಟಿ ಶೋ. ಬಿಗ್‌ಬಾಸ್ ಸೀಸನ್ 10 ಶೀಘ್ರದಲ್ಲಿ ಶುರುವಾಗಲಿದೆ ಎಂಬಂತೆ ವಾಹಿನಿ ಈ ಹಿಂದೆಯೇ ಕಿರು ಪ್ರೋಮೋ ರಿಲೀಸ್ ಮಾಡಿತ್ತು. ಆದರೆ, ಯಾವಾಗ ಎಂಬ ಪ್ರಶ್ನೆಯನ್ನು ಹಾಗೆಯೇ ಉಳಿಸಿತ್ತು.
ಇದೀಗ ಒಂದು ಹೆಜ್ಜೆ ಮುಂದೆ ಹೋಗಿ ಕಿಚ್ಚ ಸುದೀಪ್ ಇರುವ ಪ್ರೋಮೋ ಝಲಕ್ ರಿಲೀಸ್ ಮಾಡಿದೆ. ಸೆ. 2ರ ಸುದೀಪ್ ಬರ್ತ್‌ಡೇ ಪ್ರಯುಕ್ತ ಬಿಡುಗಡೆಯಾಗಿದ್ದ ಮೊದಲ ಪ್ರೋಮೋದಲ್ಲಿ ಶೋನ ನಿರೂಪಕ ಕಿಚ್ಚ ಕಾಣಿಸಿರಲಿಲ್ಲ. ಇದೀಗ ಸುದೀಪ್ ಅವತಾರವನ್ನು ವಾಹಿನಿ ರಿವೀಲ್ ಮಾಡಿದೆ. ವಿಶೇಷ ಪ್ರೋಮೋ ಮೂಲಕ ಹಬ್ಬ ಮಾಡೋಣ ಬನ್ನಿ ಎಂದು ಕಿಚ್ಚ ಸುದೀಪ್ ಆಹ್ವಾನಿಸಿದ್ದಾರೆ. ಈ ಮೂಲಕ ಬಿಗ್‌ಬಾಸ್ ಅಭಿಮಾನಿಗಳಿಗೆ ಗುಡ್‌ನ್ಯೂಸ್ ನೀಡಿದ್ದಾರೆ.
ಬಿಡುಗೆಯಾಗಿರುವ ಪ್ರೋಮೋದಲ್ಲಿ ‘ಏನ್ ಸರ್ ಹೊಸ ಫೋನಾ?” ಎಂದು ಆಫೀಸ್‌ನ ಸೆಕ್ಯೂರಿಟಿಗೆ ಕೇಳುತ್ತಾನೆ ಯುವಕ. ಅದಕ್ಕೆ ಉತ್ತರವೆಂಬಂತೆ “ಹೌದು ಸರ್, ಮಗ ಕೊಡಿಸಿದ್ದು ಹಬ್ಬಕ್ಕೆ” ಎನ್ನುತ್ತಾನೆ.
ಮತ್ತೊಂದೆಡೆ ಚೆಸ್ ಬೋರ್ಡ್ ಮುಂದೆ ಬ್ಲಾಕ್ ಸೂಟ್‌ನಲ್ಲಿ ಕಿಚ್ಚ ಕಾಣಿಸಿಕೊಂಡಿದ್ದಾರೆ’. ಅದೇ ಯುವಕ ಆಟೋ ಏರಿ ಮನೆ ಕಡೆ ಹೋಗುವಾಗ, ಆಟೋ ಡ್ರೈವರ್ ಕಡೆಯಿಂದ ಹಬ್ಬ ಶುರುವಾಗುತ್ತಿದೆ ಎಂಬ ಉತ್ತರ ಸಿಗುತ್ತದೆ. ಮನೆ ಬಳಿ ಬಂದರೆ, ಇಡೀ ಗಲ್ಲಿ ಹಬ್ಬಕ್ಕೆ ತಯಾರಿ ನಡೆಸಿದೆ. ಆಗಲೂ ಗಲಿಬಿಲಿಗೊಳ್ಳುವ ಆತನಿಗೆ, ಏನಿದು ಎಂಬ ಪ್ರಶ್ನೆ ಕಾಡುತ್ತದೆ.
ಇದು ನೂರು ದಿನದ ಹಬ್ಬ ಎಂದು ಮತ್ತೊಬ್ಬ ಹೇಳುತ್ತಾನೆ. ಅಷ್ಟೊತ್ತಿಗೆ ಬಿಗ್ ಬಾಸ್ ಸೀಸನ್ 10 ಲುಕ್ ಅನಾವರಣವಾಗುತ್ತದೆ. ಸುದೀಪ್ ಕಣ್ಣು ಮಿಟುಕಿಸಿ, ಹ್ಯಾಪಿ ಬಿಗ್‌ಬಾಸ್ ಎನ್ನುತ್ತಾರೆ. ಈ ಮೂಲಕ ಊರ ಹಬ್ಬಕ್ಕೆ ಕಲರ್ಸ್ ಕನ್ನಡ ವಾಹಿನಿ. ವೀಕ್ಷಕರಿಂದಲೇ ಚಾಲನೆ ಕೊಡಿಸಿದೆ.
ಎಂದಿನಂತೆ ಬಿಡದಿ ಬಳಿ ಇರುವ ಇನ್ನೋವೇಟಿವ್ ಫಿಲಂ ಸಿಟಿಯಲ್ಲಿ ಶೋಗೆ ದೊಡ್ಡ ಸೆಟ್ ಹಾಕಲಾಗಿದೆ.
ಇನ್ನು ಬಿಗ್‌ಬಾಸ್ ಕನ್ನಡ ಸೀಸನ್ 10 ಗೆ ಈ ಬಾರಿ ಕಿರುತೆರೆ ನಟಿ ನಮ್ರತಾ ಗೌಡ, ಹುಚ್ಚ ಸಿನೆಮಾದ ನಟಿ ರೇಖಾ, ನಟಿ ಆಶಾ ಭಟ್, ರೀಲ್ಸ್ ನಲ್ಲಿ ಫೇಮಸ್ ಆಗಿರುವ ಭೂಮಿಕಾ ಬಸವರಾಜ್, ಶನಿ ಸೀರಿಯಲ್ ಮುಖಾಂತರ ಫೇಮಸ್ ಆಗಿರುವ ಸುನೀಲ್, ಅಗ್ನಿಸಾಕ್ಷಿ ನಟ ರಾಜೇಶ್ ಧ್ರುವ, ಸೋಷಿಯಲ್ ಮಿಡಿಯಾದಲ್ಲಿ ಫೇಮಸ್ ಆಗಿರುವ ವರ್ಷ ಕಾವೇರಿ, ಇನ್ನು ಗಿಚ್ಚಿಗಿಲಿಗಿಲಿಯಿಂದ ಯಾವುದಾದರೂ ಒಬ್ಬ ನಟ ಬರಬಹುದು ಎಂದು ಹೇಳಲಾಗಿದೆ.
ಈ ಸಾಲಿನಲ್ಲಿ ಚಂದ್ರಫ್ರಭ, ಪ್ರಶಾಂತ್, ದಿವ್ಯಾ ವಸಂತ, ಜಾಹ್ನವಿ ಅವರಲ್ಲಿ ಯಾರಾದರೂ ಒಬ್ಬರಿಗೆ ಅವಕಾಶ ಸಿಗಲಿದೆ ಎಂದು ಹೇಳಲಾಗುತ್ತಿದೆ. ಏನೇ ಆದರೂ ಆಡಿಶನ್ ನಡೆದು ಶೋ ಆರಂಭವಾದ ಬಳಿಕ ದೊಡ್ಮನೆಗೆ ಯಾರೆಲ್ಲ ಎಂಟ್ರಿ ಕೊಡುತ್ತಾರೆ ಎಂಬ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ.
ಬಿಗ್ ಬಾಸ್ ಗಾಗಿ ವೀಕ್ಷಕರು ಕುತೂಹಲದಿಂದ ಕಾಯುವಂತೆ ಮಾಡಿದ್ದಾರೆ ಕಲರ್ಸ್ ಕನ್ನಡ ವಾಹಿನಿ