ಬಿಗ್‌ಬಾಸ್ ಸೀಸನ್-10ನ ಕ್ರೇಜ್ ಈಗಾಗಲೇ ಆರಂಭವಾಗಿದೆ. ಅದಕ್ಕೆ ಪೂರಕವಾಗಿ ಬಿಗ್‌ಬಾಸ್ ಕಡೆಯಿಂದ ಮತ್ತೂಂದು ಪ್ರೋಮೋ ರಿಲೀಸ್ ಆಗಿದೆ. ಈ ಪ್ರೋಮೋದಲ್ಲಿ ಸುದೀಪ್ ಕೂಡಾ ಕಾಣಿಸಿಕೊಂಡಿದ್ದಾರೆ. ಅಂದರೆ ಈ ಸಲವೂ ಅವರೇ ನಿರೂಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಸೂಚಿಸಿದ್ದಾರ.
ಇದೊಂದು ಊರ ಹಬ್ಬ ಎಂಬಂತೆ ಬಿಗ್‌ಬಾಸ್ ಅನ್ನು ಟೀಸರ್‌ನಲ್ಲಿ ಬಿಂಬಿಸಲಾಗಿದೆ. ಅಲ್ಲದೇ ಈ ಬಾರಿ “ಹ್ಯಾಪಿ ಬಿಗ್‌ಬಾಸ್’ ಎಂದು ಹೇಳಲಾಗಿದೆ. ಇದರಿಂದಾಗಿ ಜನರಲ್ಲಿ ಬಿಗ್‌ಬಾಸ್ ಸೀಸನ್ 10 ಕುತೂಹಲ ಕೂಡಾ ಹೆಚ್ಚಾಗಿದೆಯೆಂದು ಹೇಳಬಹುದಾಗಿದೆ.
ಅಂದಹಾಗೆ, ಇಷ್ಟು ಸೀಸನ್‌ಗಳಲ್ಲಿ ಬಿಗ್‌ಬಾಸ್ ನಡೆಯುತಿದ್ದು ಬಿಡದಿ ಬಳಿಯ ಇನ್ನೋವೇಟಿವ್ ಫಿಲಂ ಸಿಟಿಯಲ್ಲಿ. ಆದರೆ, ಈ ಬಾರಿ ತಾವರೆಕೆರೆ ಹಾಗೂ ದೊಡ್ಡ ಆಲದ ಮರ ಬಳಿ ಇರುವ ಜಾಗದಲ್ಲಿ ಬಿಗ್‌ಬಾಸ್ ಮನೆಯನ್ನು ಸಿದ್ಧಪಡಿಸಲಾಗುತ್ತಿದೆಯೆಂದು ಹೇಳಲಾಗುತ್ತಿದೆ.