ನಟಿ ಹಾಗೂ ಚಲನಚಿತ್ರ ನಿರ್ಮಾಪಕಿಯಾದ ಪೂಜಾ ಭಟ್ ಅವರು ಮತ್ತೆ ಪ್ರಚಾರದಲ್ಲಿ ಉಳಿಯಲು ಬಯಸಿದ್ದಾರೆ ಅವರು ಈಗ ಬಿಗ್ ಬಾಸ್ OTT 2 ನಲ್ಲಿ ಭಾಗವಹಿಸಿದ ನಂತರ ಅವರ ಅನುಯಾಯಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿವೆ.
ಸಿದ್ಧಾರ್ಥ್ ಕಣ್ಣನ್ ಅವರೊಂದಿಗಿನ ಇತ್ತೀಚಿನ ಸಂದರ್ಶನದಲ್ಲಿ ಮಾತನಾಡಿರುವ ಪೂಜಾ ಭಟ್ , ತಾನು ಚಿಕ್ಕ ವಯಸ್ಸಿನಲ್ಲಿ ನಟನೆಯನ್ನು ತ್ಯಜಿಸಿದರ ಬಗ್ಗೆ ಮಾತನಾಡಿದ್ದಾರೆ. ಕೇವಲ 17 ನೇ ವಯಸ್ಸಿನಲ್ಲಿ ನಟನೆಗೆ ಬಂದ ಪೂಜಾಳ ಚೊಚ್ಚಲ ಚಿತ್ರ ಡ್ಯಾಡಿಯನ್ನು ಅವರ ತಂದೆ ಮಹೇಶ್ ಭಟ್ ನಿರ್ದೇಶಿಸಿದ್ದರು.
ಪೂಜಾ ನಟನೆಯ ಡ್ಯಾಡಿ, ದಿಲ್ ಹೈ ಕಿ ಮಾನ್ ತಾ ನಹಿ ನಂತರ ಸಡಕ್ ಹ್ಯಾಟ್ರಿಕ್ ಆಗಿತ್ತು. “19ನೇ ವಯಸ್ಸಿಗೆ ಸೂಪರ್ ಸ್ಟಾರ್ ಆಗಿದ್ದ ನಾನು 24ನೇ ವಯಸ್ಸಿಗೆ ಇಂಡಸ್ಟ್ರಿ ಮುಗಿಯಿತು ಅಂದಾಗ ಯೇ ಹೈ ದುನಿಯಾ ಅಂದೆ. 24 ನೇ ವಯಸ್ಸಿನಲ್ಲಿ ಹೆಚ್ಚಿನ ಜನರು ಆಗಷ್ಟೇ ತಮ್ಮ ಕೆರಿಯರ್ ಪ್ರಾರಂಭಿಸುತ್ತಿರುವಾಗ, ನೀವು ಸ್ಟಾರ್ಡಮ್ನ ಉತ್ತಂಗವನ್ನು ತಲುಪಿದ್ದೀರಿ ನಿನ್ನ ಕೆಲಸ ಮುಗಿಯಿತು ಎಂದು ದೂರ ಎಸೆದರು” ಎಂದು ಹೇಳಿದ್ದಾರೆ.
ಸಂದರ್ಶನದ ವೇಳೆ ಪೂಜಾ ಅವರು 25 ನೇ ವಯಸ್ಸಿನಲ್ಲಿ, ನಾನು ನನ್ನ ಸ್ವಂತ ನಿರ್ಮಾಣ ಸಂಸ್ಥೆಯನ್ನು ಪ್ರಾರಂಭಿಸಿದೆ. ನಾನು ನನ್ನ ಮೊದಲ ರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದಿದ್ದೇನೆ, ನನ್ನ ಕೆಲಸದಲ್ಲಿ ನಾನು ಆತ್ಮತೃಪ್ತಿಯ ಭಾವನೆಯನ್ನು ಹೊಂದಿದ್ದೇನೆ. ಆ ಚಿತ್ರಕ್ಕೆ ನನಗೆ ರಾಷ್ಟ್ರೀಯ ಪ್ರಶಸ್ತಿ ಸಿಕ್ಕಿತು. ನಂತರ ನಾನು ಕಾಜೋಲ್ ಜೊತೆಯಾಗಿ ದುಷ್ಮನ್ ಸಿನಿಮಾ ಮಾಡಿದೆ. ನಂತರ ನಾನು ಝಖ್ಮ್ ಚಿತ್ರವನ್ನು ನಿರ್ದೇಶಿಸಿದೆ ಎಂದು ಅವರು ಹೇಳಿದರು.
ಇದಲ್ಲದೇ ಕೇವಲ ಸಿನಿಮಾ ನಿರ್ಮಾಣ ಮತ್ತು ನಿರ್ದೇಶನ ಮಾಡುತ್ತಿದ್ದು 21 ವರ್ಷಗಳಿಂದ ಕ್ಯಾಮೆರಾ ಎದುರಿಸಿರಲಿಲ್ಲ ಎಂದು ಪೂಜಾ ಭಟ್ ಹೇಳಿದ್ದಾರೆ. ಅವರ ಪ್ರಕಾರ, ಅವರು ತಮ್ಮ ಸ್ಟಾರ್ಡಮ್ ಯುಗ ಮುಗಿದಿದೆ ಮತ್ತು ಚಲನಚಿತ್ರ ನಿರ್ಮಾಪಕರಾಗಿ ಜೀವನದ ಹೊಸ ಹಂತವನ್ನು ಪ್ರವೇಶಿಸಿದ್ದಾರೆ ಎಂಬ ಅಂಶವನ್ನು ಒಪ್ಪಿಕೊಂಡಿದ್ದಾರೆ. ನಿರ್ಮಾಪಕಿಯಾಗಿ ಪೂಜಾ ಅವರ ಕೊನೆಯ ಚಿತ್ರ ಜಿಸ್ಮ್ 2, ಇದು ಸನ್ನಿ ಲಿಯೋನ್ ಅವರ ಚೊಚ್ಚಲ ಚಿತ್ರವಾಗಿತ್ತು.