ಸ್ಯಾಂಡಲ್‌ವುಡ್ ನಟಿ ತೇಜಸ್ವಿನಿ ಪ್ರಕಾಶ್ ಅವರು ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಅವರ ಮನೆಗೆ ಹೊಸ ಅತಿಥಿ ಬರುವ ನೀರೀಕ್ಷೆಯಲ್ಲಿರುವ ಸಂತೋಷದ ವಿಷಯವನ್ನು ನಟಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಪಣಿ ವರ್ಮಾ ಜೊತೆ ತೇಜಸ್ವಿನಿ ಕಳೆದ ವರ್ಷ ಮಾರ್ಚ್ 20ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಬೆಂಗಳೂರಿನಲ್ಲಿ ಅದ್ದೂರಿಯಾಗಿ ಮದುವೆ ಜರುಗಿತ್ತು. ಮದುವೆಯಾಗಿ ಈಗಾಗಲೇ ಒಂದು ವರ್ಷ ಕಳೆದಿದ್ದು ಇದೀಗ ಗುಡ್ ನ್ಯೂಸ್ ಕೊಟ್ಟಿದ್ದಾರೆ.
2017ರಲ್ಲಿ ಕನ್ನಡದ ಬಿಗ್ ಬಾಸ್ ಶೋನಲ್ಲಿಯೂ ಅವರು ಕಾಣಿಸಿಕೊಂಡಿದ್ದರು. ಬಳಿಕ ‘ನನ್ನರಸಿ ರಾಧೆ’ ಸೀರಿಯಲ್‌ನಲ್ಲಿ ಲಾವಣ್ಯ ಎಂಬ ಪಾತ್ರದಲ್ಲಿ ಖಳನಾಯಕಿಯಾಗಿ ಕೂಡ ನಟಿಸಿದ್ದರು. ಈ ಸೀರಿಯಲ್ ತೇಜಸ್ವಿನಿ ನಟಿಸಿದ ಕೊನೆಯ ಪ್ರಾಜೆಕ್ಟ್ ಆಗಿದೆ.
ಮಸಣದ ಮಕ್ಕಳು, ಗಜ, ಈ ಪ್ರೀತಿ ಏಕೆ ಭೂಮಿ ಮೇಲಿದೆ, ಸವಿ ಸವಿ ನೆನಪು, ಬಂಧು ಬಳಗ, ಅರಮನೆ, ಜೊತೆಯಾಗಿ ಹಿತವಾಗಿ, ಸೇರಿದಂತೆ ಹಲವು ಸಿನಿಮಾಗಳಲ್ಲಿ ತೇಜಸ್ವಿನಿ ನಟಿಸಿದ್ದಾರೆ.
2017ರಲ್ಲಿ ಕನ್ನಡದ ಬಿಗ್ ಬಾಸ್ ಶೋನಲ್ಲಿಯೂ ಅವರು ಕಾಣಿಸಿಕೊಂಡಿದ್ದರು. ಬಳಿಕ ‘ನನ್ನರಸಿ ರಾಧೆ’ ಸೀರಿಯಲ್‌ನಲ್ಲಿ ಲಾವಣ್ಯ ಎಂಬ ಪಾತ್ರದಲ್ಲಿ ಖಳನಾಯಕಿಯಾಗಿ ಕೂಡ ನಟಿಸಿದ್ದರು. ಈ ಸೀರಿಯಲ್ ತೇಜಸ್ವಿನಿ ನಟಿಸಿದ ಕೊನೆಯ ಪ್ರಾಜೆಕ್ಟ್ ಆಗಿದೆ.