ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಯಾಗಿದೆ ‘ಗೀತಾ’. ಭವ್ಯಾ ಗೌಡ ಮತ್ತು ಧನುಷ್ …ಗೀತಾ ಮತ್ತು ವಿಜಯ್ ಪಾತ್ರದಲ್ಲಿ ಮಿಂಚುತ್ತಿದ್ದಾರೆ ಎನ್ನುವುದು ಎಲ್ಲರಿಗು ತಿಳಿದ ವಿಷಯವೇ.
ಆಫ್ ಸ್ಕ್ರೀನ್ನಲ್ಲಿ ಸೂಪರ್ ಕ್ಯೂಟ್ ಆಗಿ ಕಾಣಿಸುವ ಈ ಜೋಡಿ ರಿಯಲ್ ಲೈಫ್ನಲ್ಲೂ ಡೇಟಿಂಗ್ ಮತ್ತು ಪ್ರೀತಿ ಆಂತ ಓಡಾಡುತ್ತಿದ್ದಾರೆ ಎನ್ನುವ ಸುದ್ದಿ ಆಗಾಗ ಕೇಳಿ ಬರುತ್ತಿದೆ.
ಈ ಗಾಸಿಪ್ ಗೆ ಪ್ರತಿಕ್ರಿಯಿಸಿದ ಭವ್ಯಾ ಗೌಡ ಎಲ್ಲೇ ಹೋದರೂ ನಾವಿಬ್ಬರೂ ಜಸ್ಟ್ ಫ್ರೆಂಡ್ಸ್ ಎಂದು ಪದೇ ಪದೇ ಸ್ಪಷ್ಟನೆ ಕೊಟ್ಟರೂ ಯಾರೂ ನಂಬುತ್ತಿಲ್ಲ ಎಂದು ಹೇಳಿದರು.
‘ನಾನು ಪಾರದರ್ಶಕವಾಗಿರಬೇಕು, ಓಪನ್ ಬುಕ್ ಆಗಿರಬೇಕು ಎಂಬುದು ನನ್ನ ಇಚ್ಛೆ. ಕದ್ದು ಮುಚ್ಚಿ ಪ್ರೀತಿ ಮಾಡೋದು ನನಗೆ ಇಷ್ಟವಿಲ್ಲ’ ಎಂದು ಭವ್ಯಾ ಹೇಳಿದ್ದಾರೆ.
‘ನಾನು ಯಾರೊಂದಿಗಾದರು ಡೇಟಿಂಗ್ ಮಾಡ್ತಿದ್ದೀನಿ ಅಂದ್ರೆ ಇವರನ್ನೇ ಡೇಟಿಂಗ್ ಮಾಡುತ್ತಿದ್ದೀನಿ ಅಂತ ಬಾಯಿ ಬಿಟ್ಟು ಹೇಳುವಷ್ಟು ಪ್ರಭುದ್ಧತೆ ನನಗಿದೆ. ನಾನು ಮತ್ತು ಧನುಷ್ ಡೇಟಿಂಗ್ ಮಾಡುತ್ತಿಲ್ಲ. ನಾವು ಜಸ್ಟ್ ಫ್ರೆಂಡ್ಸ್ ಅಷ್ಟೇ. ಇದು 102% ನಿಜ” ಎಂದು ಸ್ಪಷ್ಟನೆ ಕೊಟ್ಟಿದ್ದಾರೆ ಅವರು.