ಅಕ್ಟೋಬರ್ 8ರಿಂದ ‘ಬಿಗ್ ಬಾಸ್ ಕನ್ನಡ ಸೀಸನ್ 10’ ಶೋ ಶುರುವಾಗಲಿದೆ ಕಲರ್ಸ್ ಕನ್ನಡ ವಾಹಿನಿಯ ‘ಅನುಬಂಧ 2023’ ಅವಾರ್ಡ್ಸ್ ಸಮಾರಂಭದಲ್ಲಿ ಹೇಳಿದ್ದಾರೆ. ಹಾಗಾದರೆ ಬಿಗ್ ಬಾಸ್ ಮನೆಯೊಳಗಡೆ ಯಾರೆಲ್ಲಾ ಹೋಗಲಿದ್ದಾರೆ ಎಂಬ ಪ್ರಶ್ನೆ ಏಳೋದು ಸಹಜ. ಮೊದಲ ಬಾರಿಗೆ ಬಿಗ್ ಬಾಸ್ ಮನೆ ಪ್ರವೇಶ ಮಾಡುವ ಮೊದಲ ಸ್ಪರ್ಧಿಯನ್ನು ಕಲರ್ಸ್ ವಾಹಿನಿ ರಿವೀಲ್ ಮಾಡಿದೆ.
ವಾಹಿನಿ ನೀಡಿದ ಹೇಳಿಕೆ ಏನು?
” ‘ಬೆಸ್ಟ್ ರೇಟೆಡ್ ಚಲನಚಿತ್ರ – 777 ಚಾರ್ಲಿ’. ಬಿಗ್ ಬಾಸ್ ಕನ್ನಡ ಸೀಸನ್ 10 ಮೊದಲ ಕಂಟೆಸ್ಟೆಂಟ್ ಆಗಿ ಎಂಟ್ರಿ ಕೊಡ್ತಿರೋ ಚಾರ್ಲಿ!! ಅಭಿನಂದನೆಗಳು ಚಾರ್ಲಿ” ಎಂದು ಕಲರ್ಸ್ ಕನ್ನಡ ವಾಹಿನಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.
ಬಿಗ್ ಬಾಸ್ ಆಟ ಮುಗಿಯುವವರೆಗೆ ಚಾರ್ಲಿ ಆ ಮನೆಯಲ್ಲಿ ಇರತ್ತಾ ಇಲ್ಲವಾ ಅನ್ನೋದು ಸಂದೇಹ ಇದೆ, ಆಗಾಗ ಅದು ದೊಡ್ಮನೆಯೊಳಗಡೆ ಎಂಟ್ರಿ ಕೊಡಬಹುದು. ಈ ಬಗ್ಗೆ ಬಿಗ್ ಬಾಸ್ ತಂಡವೇ ಹೆಚ್ಚಿನ ಮಾಹಿತಿ ನೀಡಬೇಕಿದೆ.
ಈ ಬಾರಿ 100 ದಿನಗಳ ಕಾಲ ಬಿಗ್ ಬಾಸ್ ಶೋ ನಡೆಯಲಿದೆ. ಈಗಾಗಲೇ ವಾಹಿನಿ ಪ್ರೋಮೋ ರಿಲೀಸ್ ಮಾಡಿದ್ದು, ಹ್ಯಾಪಿ ಬಿಗ್ ಬಾಸ್ ಎಂದು ಹೇಳಿಕೆ ನೀಡಿದೆ.
ಪ್ರತಿ ಸಲ ಇನೋವೇಟಿವ್ ಫಿಲ್ಮ್ ಸಿಟಿ ಬಳಿ ಬಿಗ್ ಬಾಸ್ ಶೋ ನಡೆಸಲಾಗುತ್ತಿದ್ದು, ಈ ಬಾರಿ ಮಾತ್ರ ತಾವರೆಕೆರೆ, ದೊಡ್ಡ ಆಲದ ಮರದ ಮಧ್ಯೆ ಇರುವ ಪ್ರದೇಶದಲ್ಲಿ ‘ಬಿಗ್ ಬಾಸ್ ಕನ್ನಡ ಸೀಸನ್ 10’ ಶೋ ನಡೆಸಲಾಗುವುದಂತೆ. ಹಾಗಾಗಿ ದೊಡ್ಮನೆ ವಿಭಿನ್ನವಾಗಿರುವುದಂತೂ ಸತ್ಯ. ಈ ಬಾರಿ ಯಾವ ಥೀಮ್ನಲ್ಲಿ ಬಿಗ್ ಬಾಸ್ ಮನೆ ಇರುವುದು ಎಂದು ಕಾದು ನೋಡಬೇಕಿದೆ. ಎಂದಿನಂತೆ ಕಿಚ್ಚ ಸುದೀಪ್ ಅವರು ಈ ಶೋನ ನಿರೂಪಣೆ ಮಾಡಲಿದ್ದಾರೆ.