ಕಾವೇರಿಗಾಗಿ ಇಡೀ ಬೆಂಗಳೂರು ನಗರ ನಾಳೆ ಸ್ತಬ್ಧವಾಗಲಿದೆ. 150ಕ್ಕೂ ಹೆಚ್ಚು ಸಂಘಟನೆಗಳಿಂದ ಬೆಂಗಳೂರು ಬಂದ್ಗೆ ಕರೆಕೊಟ್ಟಿದೆ. ಖಾಸಗಿ ಸಾರಿಗೆ ಒಕ್ಕೂಟದ 32 ಸಂಘಟನೆಗಳಿಂದಲೂ ಸಹ ಬೆಂಗಳೂರು ಬಂದ್ ಗೆ ಬೆಂಬಲ ಸಿಕ್ಕಿದೆ.
ನಾಳೆ ಬೆಂಗಳೂರಿನಲ್ಲಿ ನಿಮಗೆ ಏನೂ ಸಿಗೋದಿಲ್ಲ, ಬಸ್ ಬರಲ್ಲ, ಆಟೋ ಓಡಲ್ಲ, ಟ್ಯಾಕ್ಸಿನೂ ಸಿಗಲ್ಲ. ಅಂಗಡಿಗಳಿರಲ್ಲ, ಉದ್ಯಮಗಳಿರಲ್ಲ, ಮಾರ್ಕೆಟ್ ಇರಲ್ಲ. ಚಿಕ್ಕಪೇಟೆಯಲ್ಲಿ 3000 ಅಂಗಡಿಗಳೂ ಓಪನ್ ಆಗಲ್ಲ.
ನಾಳಿನ ಬೆಂಗಳೂರು ಬಂದ್ ಕುರಿತು ಇಂದು ಸಭೆ : ನಾಳಿನ ಬೆಂಗಳೂರು ಬಂದ್ ಕುರಿತು ಇಂದು ಸಭೆ ನಡೆಯಲಿದೆ. ಫ್ರೀಡಂಪಾರ್ಕ್ನಲ್ಲಿ ಹೋರಾಟಗಾರರ ಮೀಟಿಂಗ್ ನಡೆಯಲಿದ್ದು, ಸಭೆಯಲ್ಲಿ 150ಕ್ಕೂ ಹೆಚ್ಚು ಹಲವು ಸಂಘಟನೆಗಳು ಭಾಗಿಯಾಗಲಿದೆ. ನಾಳಿನ ಬಂದ್ ರೂಪುರೇಷೆ ಬಗ್ಗೆ ಸಂಘಟನೆಗಳಿಂದ ಚರ್ಚೆ ನಡೆಯುತ್ತದೆ.
ಕಾವೇರಿ ಬಂದ್ಗೆ BMTC ನೌಕರರ ಸಂಘದಿಂದ ಬೆಂಬಲ : ಬೆಂಗಳೂರಿನಲ್ಲಿ ಬಿ.ಎಂ.ಟಿ.ಸಿ ಬಸ್ ಓಡಾಡೋಲ್ಲ , ಡಿಪೋದಿಂದ ಯಾರೂ ಬಸ್ ಹೊರಗೆ ತೆಗೆಯೋದಿಲ್ಲ ಎಂದು ನೌಕರರ ಸಂಘದ ಅಧ್ಯಕ್ಷ ಅನಂತ ಸುಬ್ಬರಾವ್ ಘೋಷಣೆ ಮಾಡಿದ್ದಾರೆ. ಓಲಾ, ಊಬರ್ ಸೇರಿ ಎಲ್ಲಾ ಟ್ಯಾಕ್ಸಿ ಸಂಘಟನೆಗಳೂ ಕೂಡಾಬಂದ್ಗೆ ಸಾಥ್ ನೀಡಿದೆ.
27ಕ್ಕೂ ಹೆಚ್ಚು ಖಾಸಗಿ ಸಾರಿಗೆ ಸಂಘಟನೆಗಳಿಂದ ಬಂದ್ ಗೆ ಬೆಂಬಲ ನೀಡಿದೆ.