ಕರ್ನಾಟಕ ಬಂದ್ನಿಂದಾಗಿ ಸರ್ಕಾರದ ಬೊಕ್ಕಸಕ್ಕೆ ಕೋಟಿ-ಕೋಟಿ ನಷ್ಟವಾಗಿದೆ ಎಂದು ಹೇಳಲಾಗುತ್ತಿದೆ, ವಾಣಿಜ್ಯ ಉದ್ಯಮಗಳು ಮುಚ್ಚಿದ್ದರಿಂದ ಈ ನಷ್ಟವುಂಟಾಗಿದೆಯಂತೆ. ಎಫ್ಕೆಸಿಸಿಐ 5000 ಕೋಟಿ ನಷ್ಟ ಅಂದಾಜಿಸಿದೆ. ಸರ್ಕಾರ 400 ಕೋಟಿಗೂ ಅಧಿಕ ತೆರಿಗೆ ನಷ್ಟ ಅನುಭವಿಸಿದೆ.
ವ್ಯಾಪಾರ, ವಾಣಿಜ್ಯ ಮತ್ತು ಕೈಗಾರಿಕಾ ವಲಯ ಕರ್ನಾಟಕ ಬಂದ್ ಗೆ ಬೆಂಬಲ ನೀಡಿತ್ತು. ಶೇಕಡಾ 70ರಷ್ಟು ಉದ್ಯಮಗಳು ಬಾಗಿಲು ಮುಚ್ಚಿದ್ದವು. ಬೆಂಗಳೂರಿನಲ್ಲೇ 30 ಸಾವಿರ ಹೋಟೆಲ್ ಬಂದ್ ಆಗಿದ್ದವು, ರೆಸ್ಟೋರೆಂಟ್, ಬೇಕರಿ, ಸ್ವೀಟ್ ಸ್ಟಾಲ್, ಐಸ್ಕ್ರೀಮ್ ಪಾರ್ಲರ್ ಮುಚ್ಚಿದ್ದವು. ಕೈಗಾರಿಕೆಗಳು, ಖಾಸಗಿ ಕಂಪನಿಗಳಿಗೆ ರಜೆ ಘೋಷಿಸಲಾಗಿತ್ತು. ಇದರಿಂದಾಗಿ ಸರ್ಕಾರ ಮತ್ತು ಉದ್ಯಮ ಎರಡೂ ನಷ್ಟ ಅನುಭವಿಸಿವೆ.