ದೇಶದಲ್ಲಿ ಕಿಡಿಗೇಡಿಗಳು ಮತ್ತೆ ಅಟ್ಟಹಾಸ ಮೆರೆಯಲು ಶುರು ಮಾಡಿದ್ದಾರೆ. ವಂದೇ ಭಾರತ್ ಎಕ್ಸ್ಪ್ರೆಸ್ ರೈಲನ್ನು ಉರುಳಿಸಿ ಭಾರೀ ಅನಾಹುತ ಸೃಷ್ಟಿಸಲು ಹೂಡಿದ್ದ ಸಂಚೊಂದು ಬಯಲಾಗಿದೆ.
ಉದಯಪುರ-ಜೈಪುರ ವಂದೇ ಭಾರತ್ ಎಕ್ಸ್ಪ್ರೆಸ್ ಅದರ ಲೋಕೋ ಪೈಲಟ್ ನ ಸಮಯಪ್ರಜ್ಞೆಯಿಂದ ಭಾರಿ ಅಪಘಾತದಿಂದ ಪಾರಾಗಿದೆ. ಗಂಗ್ರಾರ್-ಸೋನಿಯಾನಾ ನಡುವಿನ ವಂದೇ ಭಾರತ್ ರೈಲಿನ ಮಾರ್ಗದಲ್ಲಿ ದುಷ್ಕರ್ಮಿಗಳು ರೈಲು ಹಳಿ ಮೇಲೆ ಕಲ್ಲುಗಳು ಮತ್ತು ಕಬ್ಬಿಣದ ರಾಡ್ಗಳನ್ನು ಬಹಳ ದೂರದವರೆಗೆ ಹಾಕಿದ್ದಾರೆ. ಒಂದು ವೇಳೆ ರೈಲು ಅದರ ಮೇಲೆ ಹಾದು ಹೋಗಿದ್ದರೆ ಭಾರೀ ಅವಘಡ ಸಂಭವಿಸುವ ಸಾಧ್ಯತೆ ಇತ್ತು. ನಿನ್ನೆ ಬೆಳಗ್ಗೆ 9:55ರ ಸುಮಾರಿಗೆ ಈ ಘಟನೆ ನಡೆದಿದೆ. ರೈಲ್ವೆ ಪೊಲೀಸರು ಮತ್ತು ಸ್ಥಳೀಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಉದಯಪುರ-ಜೈಪುರ ವಂದೇ ಭಾರತ್ ಎಕ್ಸ್ಪ್ರೆಸ್ನ ಲೊಕೊಮೊಟಿವ್ ಪೈಲಟ್ಗಳು ಸಮಯಕ್ಕೆ ಸರಿಯಾಗಿ ಟ್ರ್ಯಾಕ್ನಲ್ಲಿ ಕಲ್ಲುಗಳು ಮತ್ತು ಕಬ್ಬಿಣದ ರಾಡ್ಗಳನ್ನು ಗುರುತಿಸಿದರು. ನಂತರ ರೈಲು ಅದರ ಮೇಲೆ ಹೋಗದಂತೆ ತುರ್ತು ಬ್ರೇಕ್ಗಳನ್ನು ಹಾಕಿದರು. ಇದರಿಂದಾಗಿ ಅನಾಹುತ ತಪ್ಪಿದೆ.
ರೈಲಿನಿಂದ ಇಳಿದ ನಂತರ, ಲೊಕೊ ಪೈಲಟ್ಗಳು ರೈಲಿನ ಮೇಲಿನ ಕಲ್ಲುಗಳು ಮತ್ತು ಕಬ್ಬಿಣದ ರಾಡ್ ಗಳನ್ನು ತೆರವುಗೊಳಿಸಿದರು. ಅಲ್ಲದೆ ಘಟನೆಯ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.