ಮಹಾಭಾರತದಲ್ಲಿನ ಮಹಾನ್ ಪರಾಕ್ರಮಿಗಳಲ್ಲಿ ಅರ್ಜುನ ಪ್ರಮುಖ ಎನ್ನುವ ವಿಷಯ ಭಾರತೀಯರಾದ ನಮಗೆಲ್ಲಾ ತಿಳಿದಿದೆ.
ಅರ್ಜುನನು ಹಿಂದೂ ಮಹಾಪುರಾಣಗಳಲ್ಲಿ ಒಂದಾದ ಮಹಾಭಾರತದ ಪ್ರಮುಖ ಪಾತ್ರಧಾರಿ. ಸಾರಥಿಯೂ, ಮಹಾಭಾರತದ ಮಹಾನ್ ನಾಯಕನೂ ಆದ ಶ್ರೀಕೃಷ್ಣನ ಆಪ್ತಮಿತ್ರ ಈ ಅರ್ಜುನ. ವಿಶ್ವಪ್ರಸಿದ್ಧ ಭಗವದ್ಗೀತೆಯು ಕೂಡ ಅರ್ಜುನ ಮತ್ತು ಆತನ ಆಪ್ತ ಸ್ನೇಹಿತ ಶ್ರೀಕೃಷ್ಣನ ಸಂಭಾಷಣೆಯನ್ನು ಒಳಗೊಂಡಿದೆ. ಇಂತಹ ಅರ್ಜುನನಿಗೆ ವ್8ವಿವಿಧವಾದ ಹೆಸರು ಇರುವುದು ನಿಮಗೆಲ್ಲಾ ತಿಳಿದಿದೆ. ಈಗ ಅವನ ಕೆಲವು ಹೆಸರುಗಳ ಅರ್ಥವನ್ನು ತಿಳಿದುಕೊಳ್ಳೋಣ.
ಕುಂತಿ ದೇವಿಯು ಇಂದ್ರ ದೇವನಿಂದ ವರವನ್ನು ಪಡೆದುಕೊಳ್ಳುವ ಮೂಲಕ ಅರ್ಜುನನಿಗೆ ಜನ್ಮವನ್ನು ನೀಡುತ್ತಾಳೆ. ಈ ಕಾರಣದಿಂದ ಅರ್ಜುನನ್ನು ಇಂದ್ರದೇವನ ಮಗನೆಂದು ಕೂಡ ಕರೆಯಲಾಗುತ್ತದೆ.
ಕುಂತಿಯ ಅನೇಕ ಹೆಸರುಗಳಲ್ಲಿ ಒಂದು ಹೆಸರು ಪೃಥ. ಆದ್ದರಿಂದ ಅರ್ಜುನನ್ನು ಪಾರ್ಥ ಎಂದು ಕರೆಯಲಾಗುತ್ತದೆ. ಪಾರ್ಥ ಎಂದರೆ ಕುಂತಿ ಪುತ್ರ. ಈ ಹೆಸರಿನ ಇನ್ನೊಂದು ಅರ್ಥವೇನೆಂದರೆ ಶತ್ರುಗಳ ವಿರುದ್ಧ ಸದಾ ಜಯಗಳಿಸುವವನು ಎಂಬುದಾಗಿದೆ.
ಅರ್ಜುನ ಕೇವಲ ತನ್ನ ಎಡಗೈಯಿಂದ ಧನಸ್ಸನ್ನು ಬಳಸುವ ಮೂಲಕ ಯುದ್ಧ ರಂಗದಲ್ಲಿ ಶತ್ರುಗಳನ್ನು ಸದೆ ಬಡಿಯುತ್ತಿದ್ದರಿಂದ ಆತನನ್ನು ಸವ್ಯಸಾಚಿ ಎಂದೂ ಕರೆಯಲಾಗುತ್ತಿತ್ತು. ಹಾಗೂ ಉತ್ತರದ ಪ್ರದೇಶಗಳನ್ನು ಗೆದ್ದು ಅಪಾರ ಸಂಪತ್ತನ್ನು ಗಳಿಸಿದ ಕಾರಣ ಈತನನ್ನು ಧನಂಜಯ ಎಂದೂ ಕರೆಯಲಾಗುತ್ತಿತ್ತು.