ಅಮೆರಿಕ ಮತ್ತು ಇಂಗ್ಲೆಂಡ್ ನ ಯುದ್ಧ ಹಡಗುಗಳಿಗೆ ಟ್ರ್ಯಾಪ್ ಮಾಡಲು ಹೋಗಿ ಚೀನಾವೇ ಸಿಕ್ಕಿಬಿದ್ದಿದೆ. ರ್ಯಾಪ್ನಲ್ಲಿ ಸಿಲುಕಿ ಚೀನಾದ 50 ಕ್ಕೂ ಹೆಚ್ಚು ಯೋಧರು ವಿಲವಿಲ ಒದ್ದಾಡಿ ಸಾವನ್ನಪ್ಪಿದ್ದಾರೆ.
ಹಳದಿ ಸಮುದ್ರದಲ್ಲಿ ಚೀನಾದ ಜಲಾಂತರ್ಗಾಮಿ ನೌಕೆ ಮುಳುಗಡೆಯಾದ ಪರಿಣಾಮ ಕನಿಷ್ಠ 55 ನಾವಿಕರು ಸಾವನ್ನಪ್ಪಿರುವ ಘಟನೆ ಬುಧವಾರ ವರದಿಯಾಗಿದೆ. ಹಳದಿ ಸಮುದ್ರದಲ್ಲಿ ವಿದೇಶಿ ಹಡಗುಗಳಿಗಾಗಿ ತಯಾರಿಸಿದ ಬಲೆಯಲ್ಲಿ ಚೀನಾದ ಪರಮಾಣು ಜಲಾಂತರ್ಗಾಮಿ ಸಿಕ್ಕಿಬಿದ್ದಿದೆ. ಪರಮಾಣು ಜಲಾಂತರ್ಗಾಮಿ ನೌಕೆಯನ್ನು ಹಳದಿ ಸಮುದ್ರದಲ್ಲಿ ಬ್ರಿಟಿಷ್ ಮತ್ತು ಅಮೇರಿಕನ್ ಹಡಗುಗಳನ್ನು ಹಿಡಿಯುವ ಉದ್ದೇಶದಿಂದ ನಿರ್ಮಿಸಲಾಯಿತು. ಆದರೆ ಅದು ತನ್ನದೇ ಆದ ಬಲೆಗೆ ಸಿಕ್ಕಿಬಿದ್ದಿದೆ.
ಬ್ರಿಟಿಷ್ ಗುಪ್ತಚರ ವರದಿಯು ಜಲಾಂತರ್ಗಾಮಿ “ಚೈನ್ ಮತ್ತು ಆಂಕರ್” ನೆಟ್ ನಲ್ಲಿ ಸಿಕ್ಕಿಬಿದ್ದಿದೆ. ಇದರಿಂದ ಇಂಜಿನ್ ಗೆ ಹಾನಿಯಾಗಿದೆ. ಇದನ್ನು ದುರಸ್ತಿ ಪಡಿಸುವ ವೇಳೆ ಜಲಾಂತರ್ಗಾಮಿ ನೌಕೆಯ ಆಮ್ಲಜನಕ ವ್ಯವಸ್ಥೆಯಲ್ಲಿನ ಅಸಮರ್ಪಕ ಕಾರ್ಯದಿಂದಾಗಿ ಜಲಾಂತರ್ಗಾಮಿಯಲ್ಲಿದ್ದ ನಾವಿಕರು ಸಾವನ್ನಪ್ಪಿದ್ದಾರೆ. ಜಲಾಂತರ್ಗಾಮಿ ನೌಕೆಯಲ್ಲಿದ್ದ ನಾವಿಕರು ಯಾರೂ ಬದುಕುಳಿಯಲಿಲ್ಲ. ಕನಿಷ್ಠ 55 ಚೀನೀ ನಾವಿಕರು ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ.