ಕೆಆರ್‌ಎಸ್ ಡ್ಯಾಂನಿಂದ ತಮಿಳುನಾಡಿಗೆ ನೀರು ಬಿಡುಗಡೆ ಮುಂದವರಿಕೆಯಾಗಿದ್ದು, ಇಂದು ಎರಡು ಸಾವಿರ ಕ್ಯೂಸೆಕ್‌ಗೂ ಅಧಿಕ ನೀರು ತಮಿಳುನಾಡಿಗೆ ಹರಿಸಲಾಗುತ್ತಿದೆಯೆಂದು ಸುದ್ದಿಮೂಲಗಳು ತಿಳಿಸಿವೆ.
ಒಂದೆಡೆ ನಮ್ಮ ಜನರು ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಬೇಕೆಂದು ನಿತರಂತರವಾಗಿ ಹೋರಾಟ ನಡೆಸುತ್ತಿದ್ದಾರೆ. ಆದರೆ ಸರ್ಕಾರ ಮಾತ್ರ ಕರ್ನಾಟಕದ ಜನತೆಯ ಹೋರಾಟಕ್ಕೆ ಬೆಲೆಯನ್ನೇ ಕೊಡದವರಂತೆ ಮಿಳುನಾಡಿಗೆ ನೀರು ಹರಿಸುತ್ತಿದೆ.
ಇಂದು ಮತ್ತೊಮ್ಮೆ ತಮಿಳುನಾಡಿಗೆ ನಾಲೆ ಹಾಗೂ ಡ್ಯಾಂನಿಂದ 5,973 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಡ್ಯಾಂ ಒಳಹರಿವಿನ ಪ್ರಮಾಣ 3503 ಕ್ಯೂಸೆಕ್‌ಗೆ ಕುಸಿತ ಕಂಡಿದ್ದು, 124.80 ಅಡಿ ಗರಿಷ್ಠ ಮಟ್ಟದ ಡ್ಯಾಂನಲ್ಲಿ 100.92 ಅಡಿ ಮಾತ್ರ ನೀರು ಸಂಗ್ರಹವಾಗಿದೆ
ಕೆಆರ್‌ಎಸ್ ಡ್ಯಾಂನ ಇಂದಿನ ನೀರಿನ ಮಟ್ಟ
ಗರಿಷ್ಠ ಮಟ್ಟ- 124.80 ಅಡಿಗಳು
ಇಂದಿನ ಮಟ್ಟ- 100.92 ಅಡಿಗಳು
ಗರಿಷ್ಠ ಸಾಮರ್ಥ್ಯ- 49.452 ಟಿಎಂಸಿ
ಇಂದಿನ ಸಾಮರ್ಥ್ಯ- 23.539 ಟಿಎಂಸಿ
ಒಳಹರಿವು- 3503 ಕ್ಯೂಸೆಕ್
ಹೊರ ಹರಿವು- 5973 ಕ್ಯೂಸೆಕ್