ಯಶ್ ವೇಸ್ಟ್ ನಟ ಅನ್ನೋ ರೀತಿ ನಟ ರವಿತೇಜ ಟೀಕಿಸಿದ್ದಾರೆ. ಯಶ್ಗೆ ಆಕ್ಟಿಂಗೇ ಬರಲ್ಲ ಅನ್ನೋ ರೀತಿ ಛೇಡಿಸಿದ್ದು, ಯಶ್ ಫೇಮಸ್ ಅಲ್ವೇ ಅಲ್ಲ ಅಂತಾ ತೆಲುಗು ನಟ ಕಿಂಡಲ್ ಮಾಡಿದ್ದಾರೆ. ಜಸ್ಟ್ ಕೆಜಿಎಫ್ನಿಂದ ಮಾತ್ರ ಯಶ್ ಗೊತ್ತಾಗಿದ್ದು, ಕೆಜಿಎಫ್ಗೂ ಮುನ್ನ ಯಾರಿಗೂ ಗೊತ್ತೇ ಇರಲಿಲ್ಲ. ಕೆಜಿಎಫ್ ಅನ್ನೋದು ಜಸ್ಟ್ ಲಕ್ಕಿ ಅಷ್ಟೇ, ಅದೃಷ್ಟವಶಾತ್ ಯಶ್ಗೆ ಕೆಜಿಎಫ್ ಹಿಟ್ ಆಯ್ತು ಎಂದು ಯಶ್ ಕುರಿತ ಪ್ರಶ್ನೆಗೆ ತೆಲುಗು ನಟ ರವಿತೇಜ ಉತ್ತರಿಸಿದ್ದಾರೆ.
ಹಿಂದಿ ಖಾಸಗಿ ಚಾನೆಲ್ವೊಂದರ ಸಂದರ್ಶನದಲ್ಲಿ ನಟ ರವಿತೇಜ ಈ ರೀತಿ ಹೇಳಿಕೆ ನೀಡಿದ್ದಾರೆ. ತನ್ನ ಸಿನಿಮಾ ಪ್ರಚಾರದ ವೇಳೆ ಯಶ್ನ್ನು ನಟ ರವಿತೇಜ ಅವಹೇಳನ ಮಾಡಿದ್ದಾರೆ. ನಟ ರವಿತೇಜ ಹೇಳಿದಂತೆ ಯಶ್ ನಟರೇ ಅಲ್ವಾ..? ಕೆಜಿಎಫ್ಗೂ ಮುನ್ನ ಬಾಲಿವುಡ್, ಟಾಲಿವುಡ್ಗೆ ಗೊತ್ತೇ ಇರ್ಲಿಲ್ವಾ..? ತೆಲುಗಿನ ಮಾಸ್ ಮಹಾರಾಜ ರವಿತೇಜ ಹೇಳಿದ್ದು ನಿಜಾನಾ..? ಎಂಬ ಪ್ರಶ್ನೆ ಹುಟ್ಟಕೊಂಡಿದೆ. ಕಳೆದ 5 ವರ್ಷಗಳಲ್ಲಿ ನಟ ಯಶ್ ಮಾಡಿದ್ದು ಕೇವಲ KGF. ನಟ ಯಶ್ KGF-1, KGF-2 ಸಿನಿಮಾಗಳನ್ನಷ್ಟೇ ಮಾಡಿದ್ದಾರೆ.
5 ವರ್ಷಗಳಲ್ಲಿ ನಟ ಯಶ್ಗೆ ದೊಡ್ಡ ಆಫರ್ ಬಂದೇ ಇಲ್ವಾ..? ಹೊಸ ಸಿನಿಮಾಗೆ ಯಾರೂ ಯಶ್ ಹತ್ರ ಬರ್ತಾನೇ ಇಲ್ವಾ..? ಈವರೆಗೂ ಯಶ್ಗೆ ತೆಲುಗು, ತಮಿಳು, ಮಲೆಯಾಳಂ, ಬಾಲಿವುಡ್ ಚಿತ್ರರಂಗದಿಂದ ಯಾವುದೇ ಆಫರ್ ಬಂದಿಲ್ಲ. ಕೇವಲ ಕೆಜಿಎಫ್ ಬಿಲ್ಡಪ್ನಿಂದ ಮಾತ್ರ ಯಶ್ ಬೆಳಕಿಗೆ ಬಂದಿದ್ದು, ಕೆಜಿಎಫ್ ನಂತರ ಯಾವ ನಿರ್ಮಾಪಕರೂ ಯಶ್ ಬಳಿ ಬಂದಿಲ್ಲ. 5 ವರ್ಷಗಳ ಈ ಸ್ಥಿತಿ ನೋಡಿದ್ರೆ ರವಿತೇಜ ಹೇಳಿದ್ದು ನಿಜಾನಾ..? ಎಂಬ ಪ್ರಶ್ನೆ ಎದುರಾಗಿದೆ.
ಯಾವ ಭಾಷೆಯ ಸ್ಟಾರ್ ಕೂಡ ಯಶ್ನ ಮಾತಾಡಿಸುತ್ತಿಲ್ಲ, ತೆಲುಗು, ತಮಿಳು ನಟರಿಗೆ ಯಶ್ ಅಂದ್ರೆ ಲೆಕ್ಕಕ್ಕೆ ಇಲ್ಲ. ಸಲಾರ್ ಮುಹೂರ್ತ ವೇಳೆ ಯಶ್ ಅವರನ್ನು ನಟ ಪ್ರಭಾಸ್ ನೆಗ್ಲೆಕ್ಟ್ ಮಾಡಿದ್ದರು. ಸಿನಿಮಾ ಮುಹೂರ್ತದ ಫೋಟೋ ಶೂಟ್ನಲ್ಲಿ ಪ್ರಭಾಸ್ ಕಡೆಗಣಿಸಿದ್ದರು. ಪ್ರಭಾಸ್ ಕೊನೆಗೆ ನಿರ್ಮಾಪಕ ವಿಜಯ್ ಕಿರಗಂದೂರುಗೆ ಗೌರವ ಕೊಟ್ಟಿದ್ದಾರೆ. ವಿಜಯ್ ಅವರ ಮುಖ ನೋಡಿ ಯಶ್ ಜೊತೆ ಪ್ರಭಾಸ್ ಫೋಟೋ ತೆಗೆಸಿಕೊಂಡಿದ್ದಾರೆ. ಬಳಿಕ ಯಾರೊಬ್ಬರೂ ಯಶ್ ಅವರತ್ತ ತಿರುಗಿ ನೋಡ್ತಾನೇ ಇಲ್ಲ, ಫೇಮಸ್ ನಟ, ನಟಿಯರು ಯಾರೂ ಕೂಡ ಯಶ್ ಬಳಿ ಬರ್ತಾನೇ ಇಲ್ಲ. ಅದೇ ಕಾರಣಕ್ಕೆ ತೆಲುಗು ನಟ ರವಿತೇಜ ಯಶ್ನ್ನು ಲೇವಡಿ ಮಾಡಿದ್ದಾರೆ.