ಭಾರತೀಯ ತೆಂಗು ಅಭಿವೃದ್ಧಿ ಮಂಡಳಿಯ ಮಾಜಿ ಅಧ್ಯಕ್ಷ ಕಬ್ಬಳ್ಳಿ ರಂಗೇಗೌಡ (87)ಅವರು ಇಂದು ಆದಿಚುಂಚನಗಿರಿ ವ್ಯದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ನಿಧನರಾದರು .
ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಕಬ್ಬಳ್ಳಿಯ ರಂಗೇಗೌಡ ಅವರು ತಾಲೂಕು ಅಭಿವೃದ್ಧಿ ಮಂಡಳಿಯ ಉಪಾಧ್ಯಕ್ಷರಾಗಿದ್ದರು . ಹಾಸನ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಅವರು ತೆಂಗು ಬೆಳೆಗಾರರಾಗಿ ಪ್ರಗತಿ ಪರ ರೈತರಾಗಿದ್ದರು .
ಇಬ್ಬರು ಪುತ್ರಿಯರು ಹಾಗು ಅಪಾರ ಸಂಖ್ಯೆಯ ಬಂದು ಬಳಗವನ್ನು ಆಗಲಿರುವ ಮೃತರ ಅಂತ್ಯಕ್ರಿಯೆ ನಾಳೆ ಗುರುವಾರ ಮದ್ಯಾನ್ನ ಕಬ್ಬಳ್ಳಿಯಲ್ಲಿ ನಡೆಯಲಿದೆ ಎಂದು ಅವರ ಬಂಧು ಪ್ರೊ ಜಿ ಬಿ ಶಿವರಾಜು ಅವರು ತಿಳಿಸಿದ್ದಾರೆ
ಕಾವೇರಿ ವಿಚಾರದಲ್ಲಿ ಕೇಂದ್ರ ಮಧ್ಯಸ್ಥಿಕೆ ವಹಿಸೋ ಪ್ರಶ್ನೆ ಬರುವುದಿಲ್ಲ: ಜೋಶಿ
ಕಾವೇರಿ ವಿಚಾರದಲ್ಲಿ ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸೋ ಪ್ರಶ್ನೆ ಬರುವುದಿಲ್ಲ. ಕಾವೇರಿ ನೀರು ಹಂಚಿಕೆ ವಿಷಯ ವಿಚಾರದಲ್ಲಿ ರಾಜ್ಯ ಸರ್ಕಾರದಿಂದ ಆರಂಭದಿಂದಲೇ ತಪ್ಪು ಹೆಜ್ಜೆ ಇಟ್ಟಿದೆ ಎಂದು...