ನಾಲ್ಕು ಮಂದಿ ಒಂದು ಚಿನ್ನದ ಅಂಗಡಿಗೆ ನುಗ್ಗಿ ದರೋಡೆಗೆ ಸಂಬಂಧಪಟ್ಟಂತ ಒಂದು ಪ್ರಕರಣದಲ್ಲಿ ಪೊಲೀಸರು ಒಬ್ಬನ ಬೇಟೆಯಾಡಿದ್ದಾರೆ. ದರೋಡೆಯ ಭಯಾನಕ ದೃಶ್ಯ ಹೇಗಿತ್ತು ಎಂದರೆ ಹೃದಯ ನಡುಗುತ್ತದೆ. ಸ್ವಲ್ಪ ವ್ಯತ್ಯಾಸವಾಗಿದ್ದರೂ ಮಾಲೀಕ ಬದುಕುಳಿಯುತ್ತಿರಲಿಲ್ಲ, CCTVಯ ದೃಶ್ಯ ನೋಡಿದ್ರೆ ಎದೆ ಝಲ್ ಎನ್ನುತ್ತೆ.
ಬ್ಯಾಡರಹಳ್ಳಿ ಜುವೈಲರಿ ಶಾಪ್ ನಲ್ಲಿ ದರೋಡೆ ನಡೆದಿದ್ದು, ಬ್ಯಾಡರಹಳ್ಳಿ ಪೊಲೀಸರು ಸಿಸಿಟಿವಿ ದೃಶ್ಯ ಆಧರಿಸಿ ಒಬ್ಬನನ್ನು ಬಂಧಿಸಿದ್ದಾರೆ. ಪಶ್ಚಿಮ ವಿಭಾಗದ ಡಿಸಿಪಿ ಎಸ್ ಗಿರೀಶ್ ನೇತೃತ್ವ ತಂಡದಿಂದ ಅರೆಸ್ಟ್ ಮಾಡಲಾಗಿದೆ. ಕೃತ್ಯ ನಡೆದ 3 ಗಂಟೆಯಲ್ಲೇ ಹುಸೇನ್ ಎಂಬಾತನ ಬಂಧನವಾಗಿದೆ.
ಆರೋಪಿಯು ಹೈದರಾಬಾದ್ಗೆ ವಿಮಾನದಲ್ಲಿ ಎಸ್ಕೇಪ್ ಆಗುತ್ತಿದ್ದನು, ಅಷ್ಟರಲ್ಲಿ ಪೊಲೀಸರು ಬಂಧಿಸಿದ್ದಾರೆ. ಉಳಿದ ಮೂವರು ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಮಾಲೀಕ ಮನೋಜ್ಗೆ ಪಾಯಿಂಟ್ ಬ್ಲಾಕ್ನಲ್ಲಿ ಬೆದರಿಸಿದ್ದರು, ನಾಲ್ವರು ಕೆಜಿಗಟ್ಟಲೆ ಚಿನ್ನ ದರೋಡೆ ಮಾಡಿ ಎಸ್ಕೇಪ್ ಆಗಿದ್ದರು. ಪಿಸ್ತೂಲ್ ಟ್ರಿಗರ್ ಮಾಡಿ ಬೆದರಿಸುವ ದೃಶ್ಯ CCTVಯಲ್ಲಿ ಸೆರೆಯಾಗಿದೆ.