ಮೈಸೂರಿನ ಟೌನ್ ಹಾಲ್ ಬಳಿ ಮಹಿಷ ಉತ್ಸವ ನಡೆಯುತ್ತಿದ್ದು, ಟೌನ್‌ಹಾಲ್ ಬಳಿ ನೂರಾರು ಜನರು ಸೇರಿದ್ದಾರೆ. 144 ಸೆಕ್ಷನ್ ನಡುವೆಯೂ ಮಹಿಷ ದಸರಾಗೆ ಅವಕಾಶ ನೀಡಲಾಗಿತ್ತು. ಈ ಬಾರಿ ಮಹಿಷ ಉತ್ಸವ ಕೇವಲ ವೇದಿಕೆ ಕಾರ್ಯಕ್ರಮಕ್ಕೆ ಮಾತ್ರ ಅವಕಾಶವಿದೆ.
ನಾಡಹಬ್ಬ ದಸರಾ ಸಮಯದಲ್ಲಿಯೇ ಮಹಿಷ ದಸರಾ ವಿವಾದಕ್ಕೆ ಕಾರಣವಾಗಿತ್ತು, ಮಹಿಷ ದಸರಾ ಸಮಿತಿಯಿಂದ ಮಹಿಷ ಉತ್ಸವ ಆಯೋಜನೆ ಮಾಡಲಾಗಿದೆ. ಮಹಿಷ ಆರಾಧಕರು ವೇದಿಕೆ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ಉರಿಲಿಂಗಿಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮಿಜಿ, ಇತಿಹಾಸ ತಜ್ಞ ನಂಜರಾಜೇ ಅರಸು, ನಿವೃತ್ತ ಪ್ರಾಧ್ಯಾಪಕ ಮಹೇಶ್ ಚಂದ್ರ ಗುರು ಸೇರಿ ಹಲವರು ಭಾಗಿಯಾಗಿದ್ದಾರೆ.
ಕಾರ್ಯಕರ್ತರು ನೀಲಿ ಬಾವುಟ ಹಿಡಿದು ಬೈಕ್ನಲ್ಲಿ ಬಂದಿದ್ದಾರೆ. ಅಶೋಕ ಪುರಂನಿಂದ ಟೌನ್ ಹಾಲ್ಗೆ ಪುರುಷೋತ್ತಮ್ ಟೀಂ ಆಗಮಿಸಿದ್ದು, ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಕಾರ್ಯಕರ್ತರಿಂದ ಮಾಲಾರ್ಪಣೆ ಮಾಡಲಾಗಿದೆ. ರಾಜ್ಯದ ಬೇರೆ-ಬೇರೆ ಭಾಗಗಳಿಂದ ಕಾರ್ಯಕರ್ತರು ಬಂದಿದ್ದಾರೆ. ಪೊಲೀಸರು ಮಫ್ತಿಯಲ್ಲಿ ಬಂದೋಬಸ್ತ್ ಮಾಡಿದ್ದಾರೆ.