ಬಿಲ್ಡರ್ ಮನೆಯಲ್ಲಿ 42 ಕೋಟಿ ಸಿಕ್ಕ ಪ್ರಕರಣದಕ್ಕೆ ಸಂಬಂಧಿಸಿದಂತೆ ಮಾಜಿ ಡಿಸಿಎಂ ಡಾ.ಅಶ್ವಥ್ ನಾರಾಯಣ್ ಪ್ರತಿಕ್ರಿಯಿಸಿ, ಈ ಹಣಕ್ಕೂ ರಾಜಕೀಯಕ್ಕೂ ಸಂಬಂಧ ಇದೆ. ಬಿಲ್ಡರ್ಗಳೂ ರಾಜಕಾರಣಿಗಳಿಗೂ ನಂಟಿದೆ, ಇವತ್ತು ಬಾಕಿ ಬಿಲ್ಗಳು ಬರದೇ ಕಾಂಟ್ರಾಕ್ಟರ್ಗಳ ಬಳಿ ಹಣ ಇಲ್ಲ. ಬಾಕಿ ಬಿಲ್ ಬರದೇ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ತಿದ್ದಾರೆ, ಇಂಥಾ ಪರಿಸ್ಥಿತಿಯಲ್ಲಿ ಇಷ್ಟೊಂದು ಹಣ ಎಲ್ಲಿಂದ ಬಂತು..? ಇದು ಖಂಡಿತಾ ರಾಜಕೀಯಕ್ಕೆ ಸೇರಿದ ಹಣ ಎಂದು ಹೇಳಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ಡಾ.ಅಶ್ವಥ್ ನಾರಾಯಣ್ ಮಾತನಾಡಿ, ಅಂಬಿಕಾಪತಿ ಸೇರಿ ಕೆಲವು ಗುತ್ತಿಗೆದಾರರಿಗೂ ರಾಜಕಾರಣಿಗಳಿಗೂ ಲಿಂಕ್ ಇದೆ. ಗುತ್ತಿಗೆದಾರರಿಗೆ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ಇದೆ, ಅಂಥಾ ಪರಿಸ್ಥಿತಿ ಇರುವಾಗ 42 ಕೋಟಿ ಹಣ ಹೇಗೆ ಬಂತು? ಎಂದು ಪ್ರಶ್ನಿಸಿದ್ದಾರೆ. ಈಗ ದಾಳಿ ಆಗಿರುವ ಕಲೆಕ್ಷನ್ ಸೆಂಟರ್ ಇನ್ನೂ ಹಲವು ಕಡೆ ಇದೆ, ಈ ಸರ್ಕಾರಕ್ಕೂ ಇಂತಹ ಹಣ ಕಲೆಕ್ಷನ್ ಸೆಂಟರ್ಗಳಿಗೂ ಸಂಬಂಧ ಇದೆ. ಈಗ ಸಿಕ್ಕಿರುವ ಕೋಟಿ ಕೋಟಿ ಹಣದ ಬಗ್ಗೆ ಸೂಕ್ತ ತನಿಖೆ ಆಗಬೇಕಿದೆ, ಕಾಂಗ್ರೆಸ್ ಸರ್ಕಾರ ಎಟಿಎಂ ಸರ್ಕಾರ, ಲೂಟಿ ಸರ್ಕಾರ. ಪಂಚರಾಜ್ಯಗಳ ಚುನಾವಣೆಗೆ ಎಟಿಎಂ ಸರ್ಕಾರ ಫಂಡಿಂಗ್ ಮಾಡ್ತಿದೆ, ಈ ಆಪಾದನೆಯಿಂದಾಗಲೇ ರೇಡ್ ಆಗಿದೆ ಎಂದಿದ್ದಾರೆ.
ಪ್ರಕರಣ : ಬಿಲ್ಡರ್ ಅಂಬಿಕಾಪತಿ ಮನೆಯಲ್ಲಿ 42 ಕೋಟಿ ಪತ್ತೆಯಾಗಿದೆ.ಫ್ಲ್ಯಾಟ್ವೊಂದರಲ್ಲಿ ಬರೋಬ್ಬರಿ 23 ಬಾಕ್ಸ್ಗಳಲ್ಲಿ ಕಂತೆ-ಕಂತೆ ನೋಟು ಇತ್ತು. 500 ಮುಖಬೆಲೆಯ 42 ಕೋಟಿ ಹಣ ನೋಡಿ ಐಟಿ ಟೀಂ ಬೆಚ್ಚಿ ಬಿದ್ದಿದ್ದಾರೆ.
ಅಂಬಿಕಾಪತಿಯವರ ಮನೆಯಲ್ಲಿ ಹಣವಿರುವ ಮಾಹಿತಿ ಸಿಕ್ಕಿದ್ದು, ರಾಜ್ಯ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಅಂಬಿಕಾಪತಿ ಮನೆಯಲ್ಲಿ ನಿನ್ನೆ ಸಂಜೆ 6 ಗಂಟೆಗೆ ಐಟಿ ಟೀಂ ಎಂಟ್ರಿ ಕೊಟ್ಟಿದೆ. ಪೊಲೀಸ್ ಭದ್ರತೆಯಲ್ಲಿ ಐಟಿ ಅಧಿಕಾರಿಗಳು ಎಂಟ್ರಿ ಕೊಟ್ಟು. ಏಕಕಾಲದಲ್ಲಿ ಆರ್.ಟಿ ನಗರದ ಎರಡು ಸ್ಥಳಗಳಲ್ಲಿ ದಾಳಿ ಮಾಡಿದ್ದಾರೆ. ಸುಲ್ತಾನ್ ಪಾಳ್ಯದ 5 ಮಹಡಿ ಮನೆ ಮೇಲೆ ರಾತ್ರಿ IT ದಾಳಿ ನಡೆದಿದೆ.
ಅಂಬಿಕಾಪತಿ ಅವರು ಮನೆ ಬೀಗ ಹಾಕಿ ಡ್ರೈವರ್ ಬಳಿ ಕೊಟ್ಟಿದ್ದರು. ಡ್ರೈವರ್ ರೂಂ ಬೀಗ ತಗೆಯಲು ಕೀ ಕೊಡದೇ ಸತಾಯಿಸಿದ್ದನು. ಕೊನೆಗೆ IT ಅಧಿಕಾರಗಳು ಡ್ರೈವರ್ ಬಂಧಿಸಿ ರೂಂ ಕೀ ವಶಕ್ಕೆ ಪಡೆದಿದ್ದಾರೆ. ಆತ್ಮಾನಂದ ಕಾಲೋನಿಯ ಒಂದು ಫ್ಲ್ಯಾಟ್ನಲ್ಲಿ ಶೋಧ ನಡೆದಿದ್ದು, ಮಂಚದ ಕೆಳಗೆ ಅನುಮಾನ ಬಂದು ಶೋಧ ಕಾರ್ಯ ನಡೆಸಿದ್ದಾರೆ. ಶೋಧ ಮಾಡಿದಾಗ 42 ಕೋಟಿ ಹಣ ಪತ್ತೆಯಾಗಿದೆ ಎನ್ನಲಾಗಿದೆ.