ಕಲಬುರಗಿ ಕಾಂಗ್ರೆಸ್ ಮುಖಂಡ ಬಾಬುರಾವ್ ಪಾಟೀಲ್ ಅವರ ಮನೆ ಮೇಲೆ ED ದಾಳಿ ನಡೆಸಿದ್ದು, ಚಿಂಚೋಳಿ ತಾಲೂಕಿನ ಚಂದಾಪುರ ಗ್ರಾಮದಲ್ಲಿ ರೇಡ್ ಮಾಡಿದೆ. ED ಅಧಿಕಾರಿಗಳು ಖಾಸಗಿ ಇನ್ನೋವಾ ಕಾರುಗಳಲ್ಲಿ ಬಂದಿದ್ದು, ಮಹತ್ವದ ದಾಖಲೆಯನ್ನು ವಶಕ್ಕೆ ಪಡೆದಿದ್ದಾರೆ ಎನ್ನುವ ಸುದ್ದಿಯಿದೆ.
ಬಾಬುರಾವ್ ಕೈಗಾರಿಕೆಗಳಿಗೆ ಸಂಬಂಧಿಸಿದ ದಾಖಲೆ ಪರಿಶೀಲನೆ ನಡೆಸಿದೆ. ಚಿಂಚೋಳಿ ಸಕ್ಕರೆ ಕಾರ್ಖಾನೆ ಅಕ್ರಮ ಕುರಿತು ED ದಾಳಿ ನಡೆಸಿದೆ. ರೈತರಿಂದ ಜಮೀನು ಖರೀದಿಸಿ ಹಣ ನೀಡದ ಆರೋಪ ಕೇಳಿ ಬಂದಿದೆ.
ಹದಿನೈದು ಅಧಿಕಾರಿಗಳ ತಂಡದಿಂದ ಈ ತಪಾಸಣೆ ನಡೆದಿದೆಯೆಂದು ಸುದ್ದಿಮೂಲಗಳು ತಿಳಿಸಿವೆ.