ಬರೆಯಬೇಕು
ಬಾಂದಳದ ಹೊನ್ನೆÃಸರನ
ಹೊಂಗಿರಣಗಳಂತೆ,
ಬೆರೆಯಬೇಕು
ಕಾಮಧೇನುವಿನ ಕ್ಷಿÃರದ ಜೊತೆ
ಮಧುಪರ್ಕದಂತೆ…
ಹರಿಯಬೇಕು
ಪವಿತ್ರ ಗಂಗಾ-
ವಾಹಿನಿಯಂತೆ
ತೆರೆಯಬೇಕು
ಹೃನ್ಮನ ಹುಣ್ಣಿಮೆ ಚಂದಿರನ
ಪೂರ್ಣಕಾಂತಿಯಂತೆ
ಮೆರೆಯಬೇಕು
ಇದ್ದೂ ಇಲ್ಲದಂತೆ,
ಸಿಕ್ಕಿದ್ದು ಒಲ್ಲದಂತೆ,
ಒಕ್ಕಿದ್ದು ರಾಶಿ ಕಣವಾದಂತೆ!
“ಜೀವನವೇ ಉತ್ಸಾಹವೆಂದು ತಿಳಿದಿದ್ದ…ಇನ್ನೂ ಏನೆನೆಲ್ಲಾ ಸಾಹಸಗಳು, ಸಾಧನೆಗಳು ಕೈಗೂಡಿಸಿಕೊಳ್ಳುವ ಮನಸಿದ್ದ ದೀಪಾ ಶ್ರೀನಿವಾಸ್ ಅವರ ನೆನಪಿನಲ್ಲಿ…
"ಜೀವನವೇ ಉತ್ಸಾಹವೆಂದು ತಿಳಿದಿದ್ದ…ಇನ್ನೂ ಏನೆನೆಲ್ಲಾ ಸಾಹಸಗಳು, ಸಾಧನೆಗಳು ಕೈಗೂಡಿಸಿಕೊಳ್ಳುವ ಮನಸು…ಇನ್ನಷ್ಟು ಮತ್ತಷ್ಟು ಕನಸು…ಈ ಎಲ್ಲವೂ ಇದ್ದೂಸಹ ನೋಡುನೋಡುತ್ತಿದ್ದಂತೆಯೇ ಕೈಬೀಸಿ ವಿದಾಯ ಹೇಳಿ ಮರೆಯಾದ ಸೋದರಿ ದೀಪಾ ಶ್ರೀನಿವಾಸ್...