ಬೆಂಗಳೂರು : ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಯ ಮತದಾನ ಮುಗಿದಿದೆ. ಜಿದ್ದಾಜಿದ್ದಿನ ಶಿವಮೊಗ್ಗ, ಕಲಬುರಗಿ, ಬಳ್ಳಾರಿ ಸೇರಿದಂತೆ 14 ಕ್ಷೇತ್ರಗಳಲ್ಲಿ ಶೇ.68 ರಷ್ಟು ಮತದಾನವಾಗಿದೆ.
ಅಂತಿಮವ ವರದಿಗಳು ಇನ್ನೂ ಆಯೋಗ ಸೇರಬೇಕಾಗಿದ್ದು, ನಾಳೆ ಬೆಳಗ್ಗೆ 9 ಗಂಟೆಗೆ ರಾಜ್ಯದ ಮತದಾನದ ಸಂಪೂರ್ಣ ವಿವರ ಲಭ್ಯವಾಗಲಿದೆ.
ಈಗಿನ ಮಾಹಿತಿ ಪ್ರಕಾರ ಚಿಕ್ಕೋಡಿ 73.91, ಬೆಳಗಾವಿ 66.59, ಬಾಗಲಕೋಟೆ 69.40, ವಿಜಯಪುರ 60.28, ಕಲಬುರಗಿ 57.58,ರಾಯಚೂರು 57.85, ಬೀದರ್ 61.40, ಕೊಪ್ಪಳ 68.31, ಬಳ್ಳಾರಿ 66.06, ಹಾವೇರಿ 71.25, ಧಾರವಾಡ 70.04, ಉತ್ತರ ಕನ್ನಡ 74.07, ದಾವಣಗೆರೆ 72.57, ಶಿವಮೊಗ್ಗ 76.26 % ದಷ್ಟು ಮತದಾನವಾಗಿದೆ.
ಎರಡನೇ ಹಂತದ ಮತದಾನದವೂ ಅನೇಕ ವೈಶಿಷ್ಯದಿಂದ ಕೂಡಿತ್ತು. ಬಳ್ಳಾರಿಯಲ್ಲಿ ಕೈ ಇಲ್ಲದ ಮಹಿಳೆಯೊಬ್ಬರು ಕಾಲಿನಲ್ಲಿ ಮತದಾನ ಮಾಡಿದ್ದಾರೆ.
ಅನೇಕ ಮಂದಿ ಒಂದೇ ಒಂದು ಮತದ ಸಲುವಾಗಿ ವಿದೇಶದಿಂದ ಲಕ್ಷ ಲಕ್ಷ ಖರ್ಚು ಮಾಡಿ ಆಗಮಿಸಿದ್ದಾರೆ.
ಮದುವೆ ಮಂಟಪದಲ್ಲಿರಬೇಕಾದ ನವ ವಧುವರರೂ ಮತದಾನಕ್ಕೆ ಆಗಮಿಸಿದ್ದರು. ಗರ್ಭಿಣಿಯರೂ, ಮಯೋವೃದ್ಧರು ಪ್ರಜಾಪ್ರಭುತ್ವದ ಜಾತ್ರೆಯಲ್ಲಿ ಪಾಲ್ಗೊಂಡಿದ್ದರು.