ಬೆಂಗಳೂರು : ಈ ಸಾಮಾಜಿಕ ಜಾಲತಾಣಗಳಲ್ಲಿ ಅದ್ಯಾವ ವಿಷಯ ವೈರಲ್ ಆಗುತ್ತದೆ ಎಂದು ಹೇಳೋದು ಅಸಾಧ್ಯ. ಹತ್ತು ವರ್ಷಗಳ ಹಳೆಯ ವಿಷಯ ಇದೀಗ ಮತ್ತೆ ವೈರಲ್ ಆದ್ರೂ ಅಚ್ಚರಿ ಇಲ್ಲ.
ನಟಿ ಶ್ರದ್ಧಾ ಶ್ರೀನಾಥ್ ಸಂಬಂಧಿಸಿದ ವಿಷಯದಲ್ಲೂ ಹಾಗೇ ಹಾಗಿದೆ. ಶ್ರದ್ಧಾ ಶ್ರೀನಾಥ್‌ಗೆ ಸಂಬಂಧಿಸಿದ ಹಳೆಯ ಸಂಗತಿಯೊಂದು ಈಗ ಮತ್ತೆ ಸದ್ದು ಮಾಡುತ್ತಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಡೆಸಿಕೊಡುತ್ತಿದ್ದ ‘ನಂ.1 ಯಾರಿ ವಿತ್ ಶಿವಣ್ಣ’ ಕಾರ್ಯಕ್ರಮದಲ್ಲಿ ಶ್ರದ್ಧಾ ಶ್ರೀನಾಥ್ ಮತ್ತು ಶ್ರುತಿ ಹರಿಹರನ್ ಭಾಗಿಯಾಗಿದ್ದ ಸಂದರ್ಭ ಅದು, ಫಟಾ ಫಟ್ ಪ್ರಶ್ನೆ ಸುತ್ತಿನಲ್ಲಿ ಯಾವ ನಟನ ಜತೆಗೆ ನೀವು ಡೇಟ್ ಮಾಡಲು ಇಷ್ಟಪಡುತ್ತೀರ? ಎಂದು ಶಿವಣ್ಣ ಪ್ರಶ್ನೆ.
ಇದಕ್ಕೆ ಶ್ರದ್ಧಾ ಶ್ರೀನಾಥ್ ರಕ್ಷಿತ್ ಶೆಟ್ಟಿ ಹೆಸರು ಹೇಳಿದ್ದರು.
ಇದೇ ಕಾರ್ಯಕ್ರಮದಲ್ಲಿ ಮೊದಲ ಚುಂಬನದ ಬಗ್ಗೆ ಶಿವಣ್ಣ ಕೇಳಿದ್ರೆ, 2006ರಲ್ಲೇ ಮೊದಲ ಚುಂಬನ ಅನುಭವ ಆಗಿತ್ತು. ಆಗ ತನಗೆ 15 ವರ್ಷ ವಯಸ್ಸು ಎಂದಿದ್ದರು.
ಇದೀಗ ಈ ಟಾಪಿಕ್ ಮತ್ತೆ ಟ್ರೆಂಡ್ ಆಗುತ್ತಿದೆ. ಅದ್ಯಾಕೆ ಅಭಿಮಾನಿಗಳು ಈಗ ಈ ಬಗ್ಗೆ ತಲೆ ಕೆಡಿಸಿಕೊಂಡರೋ ಗೊತ್ತಿಲ್ಲ.