ಬೆಂಗಳೂರು : ನಾನು ತೆಗೆದುಕೊಂಡಿರುವ ಸಾಲವನ್ನು ಶೇ.100 ರಷ್ಟು ವಾಪಸ್ ಪಾವತಿ ಮಾಡುತ್ತೇನೆ ಅಂದರೂ ನನ್ನ ಮೇಲೆ ಸಿಬಿಐ/ಇಡಿ ಕ್ರಿಮಿನಲ್ ಪ್ರಕರಣ ದಾಖಲಿಸಿವೆ. ನನಗೇ ಯಾಕೆ ಹೀಗೆಂದು ಅಚ್ಚರಿಯಾಗುತ್ತದೆ ಎಂದು ವಿಜಯ್ ಮಲ್ಯ ಟ್ವಿಟರ್ ನಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.
ಜೆಟ್ ಏರ್ ವೇಸ್ ಗೆ ಬಂದೊದಗಿರುವ ಪರಿಸ್ಥಿತಿಯ ಬಗ್ಗೆ ಟ್ವೀಟ್ ಮಾಡಿರುವ ಸುಸ್ತಿದಾರ ವಿಜಯ್ ಮಲ್ಯ, “ನಾನು ಪೂರ್ತಿ ಸಾಲ ವಾಪಸ್ ಕೊಡ್ತೀನಿ ಅಂದರೂ ಬ್ಯಾಂಕ್ ಗಳು ತೆಗೆದುಕೊಳ್ಳುವುದಕ್ಕೆ ಸಿದ್ಧವಿಲ್ಲ ಎಂದು ದೂರಿದ್ದಾರೆ.
ಜೆಟ್ ಏರ್ ವೇಸ್ ಗೆ ಬಂದೊದಗಿರುವ ಸ್ಥಿತಿಯನ್ನು ತಮ್ಮ ಕಿಂಗ್ ಫಿಶರ್ ಏರ್ ಲೈನ್ಸ್ ಪತನಕ್ಕೆ ಹೋಲಿಕೆ ಮಾಡಿರುವ ವಿಜಯ್ ಮಲ್ಯ, “ಕಿಂಗ್ ಫಿಶರ್ ಸೇರಿದಂತೆ ಭಾರತದ ಅನೇಕ ವಿಮಾನ ಸಂಸ್ಥೆಗಳು ಕುಸಿದಿವೆ ಎಂದು ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.
ಆದರೆ ಇದು ಮಲ್ಯನ ಬೃಹತ್ ನಾಟಕ. ಯಾವಾಗ ಕೇಂದ್ರ ಸರ್ಕಾರ ಮಲ್ಯನ ಗಡಿಪಾರು ಕುರಿತಂತೆ ಪಟ್ಟು ಹಿಡಿದು ಕೂತಿತೋ, ಮಲ್ಯನಿಗೆ ಉಸಿರುಗಟ್ಟಲಾರಂಭಿಸಿತು.
ಅಲ್ಲಿ ತನಕ ಬ್ಯಾಂಕ್ ಗಳನ್ನೇ ಆಟವಾಡಿಸಿದ್ದ ಚಪಲ ಚನ್ನಿಗರಾಯ ಇದೀಗ ತಾನು ಹರಿಶ್ಚಂದ್ರನ ಕುಟುಂಬಸ್ಥ ಅನ್ನುವಂತೆ ಆಡುತ್ತಿದ್ದಾನೆ. ಅವತ್ತೇ ಬ್ಯಾಂಕುಗಳು ನೋಟೀಸ್ ಕೊಡುವ ವೇಳೆ ಪಡೆದ ಸಾಲವನ್ನು ತೀರಿಸಿದ್ದರೆ ಸಮಸ್ಯೆ ಇರಲಿಲ್ಲ. ಬದಲಾಗಿ ಲಂಡನ್ ಓಡಿ ಬಂದು, ಈಗ ಸಾಲ ತೀರಿಸ್ತಿನಿ ಅಂದ್ರೆ ಆಗುತ್ತಾ..?