ಶಿವಮೊಗ್ಗ : ಸಾಗರ ಶಾಸಕ ದುಡ್ಡು ಸಿಕ್ಕಿಲ್ಲ ಅಂತಾ ಮರಳು ಮಾರಾಟ ನಿಲ್ಲಿಸಿದ್ದಾರೆ. ಅವರು ರಾಜಕೀಯ ಪ್ರೇರಿತವಾಗಿ ಮರಳು ಕ್ವಾರಿ ರದ್ದು ಮಾಡಲು ಹೊರಟಿದ್ದಾರೆ. ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಮಂಗನ ಕಾಯಿಲೆಯಿಂದ ಜನ ಸಾಯ್ತಾ ಇದಾರೆ. ಅದನ್ನು ಬಿಟ್ಟು ಇಲ್ಲಿ ದುಡ್ಡು ಮಾಡಲು ಶಾಸಕ ಬಂದಿದ್ದಾರೆ, ಥರ್ಡ್ ಕ್ಲಾಸ್ ಎಂಎಲ್ಎ ಎಂದು ಪರೋಕ್ಷವಾಗಿ ಸಾಗರ ಶಾಸಕ ಹರತಾಳು ಹಾಲಪ್ಪ ವಿರುದ್ಧ ಶಾಸಕ ಬೇಳೂರು ಗೋಪಾಲಕೃಷ್ಣ ವಾಗ್ದಾಳಿ ನಡೆಸಿದ್ದಾರೆ.
ಸಾಗರದಲ್ಲಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಬಿಜೆಪಿ ಶಾಸಕರು ಮರಳು ವಿಚಾರದಲ್ಲಿ ಪ್ರತಿಭಟನೆ ನಡೆಸುತ್ತಿರುವುದು ಕೇವಲ ನಾಟಕ ಎಂದರು.
ಇದೇ ವೇಳೆ ಬೇಳೂರು ಬಚ್ಚಾ ಎಂಬ ಶೋಭಾ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಬೇಳೂರು, ಶೋಭಾ ಕರಂದ್ಲಾಜೆ ಬಚ್ಚೀ. ಅವರು0 ಮಾಟ ಮಂತ್ರ ಮಾಡಿಸ್ತಾರೆ ಅಷ್ಟೇ. ಯಡಿಯೂರಪ್ಪನವರ ಜೊತೆ ಸೇರಿ ಬೆಳೆಯುತ್ತಿರುವ ಲೀಡರ್ಗಳಿಗೆ ಶೋಭಾ ಮಾಟಮಂತ್ರ ಮಾಡಿಸುತ್ತಾರೆ ಎಂದರು.