ಬೆಂಗಳೂರು : ಈಗಾಗಲೇ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ರಾಕಿಂಗ್ ಸ್ಟಾರ್ ಯಶ್.ಕಿಚ್ಚ ಸುದೀಪ್ ಸೇರಿದಂತೆ ಹಲವು ಸ್ಟಾರ್ ಗಳು ಸಾಮಾಜಿಕ ಕಳಕಳಿಯಿಂದ ಹಲವಾರು ಕಾರ್ಯಗಳನ್ನು ಮಾಡುತ್ತಿದ್ದಾರೆ. ಇದೀಗ ಇವರ ಸಾಲಿಗೆ ಹೊಸ ಸೇರ್ಪಡೆ ನೀನಾಸಂ ಸತೀಶ್.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಸತೀಶ್”ಬಹಳ ದಿನಗಳ ಹಿಂದೆಯೇ ಈ ಕೆಲಸ ಶುರುವಾಗಬೇಕಿತ್ತು. ಆದರೆ ಕೆಲವು ಕಾನೂನು ತೊಡಕುಗಳಿಂದ ಈ ಕೆಲಸ ಸ್ವಲ್ಪ ವಿಳಂಬವಾಗಿದೆ. ಇದೀಗ ಈ ‘ಸತ್ಯಪಥ’ ಟ್ರಸ್ಟ್ ಅನ್ನು ರಿಜಿಸ್ಟರ್ ಮಾಡಿದ್ದೇನೆ. ಈ ದಿಸೆಯಲ್ಲಿ ನಿಮ್ಮ ಬೆಂಬಲ ನಮಗಿರಲಿ” ಎಂದು ತಿಳಿಸಿದ್ದಾರೆ.
ಅಯೋಗ್ಯ, ಚಂಬಲ್ ಸಿನಿಮಾಗಳ ಸಕ್ಸಸ್‌ನಲ್ಲಿರುವ ಸತೀಶ್ ಸದ್ಯ ಬ್ರಹ್ಮಚಾರಿ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೆ ಚಿತ್ರೀಕರಣ ಪ್ರಾರಂಭವಾಗಿದ್ದು ಚಂದ್ರ ಮೋಹನ್ ನಿರ್ದೇಶನ ಮಾಡುತ್ತಿದ್ದಾರೆ. ಸತೀಶ್ ಗೆ ನಾಯಕಿಯಾಗಿ ಅದಿತಿಪ್ರಭುದೇವ ಕಾಣಿಸಿಕೊಳ್ಳುತ್ತಿದ್ದಾರೆ.