ಹಾಸನ : ಕೆಲ ದಿನಗಳ ಹಿಂದೆ SSLC ರಿಸಲ್ಟ್ ಬಂದಾಗ, ಹಾಸನ ದೊಡ್ಡ ಮಟ್ಟದಲ್ಲಿ ಸಾಧನೆ ಮಾಡಿತ್ತು. ಇದಾದ ಬೆನ್ನಲ್ಲೇ ಹಾಸನದ ಮಕ್ಕಳ ಸಾಧನೆಗೆ ಜಿಲ್ಲಾಧಿಕಾರಿಯಾಗಿ ರೋಹಿಣಿ ಸಿಂಧೂರಿಯವರೇ ಕಾರಣ ಎಂದು ಸಾಮಾಜಿಕ ಜಾಲತಾಣ ಕೊಂಡಾಡಿತ್ತು.
ಇದರಿಂದ ಸಿಟ್ಟಾಗಿದ್ದ ಸಚಿವ ರೇವಣ್ಣ, ರೋಹಿಣಿ ಸಿಂಧೂರಿ ಏನು ಮಾಡಿದ್ದಾರೆ. ಪತ್ನಿ ಭವಾನಿ ರೇವಣ್ಣ ಅವರ ಶ್ರಮದ ಫಲವಾಗಿ ಹಾಸನ ನಂಬರ್ 1 ಸ್ಥಾನಕ್ಕೆ ಬಂದಿದೆ ಎಂದು ಕೊಂಡಾಡಿದ್ದರು.
ಇದೀಗ ಭವಾನಿ ರೇವಣ್ಣ ಅವರು ಕೂಡಾ ರೋಹಿಣಿ ಸಿಂಧೂರಿ ಏನು ಮಾಡಿಲ್ಲ ಎಂದು ಪರೋಕ್ಷವಾಗಿ ಹೇಳಿದ್ದಾರೆ.
ಹಾಸನದಲ್ಲಿ ಮಾತನಾಡಿದ ಅವರು, ನಾನು ಆಯೋಜಿಸಿದ ಹಲವು ಕಾರ್ಯಕ್ರಮಗಳಿಂದಾಗಿ ಹಾಸನದ ಮಕ್ಕಳು SSLCಯಲ್ಲಿ ನಂಬರ್ 1 ಆಗಲು ಕಾರಣವಾಯಿತು. ನಮ್ಮ ಪ್ರಯತ್ನಕ್ಕೆ ಭಗವಂತ ಉತ್ತಮ ಫಲಿತಾಂಶವನ್ನು ಕೊಟ್ಟಿದ್ದಾನೆ.