ಇಂದು ಸಂಜೆ 6 ಕ್ಕೆ ತಾರಾನಾಥ್ ಮೆಲುಕು ಸಾಕ್ಷ್ಯಚಿತ್ರ ಬಿಡುಗಡೆ ಸಮಾರಂಭ ಮೈಸೂರು ರಂಗಾಯಣ ಹಾಗೂ ನಗುವನ ಕ್ರಿಯೇಷನ್ಸ್ ಸಹಯೋಗದಲ್ಲಿ ಜನವರಿ 31 ರಂದು ಸಂಜೆ 6 ಗಂಟೆಗೆ ರಂಗಾಯಣದಲ್ಲಿ ‘ರಾಜೀವ್ ತಾರಾನಾಥ್’ ಮೆಲುಕು ಸಾಕ್ಷ್ಯಚಿತ್ರ ಬಿಡುಗಡೆ ಮತ್ತು ಖ್ಯಾತ ಸರೋದ್ ವಾದಕ ಕೊಲ್ಕೊತ್ತದ ಸೌಗತ್ ರಾಯ್ ಅವರಿಂದ ಸರೋದ್ ವಾದನ ಏರ್ಪಡಿಸಲಾಗಿದೆ.
ರಂಗಾಯಣ ನಿರ್ದೇಶಕ ಅಡ್ಡಂಡ ಕಾರಿಯಪ್ಪ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಖ್ಯಾತ ಸರೋದ್ ವಾದಕ ಡಾ||ರಾಜೀವ್ ತಾರಾನಾಥ್ ಅವರ ಸಮ್ಮುಖದಲ್ಲಿ ಮೆಲುಕು ಸಾಕ್ಷ್ಯಚಿತ್ರವನ್ನು ಸಾಹಿತಿ ಹಾಗೂ ಚಿಂತಕರಾದ ಡಾ||ವಿಜಯಮ್ಮ ಅವರು ಬಿಡುಗಡೆ ಮಾಡಲಿದ್ದಾರೆ.
ಸನಾತನ ಎಂದರೆ ಶಾಶ್ವತ ಎಂದರ್ಥ, ಜವಾಬ್ದಾರಿಯುತ ಸ್ಥಾನದಲ್ಲಿರುವವರು ಎಚ್ಚರಿಕೆಯಿಂದ ಹೇಳಿಕೆ ನೀಡಿದರೆ ಒಳಿತು: ನಿರ್ಮಲಾನಂದ ಸ್ವಾಮೀಜಿ
ಸನಾತನ ಎಂದರೆ ಶಾಶ್ವತ ಎಂದರ್ಥ, ಅಂದರೆ ಹಿಂದೆಯೂ ಇತ್ತು, ಈಗಲೂ ಇದೆ, ಮುಂದೆಯೂ ಇರುತ್ತದೆ. ಅದೇ ಸನಾತನ. ಜವಾಬ್ದಾರಿಯುತ ಸ್ಥಾನದಲ್ಲಿರುವವರು ಎಚ್ಚರಿಕೆಯಿಂದ ಹೇಳಿಕೆ ನೀಡಬೇಕೆಂದು ಆದಿಚುಂಚನಗಿರಿಯ ಶ್ರೀನಿರ್ಮಲಾನಂದ...