ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 136ನೆ ಹುಟ್ಟು ಹಬ್ಬದ ನೆನಪಿಗಾಗಿ…
ಮೈಸೂರು ಎಂದಾಕ್ಷಣ ಯಾರಿಗಾದರೂ ಕಣ್ಣಮುಂದೆ ಬರುವುದೇ ಅಂಬಾವಿಲಾಸ ಅರಮನೆ. ಈ ಭವ್ಯವಾದ ಅರಮನೆ ಇಂಡೋ-ಸಾರ್ಸೆನಿಕ್

ಶೈಲಿಯ ವಾಸ್ತು ಶಿಲ್ಪದಲ್ಲಿ ನಿರ್ಮಾಣವಾಗಿದೆ. “ಅರಮನೆಗಳ ನಗರ” ಎಂದೇ ಕರೆಯಲ್ಪಡುವ ಮೈಸೂರಿನಲ್ಲಿ ಏಳು ಅರಮನೆಗಳಿವೆ. ಆದರೆ, ಅಂಬಾವಿಲಾಸ ಅರಮನೆಯು ಎಲ್ಲಾ ಅರಮನೆಗಳಿಗಿಂತ ಭವ್ಯವಾಗಿದೆ. ಇದರ ನಿರ್ಮಾಣ 1897ರಲ್ಲಿ ಪ್ರಾರಂಭವಾಗಿ, 1912ರಲ್ಲಿ ಮುಗಿಯಿತು. ಈ ಹಿಂದೆ ಈಗಿರುವ ಅಂಬಾವಿಲಾಸ ಅರಮನೆಯ ಜಾಗದಲ್ಲಿ ಮರದಿಂದ ಮಾಡಿದ ಅರಮನೆ ಇತ್ತು. ಮರದ ಅರಮನೆಗೆ ಬೆಂಕಿ ಬಿದ್ದು ಸುಟ್ಟುಹೋದ ನಂತರ, ಇದನ್ನು ಕಟ್ಟಲಾಯಿತು. ಇದನ್ನು ಒಡೆಯರ್ ರಾಜವಂಶದ 24ನೇ ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಗಾಗಿ ನಿರ್ಮಿಸಲಾಯಿತು. ಇದು ದೇಶದ ಅತಿ ದೊಡ್ಡ ಅರಮನೆಗಳಲ್ಲಿ ಒಂದಾಗಿದೆ.
ಅರಮನೆÀ ನಿಂತಿರುವ ಭೂಮಿಯನ್ನು ಪುರಗಿರಿ ಎಂದು ಕರೆಯಲಾಗುತ್ತಿತ್ತು. ಈಗ ಇದನ್ನು ಹಳೆಯ ಕೋಟೆ ಎಂದು ಕರೆಯಲಾಗುತ್ತಿದೆ. ಯದುರಾಯ 14 ನೇ ಶತಮಾನದಲ್ಲಿ ಹಳೆಯ ಕೋಟೆಯೊಳಗೆ ಮೊದಲ ಅರಮನೆಯನ್ನು ನಿರ್ಮಿಸಿದನು.ಅದನ್ನು ನೆಲಸಮಗೊಳಿಸಿ ಅನೇಕಬಾರಿ ನಿರ್ಮಿಸಲಾಯಿತು. ಹಳೆಯ ಅರಮನೆಯು ಸುಟ್ಟುಹೋದ ನಂತರ ಪ್ರಸ್ತುತ ರಚನೆಯನ್ನು ನಿರ್ಮಿಸಲಾಯಿತು. ಹೊಸ ಅರಮನೆಯನ್ನು ನಿರ್ಮಿಸಲು ಬ್ರಿಟಿಷ್ ವಾಸ್ತುಶಿಲ್ಪಿ ಹೆನ್ರಿ ಇರ್ವಿನ್ ಅವರನ್ನು ನಿಯೋಜಿಸಿದರು. ಇದರ ನಿರ್ಮಾಣ ವೆಚ್ಚ ರೂ. 41,47,913. ಜಯಚಾಮರಾಜೇಂದ್ರ ಒಡೆಯರ್ ಅವರು 1930 ರಲ್ಲಿ ಅರಮನೆಯನ್ನು ವಿಸ್ತರಿಸಿದರು.

ಅರಮನೆಯ ಮುಂಭಾಗವು ಹಿಂದೂ, ಮುಸ್ಲಿಂ, ರಜಪೂತ್ ಮತ್ತು ಗೋಥಿಕ್ ಶಿಲ್ಪಕಲೆಗಳ ಸಾಮರಸ್ಯವಾಗಿದೆ. ಇದು ಸುಮಾರು 600 ವµðಗಳ ಶ್ರೀಮಂತ ಇತಿಹಾಸವನ್ನು ಹೊಂದಿದೆ. 1350 ರಿಂದ 1950ರ ವರೆಗೆ ‘ಒಡೆಯರ್’ ರಾಜಮನೆತನದ ನಿವಾಸವಾಗಿತ್ತು. ಇದು ಅಮೃತ ಶಿಲೆಯ ಗುಮ್ಮಟಗಳನ್ನು ಹೊಂದಿರುವ 3 ಅಂತಸ್ತಿನ ಕಲ್ಲಿನ ಅರಮನೆಯಾಗಿದ್ದು, 145 ಅಡಿ ಎತ್ತರದ 5 ಅಂತಸ್ತಿನ ಗೋಪುರವನ್ನು ಹೊಂದಿದೆ. ಸಾಮ್ರಾಜ್ಯದ ಧ್ಯೇಯವಾಕ್ಯ ‘ಎಂದಿಗೂ ಭಯಭೀತರಾಗುವುದಿಲ್ಲ’ ಎಂಬುದನ್ನು ಸಂಸ್ಕೃತದಲ್ಲಿ ಪ್ರವೇಶದ್ವಾರ ಮತ್ತು ಕಮಾನುಗಳಲ್ಲಿ ಬರೆಯಲಾಗಿದೆ. ಸಂಕೀರ್ಣದ ಒಳಗೆ 18 ದೇವಾಲಯಗಳಿವೆ.

ವೈಭವೋಪೇತ ಮೈಸೂರಿನ ಮಹಾರಾಜರಾಗಿದ್ದ ಹತ್ತನೇ ಚಾಮರಾಜೇಂದ್ರ ಒಡೆಯರ್ ಅವರು ಮತ್ತು ಮಹಾರಾಣಿ ವಾಣಿವಿಲಾಸ ಸನ್ನಿಧಾನ ದಂಪತಿಗಳಿಗೆ ಒಂದು ಮುದ್ದಾದ ಗಂಡುಮಗು ಜನಿಸಿತು. ಎಲ್ಲೆಲ್ಲೂ ಹರುಷ, ಸಂಭ್ರಮ, ಸಿಹಿ ವಿತರಣೆ. ದಂಪತಿಗಳಿಗೆ ನವೋಲ್ಲಾಸ. ಜೂನ್ 4, 1884 ರಂದು ಜನಿಸಿದ ಕೂಸಿಗೆ ಕೃಷ್ಣರಾಜೇಂದ್ರ ಎAದು ನಾಮಕರಣ ಮಾಡಿದರು. ಈ ಉಲ್ಲಾಸ ಬಹಳಕಾಲ ಉಳಿಯಲಿಲ್ಲ. ಶ್ರೀ ಚಾಮರಾಜೇಂದ್ರ ಒಡೆಯರ್ ರವರು 1894ರಲ್ಲಿ ಕಲ್ಕತ್ತಾ ನಗರದಲ್ಲಿ ಕಾಲವಾದರು.

ಶ್ರೀ ಕೃಷ್ಣರಾಜೇಂದ್ರ ಒಡೆಯರ್ ರವರು ಬಹಳ ಚಿಕ್ಕವರಾಗಿದ್ದರಿಂದ, ಮಹಾರಾಣಿಯವರು ರಾಜ್ಯವಾಳಲು ತಾವೇ ಮುಂದಾದರು. ಮಗನ ಹೆಸರಿನಲ್ಲಿ ತಾವೇ ರಾಜ್ಯವನ್ನು ಬಹಳ ದಿಟ್ಟತನದಿಂದ ಆಳಿದರು. 8 ಆಗಸ್ಟ್ 1902ರ ವರೆಗೆ ಶಾಸಕಿಯಾಗಿ, ಕಾರ್ಯ ನಿರ್ವಹಿಸಿದರು. ಈ ಸಮಯದಲ್ಲಿ, ತೀರ್ವವಾದ ಪ್ಲೇಗ್ ರೋಗ ಹರಡಿತು. ಒಂದೇ ಸೂರಿನಡಿಯಲ್ಲಿ ಎಲ್ಲಾ ವೈದ್ಯಕೀಯ ಸೌಲಭ್ಯಗಳು ಸಿಗುವಂತೆ ಆಸ್ಪತ್ರೆಯನ್ನು ಬೆಂಗಳೂರಿನಲ್ಲಿ ಕಟ್ಟಿಸಿದರು.
ಸಾಮ್ರಾಜ್ಯದ 60 ವರ್ಷಗಳ ಆಳ್ವಿಕೆಯ ನೆನಪಿಗಾಗಿ ಆಸ್ಪತ್ರೆಯನ್ನು ರಾಣಿ ವಿಕ್ಟೋರಿಯ ಅವರಿಗೆ ಅರ್ಪಿಸಿದರು. ವಿಕ್ಟೋರಿಯ ಆಸ್ಪತ್ರೆ ಇಂದಿಗೂ ಪ್ರಸಿದ್ಧವಾಗಿದೆ. ಮಹಿಳೆಯರು ಮತ್ತು ಮಕ್ಕಳಿಗಾಗಿ ವಾಣಿವಿಲಾಸ ಆಸ್ಪತ್ರೆ ಪ್ರಾರಂಭಿಸಿದರು. ವಿವಿಧ ಭಾಗಗಳಲ್ಲಿ ಔಷಧಾಲಯಗಳನ್ನು ಪ್ರಾರಂಭಿಸಿದರು. ಬೆಂಗಳೂರಿನ ವಾಣಿವಿಲಾಸ ಸೇತುವೆ, ಕಬಿನಿ ನದಿಗೆ ಅಡ್ಡಲಾಗಿರುವ ವಾಣಿವಿಲಾಸ ಸೇತುವೆ ಮತ್ತು ಚಿತ್ರದುರ್ಗ ಜಿಲ್ಲೆಯ ವಾಣಿ ವಿಲಾಸ ಸಾಗರ ಅಣೆಕಟ್ಟು ಇವೆಲ್ಲವನ್ನೂ 28 ವಯಸ್ಸಿನ ಹಿತಚಿಂತಕಿ, ಮಹಾರಾಣಿಯವರು ಸಾಧಿಸಿ ತೋರಿಸಿದ್ದಾರೆ. ಕನ್ನಡ, ಸಂಸ್ಕೃತ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಉತ್ತಮ ಶಿಕ್ಷಣವನ್ನು ಪಡೆದಿದ್ದರು. ಆದ್ದರಂದಲೇ ಹೆಣ್ಣುಮಕ್ಕಳ ಅಭಿವೃದ್ಧಿಗೆ ಶ್ರಮಿಸಿದರು.
ಮುಂದುವರೆಯುವುದು..