ಕಾಫಿ with MDP
ಮೊನ್ನೆ ದೆಹಲಿಯಲ್ಲಿ ಆಗುತ್ತಿರುವ ಗಲಾಟೆಯನ್ನು ನೋಡಿ ನಮ್ಮ ಸಿಬ್ಬಂದಿ ವರ್ಗದವರ ಯೋಗಕ್ಷೇಮ ವಿಚಾರಿಸಲು ಕರೆಮಾಡಿದೆವು,”ಇಲ್ಲಿ ಯಾವ ಗಲಾಟೆಯು ಇಲ್ಲ…ಇದರ್ ಸಬ್ ಟೀಕ್ ಹೈ “ಎಂದ ನಮ್ಮ ಸಹೋದ್ಯೋಗಿ ಪ್ರಕಾಶ್ ದರ್ಗಾರ್.ಆದರೆ ಇಲ್ಲಿ ದೆಹಲಿಯೇ ಹತ್ತಿ ಉರಿಯುತ್ತಿದೆ ಎನ್ನುವ ಹಾಗೆ ಬಿತ್ತರವಾಗುತ್ತಿದೆ, ನಮಗಂತೂ ಇದೆಲ್ಲ ಏತಕ್ಕಾಗಿ, ಎನ್ನುವುದೇ ಅರ್ಥವಾಗುವುದಿಲ್ಲ, ಈಗಂತು ನಮ್ಮ ಸಂಸ್ಥೆಯ ವ್ಯಾಪಾರ ವಹಿವಾಟು ಎಲ್ಲಾ ರಾಜ್ಯಗಳಲ್ಲು ವಿಸ್ತರಿಸಿದೆ, ಅಡಿಗೆಗೆ ಬೇಕಾದ ಸಾಮಾನುಗಳನ್ನು ಪೂರೈಸಲು ಒಬ್ಬ ಫ್ರಾಂಕ್ಲಿನ್ ಬೇಕು,ನಮ್ಮ ಮಳಿಗೆಗಳನ್ನು ವಿನ್ಯಾಸಗೊಳಿಸಲು ಒಬ್ಬ ಇಬ್ರಾಹಿಮ್ ಬೇಕು,ಎಲ್ಲಾ ಭಾಷೆಯ,ಧರ್ಮದ, ಜಾತಿಯ ನಾವುಗಳು ಹೀಗೆ ಇನ್ನು ಹತ್ತು ಹಲವಾರು ವಿಷಯಗಳಿಗೆ ಒಬ್ಬರಿಗೊಬ್ಬರು ಹೊಂದಿಕೊಂಡಿದ್ದೇವೆ, ಅನ್ಯೋನ್ಯವಾಗಿ ಸಂಸ್ಥೆಯ ಬೆಳವಣಿಗೆಗೆ ಪೂರಕವಾಗಿದ್ದೇವೆ ಎಂದೂ ಕೂಡ ನಾವೆಲ್ಲಾ ಬೇರೆಯವರೆಂದೆನಿಸಿಲ್ಲ, ಆದರೆ ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಲ್ಲಿ ಮಾತ್ರ ದೇಶದೆಲ್ಲಡೆ ದ್ವೇಷ,ದೊಂಬಿ,ಅತ್ಯಾಚಾರ,ರೋಗ,ಪ್ರಳಯ,ಕೊಲೆ, ಸುಲಿಗೆ,ಧರ್ಮ, ಜಾತಿ,ರಾಜಕಾರಣ ಇಂತಹ ವಿಷಯಗಳೆ ದಿನ ಪೂರ್ತಿ ಬಿತ್ತರವಾಗುತ್ತವೆ, ಎಲ್ಲಾ ರಾಜ್ಯಗಳನ್ನು ಭೇಟಿ ಕೊಡುವ ನಮಗೆ ಇಂತಹ ಯಾವ ವಿಷಯಗಳು ನಮ್ಮ ಅನುಭವಕ್ಕೆ ಬಂದಿಲ್ಲ,!ಹಾಗಾದರೆ ನಾವೇ ಕುರುಡರೆ !ತಿಳಿಯದು, ನನಗಂತೂ ಪತ್ರಿಕೆ ಮತ್ತು ಟಿವಿ ವಾರ್ತೆಗಳನ್ನು ನೋಡಲು ನಿಲ್ಲಿಸಿದ ಮೇಲೆ ಅಹಾ! ನಮ್ಮ ದೇಶ ಎಷ್ಟು ಶಾಂತವಾಗಿದೆ ಎಂದೆನಿಸಿದೆ,ಅದಕ್ಕೆ ದೊಡ್ಡವರು ಹೇಳಿರುವುದು ‘ನಾವು ನೋಡುವ ದೃಷ್ಟಿ ಬದಲಾಗಬೇಕೆಂದು’! ಆದರೆ ಇದೆಲ್ಲಾ ಏತಕ್ಕಾಗಿ ಆಗುತ್ತಿದೆ, ಯಾರಿಗೋಸ್ಕರ,! ನನಗನ್ನಿಸಿದ್ದು ಇಷ್ಟೆ ಕೆಲವೇಮಂದಿಯ ಸ್ವಾರ್ಥ ಸಾಧನೆಗಾಗಿ ಹಾಗು ಮತ ಕ್ರೋಢೀಕರಣದ ಒಂದು ಪಗಡೆ ಆಟ ಅಷ್ಟೆ,!

ಧರ್ಮ, ಜಾತಿ,ಭಾಷೆ, ಎಡ,ಬಲ ಎಂಬ ವಿಚಿತ್ರ ನಂಬಿಕೆಗಳನ್ನು ನಮ್ಮ ತಲೆಯಲ್ಲಿ ತುಂಬಿ,ನೀರೆರೆದು ಪೋಷಿಸಿ, ನಮ್ಮಗಳ ನಡುವೆ ದ್ವೇಷದ ವಾತವರಣವನ್ನು ಕಾಪಾಡಿಕೊಳ್ಳುತ್ತಾರೆ.ಅದನ್ನು ನಂಬಿದ ನಾವು ಒಬ್ಬರಿಗೊಬ್ಬರು ಹೊಡೆದಾಡಿ ಪ್ರಾಣವನ್ನು ಕಳೆದುಕೊಳ್ಳುತೇವೆ,ನಮ್ಮ ಮೂರ್ಖತನವನ್ನು ನೋಡಿ ಅವರು ನಗುತಿರುತ್ತಾರೆ,!!
ಅವರ ದೃಷ್ಟಿಯಲ್ಲಿ ನಾವು ಮೂಲಭೂತ ಸಮಸ್ಯೆ, ಅಭಿವೃದ್ಧಿ, ಭ್ರಷ್ಟಾಚಾರ, ಆರ್ಥಿಕತೆ,ವಿದ್ಯೆ,ಸಾರಿಗೆ ನೀರಾವರಿ, ರೈತ, ಕೃಷಿ, ನಿರುದ್ಯೋಗ,ರಕ್ಷಣೆ ಇಂತಹ ಹತ್ತು ಹಲವಾರು ನಿಜವಾದ ಸಮಸ್ಯೆಗಳಿಗೆ ಯಾವುದೇ ಚಳವಳಿಗಳಾಗಬಾರದು,ಇಂತಹ ವಿಷಯಗಳಿಗೆ ನಡೆದ ಯಾವ ಚಳವಳಿಗಳನ್ನು ಮುಂದುವರಿಯಲು ಬಿಟ್ಟಿಲ್ಲ!!.
ನಮ್ಮ ಕುರುಡು
ಅಭಿಮಾನದ
ಪೊರೆಯನ್ನು ಕಳಚಿ ನೋಡಿದರೆ ಮಾತ್ರ
ಎಲ್ಲರಿಗೂ ಒಳಿತಾಗುವುದು..
-ಮಹದೇವ್ ಪ್ರಸಾದ್