ಕಾಫಿ with MDP
“ಮೊಟ್ಟೆ ಮೊದಲ ಕೋಳಿ ಮೊದಲ “ಎಂದು ಆಗಾಗ ಮಾತನಾಡುತ್ತಿರುತ್ತೇವೆ,
ವ್ಯಾಪಾರದ ಅನುಭವವಿಲ್ಲ,ಯಾವುದಾದರೂ ಒಳ್ಳೆಯ ಕೆಲಸಕ್ಕೆ ಹೋಗೋಣವೆಂದರೆ ಸರಿಯಾಗಿ ಓದಿಲ್ಲ,ಬಂಡವಾಳವಿಲ್ಲ,ಯಾವ ವ್ಯಾಪಾರ ಮಾಡುವುದು ತಿಳಿಯದು,
‘ಅನುಭವ ಪಡೆದು ವ್ಯಾಪಾರ ಮಾಡಬೇಕ,ವ್ಯಾಪಾರ ಮಾಡಿ ಅನುಭವ ಪಡೆಯಬೇಕ’ ಗೊಂದಲ ,
ಜೆ ಪಿ ನಗರದ VET college canteen ಗೆ 200 ಗ್ರಾಂ ಕಾಫಿ delivery ಮಾಡಲು ಬೊಮ್ಮಸಂದ್ರದಿಂದ 15 km scooter ನಲ್ಲಿ ಬರಲಾಗುತ್ತಿತ್ತು,ಇದು ಬೇರೆಯವರಿಗೆ ಹುಚ್ಚುತನ,ಅನುಭವದ ಕೊರತೆ ಎನ್ನಿಸುತ್ತಿತ್ತು,ನಮಗೋ ಗ್ರಾಹಕರು “ಕಾಫಿ ಚೆನ್ನಾಗಿದೆ ನಾಳೆಯೂ ಕೊಡಿ” ಎಂದರೆ ಎಲ್ಲಿಲ್ಲದ ಆನಂದ,
software company ಯ foodcourt ನಲ್ಲಿ ಅವಕಾಶ ಕೊಡುತ್ತೇನೆ ನಿಮ್ಮ ಹತ್ತಿರ shop establishment ,TIN ,PF ಮತ್ತು ESI number ತನ್ನಿ ಎಂದಾಗ,”ಇದು ಬೇರೆ ಇದೆಯಾ”!! ಎನ್ನುವಷ್ಟು ದಡ್ಡತನ,
ಸರಿ,ಒಂದು ಆಫೀಸು ಇಲ್ಲ,address proof ಇಲ್ಲ,ಇದೆಲ್ಲ ಮಾಡಿಸಲು ತಗಲುವ ಖರ್ಚು ವೆಚ್ಚ ಭರಿಸಲು ಹಣ ಇಲ್ಲ, ಬಲ್ಲ ಮೂಲಗಳಿಂದ ಹೇಳಿ ಕೇಳಿ ಎಲ್ಲವನ್ನೂ ವ್ಯವಸ್ಥೆ ಮಾಡಿದ ಮೇಲೆ, ದೊಡ್ಡ ಸಾಧನೆ ಮಾಡಿದಂತೆಯೇ ಭಾವನೆ, ಉತ್ತಮವಾದ, ಶುಚಿಯಾದ ಮತ್ತು ರುಚಿಯಾದದ್ದನ್ನೇ ಗ್ರಾಹಕರಿಗೆ ಕೊಟ್ಟು,ಅವರ ಹೊಗಳಿಕೆಯ ಮಾತುಗಳನ್ನು ಕೇಳುವುದಕ್ಕಷ್ಟೇ ಮನಸ್ಸು ಅಭ್ಯಾಸವಾಗಿತ್ತೆ ವಿನಹ,
ವ್ಯಾಪಾರದ ಸಾಮಾನ್ಯ ಜ್ಞಾನವಾಗಲಿ,ಲಾಭ ನಷ್ಟದ ಅರಿವಾಗಲಿ,ಸೋಲುತ್ತೇವೆಂಬ ಹೆದರಿಕೆಯಾಗಲಿ,statutory, sales tax,income tax ಎನ್ನುವ ಸರ್ಕಾರದ ಗುಮ್ಮಕ್ಕಾಗಲಿ ಭಯವಾಗುತ್ತಿರಲಿಲ್ಲ, ಮೊದಲು Infosys ಸಂಸ್ಥೆಗೆ ಅವಕಾಶವನ್ನು ಕೇಳಿಕೊಂಡು ಹೋದಾಗ,”ನಿಮ್ಮದೇನು special,ನಮ್ಮಲ್ಲಾಗಲೆ Coffee Day shop ಇದೆ,ಎಲ್ಲಾ floors ಗಳಲ್ಲೂ coffee vending machine ಇದೆ,ಕಡಿಮೆ ಸಮಯವಿರುವುದರಿಂದ ಕಾಫಿಗಾಗಿ ಉದ್ಯೋಗಿಗಳು food courtಗೆ ಬರುವುದಿಲ್ಲ”,ಎಂದು ಹೇಳಿ ನಮ್ಮ ಮಾತನ್ನೇ ಕೇಳುತ್ತಿರಲಿಲ್ಲ,
“ಕೇವಲ ಎರಡೇ ತಿಂಗಳು ಕೊಟ್ಟು ನೋಡಿ “ಎಂದು ಇನ್ನಿಲ್ಲದಂತೆ ಗೋಗರೆದು ಅವಕಾಶ ಗಿಟ್ಟಿಸಿದ್ದೆವು,
ಮುಂದೆ Infosys ನಮಗೆ ಚಂಡಿಗಢ್,ಮೊಹಾಲಿ,ಜ್ಯೆಪುರ್,ಭುವನೇಶ್ವರ್,
ಪುಣೆ,ಹೈಡ್ರಾಬಾದ್,ತ್ರಿವೇಂಡ್ರಮ್,ಮೈಸೂರು ಮತ್ತು ಬೆಂಗಳೂರಿನಲ್ಲೂ ನಮಗೆ ಅವಕಾಶ ಕಲ್ಪಿಸಿದರು,ಈ ಎಲ್ಲಾ ಸ್ಥಳಗಳಲ್ಲೂ ಕಳೆದ 8 ವರ್ಷಗಳಿಂದ ನಮ್ಮ ಸಂಸ್ಥೆ ಯಶಸ್ವಿಯಾಗಿ ನಡೆಸಿಕೊಂಡು ಹೋಗುತ್ತಿದೆ…..
“ಬೇರೆ ಭಾಷೆಯೇ
ಗೊತ್ತಿಲ್ಲದ ಒಬ್ಬ
ಮಂಡ್ಯದ ಹಳ್ಳಿಯ
ಹೈದನ ಕೈಯಲ್ಲೂ
ಇದು ಸಾಧ್ಯವಾಯಿತು” !!!