ಅಪ್ಪ ನೀನು ಅಮ್ಮನಿಗಿಂತ ಒಂದು ಕೈ ಹೆಚ್ಚೇ ಆಗ್ಬಿಟ್ಟೆ ನಮಗೆ ….!
ಹೋಗೋ ಬಾರೋ ಎಂದು ಕರೆದು ನಮ್ಮನ್ನು ಗಂಡು ಮಕ್ಕಳಿಗಿಂತ ಒಂದು ಕೈ ಹೆಚ್ಚಾಗಿ ಬೆಳೆಸಿ ಬಿಟ್ಟೆ ….!
ಚಿಕ್ಕ ವಯಸ್ಸಿನಲ್ಲಿ ಅಮ್ಮನನ್ನು ಕಳೆದುಕೊಂಡರೂ ಅಮ್ಮನಿಗಿಂತ ಹೆಚ್ಚಾಗಿ ನೋಡಿಕೊಂಡು ಬಿಟ್ಟೆ ….!
ಎಲ್ಲರಿಗಿಂತ ಬೇಗ ಎದ್ದು ಹಾಲು ಕಾಯಿಸಿ ನಮಗೆ ಕೊಟ್ಟು, ಸ್ನಾನಕ್ಕೆ ನೀರು ಕಾಯಿಸುತ್ತಿದೆ. ….!

ಅಡುಗೆ ಬರದಿದ್ದರೂ ಕೈ ಬಾಯಿ ಸುಟ್ಟುಕೊಂಡು ನಮಗೆ ತಿಂಡಿ ಮಾಡಿಕೊಟ್ಟು ಸ್ಕೂಲಿಗೆ ಕಳಿಸುತ್ತಿದ್ದೆ ….!
ಹುಡುಗರೆನಾದರೂ ರೇಗಿಸಿ, ನಾನು ಅಳುತ್ತಾ ಮನೆಗೆ ಬಂದಾಗಾ ನನಗೆ ಸ್ನೇ ಹಿತನಂತೆ ಧೈರ್ಯವಾಗಿ ಪ್ರಪಂಚವನ್ನು ಎದುರಿಸುವುದನ್ನು ಹೇಳಿಕೊಟ್ಟೆ ….!
ಲಂಗ ಜಾಕೆಟ್ ಹಾಕಿಕೊಳ್ಳುತ್ತಿದ್ದ ನನಗೆ ಪ್ಯಾಂಟು ಶರ್ಟ್ ನಲ್ಲಿ ಚೆನ್ನಾಗಿ ಕಾಣುತ್ತೀಯಾ, ಮಿಡಿಯಲ್ಲಿ ಮುದ್ದಾಗಿ ಕಾಣುತ್ತೀಯಾ ಎಂದು ಫ್ಯಾಷನ್ ಹೇಳಿಕೊಟ್ಟೆ ….!

ಹುಸೇನ್ ಸಾಬರ ಅಂಗಡಿಯಲ್ಲಿ ಬಾಡಿಗೆ ಸೈಕಲ್ ಸಿಗದೆ ಅಳುತ್ತಿದ್ದ ನನಗೆ ಹೊಸಾ ಸೈಕಲ್ ಕೊಡಿಸಿ ಸಂತೋಷ ಪಟ್ಟೆ ….!
ಅಣ್ಣನನ್ನು ಕಾಲೇಜ್ ಟ್ರಿಪ್ಗೆ ಕಳಿಸಲು ಹೆದರುತ್ತಿದ್ದ ನೀನು ನನ್ನನ್ನು ಮಾತ್ರ ಧೈರ್ಯವಾಗಿ ಕಾಲೇಜಿನ ಎಲ್ಲಾ ಟ್ರಿಪ್ ಗಳಿಗೂ ಕಳಿಸಿದೆ ….! .

ಕಾರು ಓಡಿಸಲು ಹೆದರುತ್ತಿದ್ದ ನನಗೆ ಪಕ್ಕದಲ್ಲಿ ಕುಳಿತು ಧೈರ್ಯವಾಗಿ ಓಡಿಸು ನಾನಿದ್ದೇನೆ ಎಂದು ಹೆದರದೆ ನನ್ನ ಪಕ್ಕ ಸೀಟ್ ಬೆಲ್ಟ್ ಹಾಕಿಕೊಂಡು ಕುಳಿತುಕೊಳ್ಳುತ್ತ ನನಗೆ ಆತ್ಮವಿಶ್ವಾಸ ತುಂಬುತ್ತಿದೆ ….!
ಅಣ್ಣ ಲೇಟಾಗಿ ಬಂದರೆ ಬೈಯುತ್ತಿದ್ದ ನೀನು, ನಾನು ಲೇಟಾಗಿ ಬಂದರೆ ಮಾತ್ರ ಊಟಕ್ಕೆ ಲೇಟ್ ಆಯಿತು ಬೇಗ ಬರಬಾರದೆ ಎನ್ನುತ್ತಿದ್ದೆ . ….!
ಅಣ್ಣ ಖರ್ಚಿಗೆ ದುಡ್ಡು ಕೇಳಿದಾಗ ಯಾಕೆ ಎಂದು ಕಾರಣ ಕೇಳುತ್ತಿದ್ದ ನೀನು, ನನಗೆ ಮಾತ್ರ ನೂರು ರುಪಾಯಿ ಹೆಚ್ಚಿಗೆಯೇ ಕೊಡುತ್ತಿದ್ದೆ . ….!
ಮದುವೆಯ ಸಮಯದಲ್ಲಿ ಪಾಪ ಹುಡುಗ ನಿನ್ನ ಹತ್ತಿರ ಹೇಗೆ ಬಾಳುತ್ತಾನೆ ಎಂದು ರೇಗಿಸಿ, ನನಗೆ ಹುಸಿ ಮುನಿಸು ತರಿಸುತ್ತಿದೆ .. ….!
ಪ್ರಪಂಚದಲ್ಲಿ ಎಲ್ಲಿ ಬೇಕಾದರೂ ಒಬ್ಬಳೇ ಓಡಾಡುವ ಶಕ್ತಿ ನಿನಗಿದೆ ಎಂತಹ ಕಷ್ಟವನ್ನೂ ಧೈರ್ಯದಿಂದ ಎದುರಿಸುತ್ತಿಯಾ, ಎಂಬ ಆತ್ಮವಿಶ್ವಾಸವನ್ನು ತುಂಬಿದೆ ….!

ಅಪ್ಪ ಸಿಂಪ್ಲಿ ಯು ಆರ್ ವೆರಿ ವೆರಿ ಗ್ರೇಟ್ ರೋಲ್ ಮಾಡಲ್ ಫಾರ್ ಆಲ್ ಫಾದರ್ಸ್ . ….!
ಅಪ್ಪನ ಜೊತೆ ಜೊತೆಯಲ್ಲಿ ಹಾಗೂ ಅಪ್ಪನ ನಂತರ ಅಪ್ಪನ ಎಲ್ಲಾ ಕರ್ತವ್ಯಗಳನ್ನು ಮಾಡಿ. ಎಲ್ಲೂ ಅಮ್ಮನ ಕೊರತೆ ಕಾಣಿಸದಂತೆ ನೋಡಿಕೊಂಡ ನೀನು ನನಗೆ ತಂದೆ ತಾಯಿ ಎಲ್ಲಾ ….!
ಮದರ್ಸ್ ಡೇ ಫಾದರ್ಸ್ ಡೇ ಎರಡು ದಿನ ವಿಶ್
ಮಾಡಿಸಿಕೊಳ್ಳುವ ಏಕೈಕ ವ್ಯಕ್ತಿ ನೀನೇ … !