ಇಂದಿನ Busy ಲೈಫ್ ನಲ್ಲಿ ರೇಡಿಯೋ ಜನರಿಗೆ ತುಂಬಾ ಹತ್ತಿರವಾದ ಅದ್ಭುತ ಮಾಧ್ಯಮವಾಗಿದೆ. ಜಾಗತೀಕರಣದಿಂದಾಗಿ ಕಳೆದ ಹತ್ತು ವರ್ಷಗಳಿಂದೀಚೆಗೆ ಹಲವಾರು ರೇಡಿಯೋ ಸ್ಟೇಷನ್ ಗಳು ತಲೆ ಎತ್ತಿವೆ. ಪ್ರಾದೇಶಿಕ ಭಾಷೆಗಳಿಗೆ ಹೆಚ್ಚಿನ ಒತ್ತು ನೀಡಿದ್ದರಿಂದ, ನಿರೂಪಕರು ಗ್ರಾಂಥಿಕ ನಿರೂಪಣಾ ಶೈಲಿಯನ್ನು ಬದಿಗಿರಿಸಿ ಆಡು ಭಾಷೆಯಲ್ಲಿಯೇ ಕಾರ್ಯಕ್ರಮ ನಡೆಸಿ ಕೊಟ್ಟದ್ದರಿಂದ ಬಹಳ ಬೇಗ ಖಾಸಗೀ ರೇಡಿಯೋ ವಾಹಿನಿಗಳು ಬೇಗ ಜನರ ಬದುಕಿನಲ್ಲಿ ಹಾಸು ಹೊಕ್ಕಾಗಿವೆ. ಈಗ ಬೆಂಗಳೂರಷ್ಟೇ ಖಾಸಗೀ ರೇಡಿಯೋಗಳ ಕಾರ್ಯಕ್ಷೇತ್ರವಾಗಿ ಉಳಿದಿಲ್ಲ, ಆಕಾಶವಾಣಿಯಂತೆಯೇ ರಾಜ್ಯದ ಪ್ರಮುಖ ನಗರಗಳಲ್ಲಿಯೂ, ಅಲ್ಲಿಯದ್ದೇ ಸೊಗಡಿನ ಕಾರ್ಯಕ್ರಮಗಳೊಂದಿಗೆ ತಮ್ಮ ಶಾಖೆಗಳನ್ನು ವಿಸ್ತರಿಸಿದ್ದಾರೆ. ಅದ್ರಲ್ಲೂ ಈಗಿನ ಕೋರೊನಾ ಟೈಮ್ನಲ್ಲಿ ಜನರಿಗೆ ಮನರಂಜನೆ ಒದಗಿಸುವಲ್ಲಿ ರೇಡಿಯೋಗಳೂ ಮುಖ್ಯ ಪಾತ್ರ ವಹಿಸಿದ್ದವು. ಜನ ರೇಡಿಯೋದಲ್ಲಿ ತಮ್ಮ ಮೆಚ್ಚಿನ ಗೀತೆಗಳನ್ನು ಕೇಳಿ ಖುಷಿಪಡುತ್ತಾರೆ. Radio Jockey ಗಳೊಂದಿಗೆ ಮಾತನಾಡ್ತಾರೆ. ರೇಡಿಯೋ Jockey ಗಳೂ ಅಷ್ಟೇ, ವಿಭಿನ್ನ ಕಾರ್ಯಕ್ರಮಗಳನ್ನು ರೂಪಿಸುತ್ತಾ ಜನರಿಗೆ ಹತ್ತಿರವಾಗುತ್ತಾ ಇದ್ದಾರೆ .

ಇತ್ತೀಚೆಗೆ ಮೈಸೂರಿನಲ್ಲಿ ಆರಂಭವಾದ BIG 92.7 FM ನಲ್ಲಿ RJ Avinash ನಡೆಸಿಕೊಡುವ Love stories with Avinash ಕಾರ್ಯಕ್ರಮ ಬಹಳ ಜನಪ್ರಿಯವಾಗಿದೆ. RJ AVINASH ಅಂದ್ರೆ ನಮಗೆ ನೆನಪು ಬರೋದು ಮೈಸೂರಿನ ಹೆಸರಾಂತ FM STATION 92.7 BIG FM . ಸ್ಪಷ್ಟವಾದ ಶುದ್ಧವಾದ ಕನ್ನಡ ಮಾತುಗಳನ್ನ ಆಡ್ತಾ ಎಲ್ಲರ ನೋವಿಗೆ ಸ್ಪಂದಿಸ್ತಾ, ತಮ್ಮ ವಿಭಿನ್ನ ನಿರೂಪಣಾ ಶೈಲಿ ಇಂದ ಮೈಸೂರಿಗರಿಗೆ ಚಿರ ಪರಿಚಿತರಾಗಿದ್ದಾರೆ. ಅವರ ನಿರೂಪಣೆಯ Love stories with Avinash ಕಾರ್ಯಕ್ರಮದಿಂದಾಗಿ Love Master Avinash ಎಂದೆ ಪ್ರಸಿದ್ದರಾದವರು RJ ಅವಿನಾಶ್.

ಈ ಕಾರ್ಯಕ್ರಮದಲ್ಲಿ ಭಾವನೆಗಳೇ ಪ್ರಧಾನ. Rj ಅವಿನಾಶ್ ಮೂಲತಃ A STORY TELLER, ಆತ ಉಪನ್ಯಾಸಕನಾಗಿಯೂ ಕೂಡ ಕೆಲಸ ಮಾಡುತ್ತಾ, ಯುವಕರ ಮನಸ್ಥಿತಿ ಅರ್ಥ ಮಾಡಿಕೊಂಡು, ಅದಕ್ಕನುಗುಣವಾಗಿ ಕಾರ್ಯಕ್ರಮ ನಿರೂಪಿಸುತ್ತಾ ಬರುತ್ತಿದ್ದಾರೆ. Radio Jockey ಕೆಲಸದ ಜೊತೆಜೊತೆಯಲ್ಲಿಯೇ ಪ್ರತಿ ಭಾನುವಾರ ತಮ್ಮ ವಿದ್ಯಾರ್ಥಿಗಳ ಜೊತೆಯಲ್ಲಿ ಚಾಮುಂಡಿಬೆಟ್ಟ ಹತ್ತುತ್ತಾ ಪಾಠ ಮಾಡುವ ವಿಭಿನ್ನ ಪ್ರಯತ್ನವನ್ನು ಅವಿನಾಶ್ ಮಾಡಿದ್ದಾರೆ.

ಹೀಗೆ ಬೆಟ್ಟ ಹತ್ತುವಾಗ ಪ್ರತಿ ವಾರ ಕೂಡ ಒಬ್ಬ ವಿದ್ಯಾರ್ಥಿ ಅವರ ಜೀವನದ ಒಂದು ಅನುಭವನ್ನು ಹಂಚಿಕೊಳ್ಳಬೇಕು ಎಂದು ನಿಯಮ ಮಾಡಿದ್ದರು. ಬಹಳ ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಮೂಲಕ ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ, ತಮ್ಮ ಜೀವನದ ಖುಷಿ ವಿಷಯಗಳು – ನೋವಿನ ವಿಷಯಗಳನ್ನು ಹಂಚಿಕೊಳ್ಳುವ ಮೂಲಕ ಸಂತಸ ಪಡುತ್ತಿದ್ದರು.

ಇಲ್ಲಿ ನೊಂದವರಿಗೆ ಸಾಂತ್ವನ ಹೇಳುವ ಮೂಲಕ ಅವಿನಾಶ್ ಅವರಿಗೆ ಅಣ್ಣನಾಗಿ, ಗುರುವಾಗಿ ಸದಾ ಧೈರ್ಯ ತುಂಬಿದ್ದಾರೆ. ಸಣ್ಣ ಯೋಜನೆಯಾಗಿ ರೂಪುಗೊಂಡಿದ್ದ ಈ ಬೆಟ್ಟ ಹತ್ತುವ ಕಾರ್ಯಕ್ರಮ ನಂತರ ಮೈಸೂರಿನ ಎಲ್ಲಾ ಕಾಲೇಜು ವಿದ್ಯಾರ್ಥಿಗಳನ್ನೂ ಆಕರ್ಷಿಸಿತ್ತು. ಯುವಕರ ಪ್ರೋತ್ಸಾಹ ನೋಡಿ ಆಗ ಶುರುವಾಗಿದ್ದೇ LOVE STORIES WITH AVINASH ಕಾರ್ಯಕ್ರಮ. ಹದಿಹರೆಯದ ಮನಸುಗಳಿಗೆ ಸಾಂತ್ವನ ನೀಡುವ, ಹುರಿದುಂಬಿಸುವ ಕಾರ್ಯಮವು ಇಂದಿಗೂ ಮೈಸೂರಿನಲ್ಲಿ ಯಶಸ್ವಿಯಾಗಿ ನಡೆಯುತ್ತಿದೆ.

LOVE STORIES WITH AVINASH ಮೈಸೂರು ರೇಡಿಯೋ ಜಗತ್ತಿನ SUPER HIT SHOW . ಮೈಸೂರಿನಲ್ಲಿ ಜನ ಈ ಕಾರ್ಯಕ್ರಮಕ್ಕೋಸ್ಕರ ಕಾಯುತ್ತಾರೆ . ಈ ಕಾರ್ಯಕ್ರಮಕ್ಕೆ ಜಾಹೀರಾತು ಬೇಡಿಕೆ ಕೂಡ ಅತಿಹೆಚ್ಚು ಇದೆ. ಪ್ರತಿ ವಾರ ಒಂದೊಂದು ಪ್ರೇಮಕಥೆಯನ್ನು ಅವಿನಾಶ್ ಅವರು ಅತ್ಯದ್ಬುತವಾದ ತಮ್ಮ ನಿರೂಪಣಾ ಶೈಲಿ ಇಂದ ಎಲ್ಲರ ಗಮನ ಸೆಳೆದಿದ್ದಾರೆ. ಈ ಕಾರ್ಯಕ್ರಮಕ್ಕೆ ಕಥೆಗಳನ್ನು ಆಯ್ಕೆ ಮಾಡುವುದಕ್ಕೆ ಒಂದು ತಂಡ ಕೂಡ ಇದೆ. ಈ ಕಾರ್ಯಕ್ರಮದಲ್ಲಿ ಮನೋರೋಗ ತಜ್ಞರು ಬಂದು ಜೀವನದಲ್ಲಿ ಕುಗ್ಗಿರುವವರಿಗೆ ಸಾಂತ್ವನವನ್ನೂ ಹೇಳುತ್ತಾರೆ. ಮೈಸೂರಿನ ಯುವ ಮನಸ್ಸುಗಳಿಗೆ R J Avinash ಆತ್ಮೀಯರಾಗಿದ್ದಾರೆ.