ಮಿ.ಅಜಂಯ್, ರಹಸ್ಯ ಸ್ಫೋಟ ಪತ್ರಿಕೆಯಿಂದ ಮಾತಾಡ್ತಿದ್ದೀನಿ, ನಿಮ್ಹತ್ರ ಮಾತಾಡ್ಬೇಕಿತ್ತು. ಅತ್ತಲಿಂದ ಹೆಣ್ಣು ಧ್ವನಿ ಅಜಯನ ಮೊಬೈಲಿನಲ್ಲಿ ಉಲಿದಾಗ ಅಜಯನಿಗೆ ಅಚ್ಚರಿಯಾಗಿತ್ತು.
‘‘ಹೇಳಿ, ಏನಾಗಬೇಕಿತ್ತು.’’
‘‘ಇಲ್ಲ, ತೀರಾ ಪರ್ಸನಲ್’’
‘‘ಪರ್ಸನಲ್ಲಾ! ಅಂತದ್ದೇನಿದೆ’’ ಕೊಂಚ ವಿಚಲಿತನಾದಂತೆ ಕಂಡಿದ್ದ ಅಜಯ್.
‘‘ವಿಷಯ ಇದೆ ಮಿ.ಅಜಂಯ್, ನೀವು ಇವತ್ತು ರಾತ್ರಿ ಎಂಟು ಗಂಟೆಗೆ‘‘ ಹೈ ಸೊಸೈಟಿ ಪಬ್’’ ನಲ್ಲಿ ಮೀಟ್ ಮಾಡ್ತಿದ್ದೀರಾ’’ ಅತ್ತ ಕಡೆಯ ಹೆಣ್ಣುಧ್ವನಿ ಮನಮೋಹಕವಾಗಿ ಉಲಿದಿತ್ತು.
‘‘ಹೈ ಸೊಸೈಟಿ ಪಬ್ ನಲ್ಲಾ! ನಾನು ನಿಮ್ಮನ್ಯಾಕೆ ಮೀಟ್ ಮಾಡ್ಬೇಕು. ನನಗೆ ಅಂತಹ ಅವಶ್ಯಕತೆ ಏನಿದೆ.’’
‘‘ಇದೆ ಮಿ.ಅಜಯ್ ರಾತ್ರಿ ಎಂಟು ಗಂಟೆ… ಹೈ ಸೊಸೈಟಿ ಪಬ್…’’ ಪೋನ್ ಡಿಸ್ಕನೆಕ್ಟ್ ಆಗಿತ್ತು.

ಅಜಯ್ ಅಚ್ಚರಿಗೊಂಡಿದ್ದ. ಮೊಬೈಲಿನಲ್ಲಿ ಕೇಳಿ ಬಂದ ಹೆಣ್ಣುಧ್ವನಿ ಪರಿಚಿತವಲ್ಲದಿದ್ದರೂ ಕಿವಿಗೆ ಇಂಪಾಗಿತ್ತು. ಹೆಣ್ಣಿನ ಧ್ವನಿಯೇ ಇಷ್ಟು ಮಧುರವಾಗಿಬೇಕಾದರೆ ಆ ಹೆಣ್ಣು ಎಷ್ಟು ಸುಂದರವಾಗಿರಬಹುದು. ಇಷ್ಟಕ್ಕೂ ಅವಳು ತನ್ನ ಬಳಿ ಪರ್ಸನಲ್ಲಾಗಿ ಮಾತನಾಡುವಂತದ್ದೇನಿದೆ? ಅಥವಾ ಶ್ರೀಮಂತ ಯುವಕರನ್ನು ಈ ರೀತಿ ಸುಂದರ ಹೆಣ್ಣುಗಳ ಮೂಲಕ ಟ್ರಾಪ್ ಮಾಡುವ ಪ್ರಯತ್ನವನ್ನ ಯಾರಾದರೂ ಮಾಡುತ್ತಿರಬಹುದೇ?’’ ಅಜಯನ ತಲೆಗೆ ನೂರೆಂಟು ಯೋಚನೆಗಳು ಮುತ್ತಿಕೊಂಡವು. ಅಷ್ಟರಲ್ಲಿ ಮತ್ತೆ ಪೋನ್ ಮೊಳಗಿತ್ತು. ಅದೇ ನಂಬರ್ ಮತ್ತದೇ ಧ್ವನಿ!
‘‘ಮಿ.ಅಜಂಯ್, ನಿಮ್ಮ ಮಿದುಳು ಈಗ ಯಾವ ರೀತಿ ಯೋಚಿಸುತ್ತಿರಬಹುದೆಂದು ನಾನು ಊಹಿಸಬಲ್ಲೆ. ನಾನು ಖಂಡಿತಾ ನಿಮ್ಮನ್ನು ಟ್ರಾಪ್ ಮಾಡುವ ಜಾಲಕ್ಕೆ ಸೇರಿದವಳಲ್ಲ. ಇವತ್ತು ರಾತ್ರಿ ಹೈ ಸೊಸೈಟಿ ಪಬ್ನಲ್ಲಿ ನನ್ನನ್ನು ಮೀಟ್ ಮಾಡ್ತಿದ್ದೀರ, ಅಷ್ಟೇ…’’
‘‘ಏಯ್ ಹಲೋ…’’ ಅಜಯ್ ಮಾತನಾಡುವಷ್ಟರಲ್ಲಿ ಫೋನ್ ಕಟ್ ಆಗಿತ್ತು. ಅಜಯ್ ಅತ್ತಲಿಂದ ಬಂದ ನಂಬರಿಗೆ ತಾನೇ ಪೋÃನ್ ಮಾಡಿದ್ದ. ಅತ್ತಲಿನ ಮೊಬೈಲ್ ರಿಂಗಾಗತೊಡಗಿತ್ತು. ಅಜಯ್ ತುಸು ಟೆನ್ಷನ್ ನಿಂದ ಕಾಯÄತ್ತಿದ್ದ. ಆದರೆ ಮೊಬೈಲ್ ರಿಸೀವ್ ಆಗುತ್ತಿರಲಿಲ್ಲ. ರಿಂಗಾಗಿ ಸುಸ್ತಾದ ಮೊಬೈಲು ಸುಮ್ಮನಾಗಿತ್ತು. ಅಜಯ್ ಮತ್ತೆ ಮತ್ತೆ ಪ್ರಯತ್ನಿಸಿದ್ದ. ಉಹೂಂ, ಅತ್ತಲಿಂದ ಏನೇನೂ ಪ್ರತಿಕ್ರಿಯೆಯಿರಲಿಲ್ಲ. ಅಜಯ್ ಅಸಹನೆಯಿಂದ ಒಮ್ಮೆ ತಲೆಕೊಡವಿ ಕಾರನ್ನೇರಿದ.
ಸಮಯ ಸರಿಯಾಗಿ ಏಳು ಗಂಟೆ!
ನಿಯಾನ್ ದೀಪಗಳ ಬೆಳಕು ಝಗಮಗಿಸುತ್ತಿತ್ತು. ಅಜಯ್ ತನ್ನ ಕಾರಿನಲ್ಲಿ ಸುಂದರ ತರುಣಿಯೊಬ್ಬಳನ್ನು ಕುಳ್ಳಿರಿಸಿಕೊಂಡು ಹೊರಟಿದ್ದ. ಕಾರು ನಗರ ವಲಯವನ್ನು ದಾಟಿ ರಾಷ್ಟ್ರೀಯ ಹೆದ್ದಾರಿ ಪ್ರವೇಶಿಸಿತ್ತು. ಅಜಂಯ್ ಕಾರಿನ ವೇಗವನ್ನು ಹೆಚ್ಚಿಸಿ ಪಕ್ಕದಲ್ಲಿ ಕುಳಿತಿದ್ದ ಸುಂದರ ತರುಣಿಯ ಸೊಂಟಕ್ಕೆ ಕೈ ಹಾಕಿ ತನ್ನತ್ತ ಸೆಳೆದುಕಂಡಿದ್ದ. ಅವಳು ಕಿಲಕಿಲನೆ ನಕ್ಕು ಅಜಯ್ನತ್ತ ಸರಿದು ಇನ್ನಷ್ಟು ಒತ್ತಿ ಕುಳಿತಿದ್ದಳು. ಅವಳ ದೇಹದಿಂದ ಹೊರಟ ಗಾಢವಾದ ಪರಿಮಳವನ್ನು ಆಘ್ರಾಣಿಸಿದ ಅಜಯ್ ನಿಗೆ ಸ್ವರ್ಗದಲ್ಲಿ ತೇಲುತ್ತಿರುವತೆ ಭಾಸವಾಗಿತ್ತು. ನಿಧಾನವಾಗಿ ಆ ತರುಣಿ ಅಜಯನ ಕೊರಳನ್ನು ಬಳಸಿ ಅವನ ಕೆನ್ನೆ, ತುಟಿ ಹಾಗೂ ಅವನ ಹರವಾದ ಎದೆಗೆ ಹೂ ಮುತ್ತಿನ ಮಳೆಯನ್ನು ಸುರಿಸತೊಡಗಿದ್ದಳು. ಆ ಕ್ಷಣಕ್ಕೆ ಅಜಯನಿಗೆ ಕಾರನ್ನು ರಸ್ತೆಯ ಬದಿಗೆ ನಿಲ್ಲಿಸಿ ಅವಳನ್ನು ಬರಸೆಳೆದು ಅಪ್ಪಿ ಚುಂಬಿಸಲೇ ಎನಿಸಿತ್ತು. ಆದರೆ ಇನ್ನರ್ಧ ಗಂಟೆಯಲ್ಲಿ ಅವರು ಎಸ್ಟೇಟು ತಲುಪುವವರಿದ್ದರು, ಹಾಗಾಗಿ ತನ್ನ ಬಯಕೆಗಳನ್ನು ಕಷ್ಟಪಟ್ಟು ತಡೆದುಕೊಂಡ ಅಜಯ್ ಕಾರಿನ ವೇಗವನ್ನು ಇನ್ನಷ್ಟು ಹೆಚ್ಚಿಸಿದ್ದ. ಕಾರು ರೊಯ್ಯನೆ ಗಾಳಿಯಲ್ಲಿ ತೇಲಿದಂತೆ ಸಾಗಿ ಹೋಗತೊಡಗಿತ್ತು. ಪಕ್ಕದಲ್ಲಿದ್ದತರುಣಿಆಕಾರಿನವೇಗವನ್ನೂಮೀರಿನಿಲ್ಲುವಷ್ಟುಫಾಸ್ಟ್ಆಗಿದ್ದಳು!

ರಾತ್ರಿಯ ಕತ್ತಲಿನಲ್ಲಿ ಪಂಚ ವಿಲಾಸ್ ಎಸ್ಟೇಟ್ ನಿಗೂಢವಾಗಿ ಕಾಣುತ್ತಿತ್ತು. ಎದುರಿನ ಗೇಟು ಬೃಹದಾಕಾರವಾಗಿ ಭಯ ಹುಟ್ಟಿಸುವಂತಿತ್ತು. ಅಜಯನ ಕಾರಿನ ಹೆಡ್ಲೈಟಿನ ಬೆಳಕು ಆ ಬೃಹತ್ ಗೇಟಿನ ಮೇಲೆ ಬಿದ್ದ ಕೂಡಲೇ ಒಳಗಿನಿಂದ ಯಾರೋ ಗೇಟಿನ ಬಳಿಗೆ ಓಡಿ ಬಂದಿದ್ದರು. ನಿಧಾನವಾಗಿ ಗೇಟು ತೆರೆದುಕೊಂಡಿತ್ತು. ಪಕ್ಕದಲ್ಲಿನ ತರುಣಿಯ ಆವೇಗವನ್ನು ತಣಿಸಲು ಅಜಯನೂ ಕಾತುರನಾಗಿದ್ದ. ಕಾರು ನಿಧಾನವಾಗಿ ಗೇಟು ದಾಟಿ ಪಂಚವಿಲಾಸ್ ಎಸ್ಟೇಟ್ ಪ್ರವೇಶಿಸಿತ್ತು. ನಂತರ ನೇರವಾಗಿ ಮುಂದೆ ಸಾಗಿ ಒಳಗಿನ ಗೆಸ್ಟ್ಹೌಸಿನ ಬಳಿ ನಿಂತ ಕೂಡಲೇ ಆಳುಗಳಿಬ್ಬರು ಓಡಿ ಬಂದು ಕಾರಿನ ಬಾಗಿಲು ತೆಗೆದಿದ್ದರು. ಸುಂದರ ತರುಣಿಯ ಸೊಂಟವನ್ನು ಬಳಸಿ ಹಿಡಿದೇ ಅಜಯ್ ಕಾರಿನಿಂದ ಕೆಳಗಿಳಿದ್ದಿದ್ದ. ಅದನ್ನು ಈ ಮೊದಲೇ ಅರಿತಿದ್ದವರಂತೆ ಆಳುಗಳು ಪಕ್ಕಕ್ಕೆ ಸರಿದು ಕತ್ತಲಿನಲ್ಲಿ ಮರೆಂಯಾಗಿದ್ದರು.
ಆಗ ಸರಿಯಾಗಿ ಎಂಟು ಗಂಟೆ!
ಅಜಯನ ಜೇಬಿನಲ್ಲಿದ್ದ ಮೊಬೈಲ್ ಕಿಣಿಕಿಣಿಸಿತ್ತು. ಅಜಯ್ ತನ್ನ ಪಕ್ಕದಲ್ಲಿನ ತರುಣಿಯನ್ನು ತಬ್ಬಿ ಹಿಡಿದು ಹೊರಟಿದ್ದವನು ತನ್ನ ಕಿಸೆಯಿಂದ ಮೊಬೈಲ್ ತೆಗೆದು ಅಸಹನೆಯಿಂದಲೇ ಅದರತ್ತ ನೋಡಿದ್ದ, ಮಧ್ಯಾಹ್ನ ತನಗೆ ಬಂದಿದ್ದ ಅದೇ ಪೋನ್ ನಂಬರ್!
ಅಜಯ್ ರಿಸೀವರ್ ಗುಂಡಿ ಅಮುಕಿ ‘ಹಲೋ’ ಎಂದಿದ್ದ. ಅತ್ತಲಿದ್ದ ಅದೇ ಮನಮೋಹಕ ದನಿ.
‘‘ಹಲೋ ಅಜಂಯ್. ನಾನು ಎಂಟು ಗಂಟೆಗೆ ಸರಿಯಾಗಿ ಹೈ ಸೊಸೈಟಿ ಪಬ್ಗೆ ಬರಲು ಹೇಳಿದ್ದೆ. ಆದರೆ ನೀನು ನನ್ನ ಮಾತನ್ನು ಕಡೆಗಣಿಸಿ ನಿನ್ನ ಪಂಚವಿಲಾಸ್ ಎಸ್ಟೇಟ್ನಲ್ಲಿದ್ದೀಯ. ಓಕೆ, ಜೊತೆಯಲ್ಲಿ ಸುಂದರವಾದ ತರುಣಿಯಿದ್ದಾಳೆ. ಎಂಜಾಯ್ ಮಾಡು, ಆದರೆ ನಾಳೆ ರಾತ್ರಿ ಎಂಟು ಗಂಟೆಗೆ ನೀನು ಹೈ ಸೊಸೈಟಿ ಪಬ್ ನಲ್ಲಿ ನನ್ನನ್ನು ಮೀಟ್ ಮಾಡಲಿಲ್ಲವೆಂದಾದರೆ ನಾಡಿದ್ದು ಬೆಳಿಗ್ಗೆ ನೀನು ತುಂಬಾ ‘‘ಸಫರ್’’ ಆಗ್ತೀಯ, ನಿನ್ನ ಹಾಗೂ ನಿನ್ನ ತಂದೆಯ ಇಮೇಜಿನ ಗಾಜು ಪುಡಿ ಪುಡಿ ಆಗುತ್ತೆ. ಯಾಕೆಂದರೆ ಆ ಇಮೇಜನ್ನು ಪುಡಿ ಮಾಡಬಲ್ಲಂತಹ ಕಲ್ಲು ನನ್ನ ಬಳಿ ಇದೆ ಓಕೆ. ಎಂಜಾಯ್ ಯುವರ್ ಜಾಯ್ ಫುಲ್ ಅಂಡ್ ಮಾರ್ವೆಲಸ್ ನೈಟ್’’ ಪೋನ್ ಡಿಸ್ಕನೆಕ್ಟ್ ಆಗಿತ್ತು. ಅಜಂಯ್ ನ ಮುಖ ಚಿಂತೆಯ ಗೆರೆಗಳು ಮೂಡಿದರೂ ಪಕ್ಕದಲ್ಲಿನ ತರುಣಿ ಅವನಿಗೆ ಮೂಡ್ ಆಫ್ ಆಗಲು ಬಿಡಲಿಲ್ಲ. ಅವನ ಇಡೀ ದೇಹದ ಮೇಲೆ ಮುತ್ತಿನ ಮಳೆ ಗರೆಯುತ್ತ ಅಜಯನನ್ನು ಒಳಕ್ಕೆ ಎಳೆದೊಯ್ದಿದ್ದಳು.
ಮುಂದುವರೆಯುವುದು….

– ಮ ನಾ ಕೃಷ್ಣಮೂರ್ತಿ ಗೌರಿಬಿದನೂರು