ಮಹಿಳೆ ದೇವಿ ಸ್ವರೂಪಳೆಂದು ಇಂದಿಗೂ ನಮ್ಮ ದೇಶದಲ್ಲಿ ಪೂಜನೀಯಳಾಗಿದ್ದಾಳೆ. ದಶಕಗಳ ಹಿಂದೆ ಮಹಿಳೆಯರಿಗೆ ಇದ್ದ ಕಟ್ಟು ಪಾಡುಗಳು ಇಂದು ಇಲ್ಲ. ಕಾಲ ಬದಲಾದಂದಂತೆ ಮಹಿಳೆಯರ ಸ್ಥಾನ-ಮಾನಗಳೂ ಬದಲಾಗಿವೆ. ಮಹಿಳೆಯರಿಗೆ ದೊರೆತ ಮೀಸಲಾತಿಯಿಂದಾಗಿ ಸಾಕಷ್ಟು ಮಹಿಳೆಯರು ಸ್ವಾವಲಂಭಿಗಳಾಗಿದ್ದಾರೆ. ಇಲ್ಲಿಯವರೆಗೂ ಅಬಲೆ ಎಂದು ಗುರ್ತಿಸುತ್ತಿದ್ದವರಿಗೆಲ್ಲ ಸಡ್ಡು ಹೊಡೆದು ತಾನು ಸಬಲೆ ಎಂದು ಗುರ್ತಿಸಿಕೊಳ್ಳುವತ್ತ ಹೆಜ್ಜೆಹಾಕುತ್ತಿದ್ದಾಳೆ. ಹಾಗಾದರೆ ಮಹಿಳೆ ಯಶಸ್ವಿಯಾಗುತ್ತಿದ್ದಾಳಾ …!? ಅನ್ನುವ ಪ್ರಶ್ನೆ ನಮ್ಮನ್ನೆಲ್ಲ ಕಾಡದೇ ಬಿಡುವುದಿಲ್ಲ.. ಈ ಪ್ರಶ್ನೆ ಕಾಡಲು ಬಹು ಮುಖ್ಯ ಕಾರಣ ಮಹಿಳೆಗೆ ವೃತ್ತಿ ಬದುಕಿನೊಂದಿಗೆ ತನ್ನ ಕೌಟುಂಬಿಕ ಜೀವನವನ್ನೂ ಸರಿದಾರಿಯಲ್ಲಿ ನಡೆಸಿಕೊಂಡು ಹೋಗುವ ಗುರುತರ ಜವಾಬ್ದಾರಿ ಹೆಚ್ಚಾಗೇ ಇದೆ. ಹಾಗಾಗಿ ಎರಡನ್ನೂ ಹೇಗೆ ನಿಭಾಯಿಸಬಲ್ಲಳು ಎಂಬುದೇ ಸಾಕಷ್ಟು ಜನರಿಗೆ ಇಂದಿಗೂ ವಿಸ್ಮಯ ಮೂಡಿಸುವುದು. ಹೌದು ಮಹಿಳೆ ಬೆಳಗೆದ್ದು ತನ್ನ ನಿತ್ಯ ಕರ್ಮಗಳನ್ನು ಮುಗಿಸಿ ಹೆಗಲಿಗೊಂದು ಚೀಲ ಹಾಕಿಕೊಂಡು ತನ್ನ ವೃತ್ತಿ ಬದುಕಿನತ್ತ ಹೆಜ್ಜೆಹಾಕುವಂತಿಲ್ಲ. ಅವಳಿಗೆ ಪ್ರಕೃತಿ ಅವಳಿಗಾಗಿಯೇ ನೀಡಿರುವ ಮಹತ್ತರ ಜವಾಬ್ದಾರಿಗಳಿವೆ ಅವೆಲ್ಲ ಸಾಂಪ್ರದಾಯಿಕ ಜವಾಬ್ದಾರಿಗಳು ಅವೆಲ್ಲವನ್ನೂ ಅವಳು ನಿಭಾಯಿಸಿ ಮನೆಯಿಂದಾಚೆ ಹೊರಡಬೇಕು. ಇವೆಲ್ಲವನ್ನೂ ಯಾವ ಕುಂದುಕೊರತೆಗಳಲ್ಲದೆ ನಿಭಾಯಿಸಿ ಹೊರಗೆ ದುಡಿದು ಯಶಸ್ಸು ಕಾಣುತ್ತಿದ್ದಾಳೆಯೇ ಮಹಿಳೆ…! ಹೌದು ಇಂದು ನಮ್ಮ ಕಣ್ಮುಂದೆ ಅದೆಷ್ಟೋ ಉನ್ನತ ಅಧಿಕಾರಿಗಳು ಉದ್ಯಮಿಗಳು ತಮ್ಮ ವೃತ್ತಿ ಬದುಕಿನೊಂದಿಗೆ ಕೌಟುಂಬಿಕ ಬದುಕುಗಳನ್ನೂ ಚಂದವಾಗಿಸಿಕೊಂಡಿದ್ದಾರೆ. ಅಂತಹ ಕೆಲ ಯಶಸ್ವಿ ಮಹಿಳೆಯರ ಕುರಿತಾಗಿ ನಮ್ಮ ಸಂಚಿಕೆ ತಿಳಿಸಲಿದೆ. ನವರಾತ್ರಿಯ ಪ್ರಯುಕ್ತ ನವ ಮಹಿಳಾ ಸಾಧಕಿಯರನ್ನು ನಿಮಗೆ ಪರಿಚಯಿಸಲಿದ್ದೇವೆ.
ದಿವಂಗತ ರಾಮಕೃಷ್ಣ ಹೆಗಡೆಯವರ ಜನ್ಮದಿನದ ವಿಶೇಷ; ನಿಮ್ಮ ಬಳಿ ದೊಡ್ಡದೊಂದು ಕೀ ಬಂಚೇ ಇದೆ ಆದರೆ ಒಂದು ಬೀಗವನ್ನೂ ಓಪನ್ ಮಾಡಲಾರಿರಿ.
ಎಲ್ರೀ ದಿನೇಶ್. ನಿಮ್ಮ ಸಾಹೇಬರು ಸಿಗುತ್ತಲೇ ಇಲ್ಲ?ಓಪನ್ ಆಗದ ಬೀಗದಂತಾಗಿ ಹೋಗಿದ್ದಾರೆ.ಈ ಬೀಗ ಬಿಡಿಸುವುದು ಹೇಗೆ ಅನ್ನುವುದೇ ಅರ್ಥವಾಗುತ್ತಿಲ್ಲವಲ್ರೀ? ಅಂತ ಕಾಂಗ್ರೆಸ್ ನಾಯಕ ಪರಮೇಶ್ವರ್ ಅವರ ಆಪ್ತ...