ನಾಲ್ಕನೇ ತರಗತಿಯಲ್ಲಿದ್ದೆ ಎನ್ನುವ ನೆನಪು, ಯಾವುದಾದರು ಮ್ಯೂಸಿಕ್ ಇನ್ಷ್ರುಮೆಂಟ್ ಕಲಿಯಬೇಕೆಂಬ ಆಸೆ,ಹಳ್ಳಿಯಲ್ಲಿ ಇಂತಹ ವಿಷಯಗಳಿಗೆ ಅವಕಾಶಗಳಿರಲಿಲ್ಲ,ಇದೇ ಸಂದರ್ಭ ಊರಿನಲ್ಲಿ ಆಗತಾನೆ ಒಂದು ಹೊಸ ಮಠ ಪ್ರಾರಂಭವಾಯಿತು, ಮಠದಲ್ಲಿ ಹಾರ್ಮೊನಿಯಮ್ ಕಲಿತಿದ್ದ ಒಬ್ಬ ಅಂಧ ಸ್ವಾಮೀಜಿಗಳು ಉಳಿದುಕೊಂಡು ಆಗಾಗ ಭಜನೆ ಕಾರ್ಯಗಳನ್ನು ನಡೆಸುತ್ತಿದ್ದರು,ನನಗೂ ಹಾರ್ಮೊನಿಯಮ್ಮ ಕಲಿಸಲು ಅವರನ್ನು ಒಪ್ಪಿಸಿದೆ. ಒಂದು ದಿನ ಕಲಿಯುತ್ತಿರುವುದನ್ನು ನೋಡಿದ ನಮ್ಮ ತಾತ ನನ್ನನ್ನು ಮತ್ತು ಸ್ವಾಮೀಜಿಯವರನ್ನು ಗದರಿಸಿ, “ಇಂತಹದ್ದನ್ನು ಮಕ್ಕಳಿಗೆ ಕಲಿಸಬಾರದು “ಎಂದರುಹಾಡು ಮತ್ತು ನಾಟಕಗಳನ್ನು ಕಲಿತರೆ ಓದದೆಯೇ ಮಕ್ಕಳು ಹಾಳಾಗುತ್ತಾರೆ ಎನ್ನುವುದು ಅವರ ಅಭಿಪ್ರಾಯ, ತಾತನೆಂದರೆ ಹೆದರುತ್ತಿದ್ದ ನಾವು ಮುಂದೆ ಆ ಊರಿನಲ್ಲಿ ಇಂತಹ ವಿಷಯಗಳ ಕಲಿಯುವುದೇ ನಿಲ್ಲಿಸಿದೆವು,ಮುಂದೆ ಹೈಸ್ಕೂಲ್ ಮತ್ತು ಕಾಲೇಜು ವ್ಯಾಸಂಗ ಮಳವಳ್ಳಿಯಲ್ಲಿ ಮುಂದುವರಿಯಿತು,ಈ ದಿನಗಳಲ್ಲಿ ಕೆಲವು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು,ಮ್ಯೂಸಿಕ್ ಇನ್ಸ್ಟ್ರುಮೆಂಟ್ ಕಲಿಯುವ ಅವಕಾಶ ಒದಗಿ ಬರಲಿಲ್ಲ,ಈಗಾಗಲೇ ಹೇಳಿರುವ ಹಾಗೆ Bsc midterm ಮುಗಿಸಿ,ಆರು ತಿಂಗಳು ಬೆಂಗಳೂರಿನಲ್ಲಿ ಉಳಿಯುವ ಅವಕಾಶ ದೊರೆಯಿತು, ರಾಜಾಜಿನಗರದ ವರಮಹಾಲಕ್ಷ್ಮಿ ನರ್ಸಿಂಗ್ ಹೋಂ ಹಿಂಭಾಗದ ರೂಂ ನಲ್ಲಿ,ಸ್ನೇಹಿತರ ಜೊತೆ ಇದ್ದ ನನಗೆ ಕೆಲಸವು ಇಲ್ಲದೆಮುಂದೇನು ಮಾಡಬೇಕೆಂದು ತಿಳಿಯದೆ ಶೂನ್ಯ ಭಾವನೆಯಲ್ಲಿ ಬೀದಿ ನೋಡುತ್ತಾ ಕುಳಿತಿರಬೇಕಾದರೆ,ಪಕ್ಕದ ಮನೆಯ ಒಂದು ಸಣ್ಣ ಹುಡುಗಿ ರಂಜಿನಿ voilin ಹಿಡಿದುಕೊಂಡು ಹೋಗುತ್ತಿದ್ದಳು,”ಎಲ್ಲಿಗೆ ಹೋಗುತ್ತಿರುವುದೆಂದು” ಕೇಳಿದೆ,”voilin ಕ್ಲಾಸ್ಗೆ ಹೋಗುತ್ತಿದ್ದೇನೆ ಅಂಕಲ್” ಎಂದಿತು,”ನಾನು ನಿನ್ನ ಕ್ಲಾಸ್ಗೆ ಸೇರಿ ಕೊಳ್ಳಬಹುದೆ” ಎಂದು ಕೇಳಿದೆ,ನಾನು ತಮಾಷೆಗೆ ಕೇಳುತಿದ್ದೇನೆ ಎನ್ನಿಸಿರಬೇಕು,”ಜೊತೆಯಲ್ಲಿ ಬನ್ನಿ ಕರೆದುಕೊಂಡು ಹೋಗುತ್ತೇನೆ “ಎಂದಳು,ಎದ್ದು ಹೊರಟೆ ಬಿಟ್ಟೆ, ರಾಜಾಜಿನಗರದ ಫಸ್ಟ್ ಬ್ಲಾಕ್ ನಲ್ಲಿರುವ ಮನೆ,ಗಾಯತ್ರಿ ಎನ್ನುವ ಟೀಚರ್, ಸೇರಿಸಿಕೊಳ್ಳಲು ಒಪ್ಪಿಕೊಂಡು, ‘ಲಂಭೋದರ ಲಕುಮಿಕರ’ ಎನ್ನುವ ಹಾಡಿನಿಂದ ತರಗತಿಗಳು ಶುರುವಾಯಿತು, ಮೊದಮೊದಲು ಸ್ವಲ್ಪ ನಾಚಿಕೆ ಎನ್ನಿಸಿದರು,ತಪ್ಪೇನು ಎಂದು ಕೊಂಡು ಮುದುವರೆಸಿದೆ. ಇನ್ನು ರೂಂನಲ್ಲಿದ್ದ ಕಸಿನ್ ಜಗದೀಶ, ನಾಗರಾಜ ಪ್ರಕಾಶ ಅಂತು,”ನೀನು ಬಂದಿರುವುದು ಏತಕ್ಕೆ ಮಾಡುತ್ತಿರುವುದೇನು” ಎಂದು ನಗುವವರೆ ,”ಬೆಂಗಳೂರಿನಲ್ಲಿ ಕುಳಿತು ನಾನೇನು ಮಾಡಲಿ ಏನೋ ಒಂದು ನಾನು ಮಾಡಬೇಕೆನ್ನುವುದು” ನನ್ನ ಸಮಜಾಯಿಷಿ ಅವರುಗಳ ಹತ್ತಿರವೇ ಸಾಲಮಾಡಿ ಕ್ಲಾಸ್ ಫೀಸ್ ಭರಿಸುತ್ತಿದ್ದೆ,ಆದರೆ ಆರು ತಿಂಗಳ ನಂತರ ಮೈಸೂರಿನಲ್ಲಿ Msc ಸಿಕ್ಕಿದ ಕಾರಣ ಬೆಂಗಳೂರು ಬಿಡಬೇಕಾಯಿತು, ಇಷ್ಟು ದಿವಸ ಕಲಿತಿದ್ದೇನೆ ಇಲ್ಲಿಯೂ ನಿಲ್ಲಿಸಬಾರದೆನಿಸಿ, ವಿದ್ಯಾರಣ್ಯಪುರದಲ್ಲಿ ನಾಗರತ್ನ ಎಂಬ ಟೀಚರ್ ಹುಡುಕಿ ಮಾನಸ ಗಂಗೋತ್ರಿಯ ಹಾಸ್ಟಲ್ನಿಂದ ಸೈಕಲ್ ತುಳಿದುಕೊಂಡು voilin ಕ್ಲಾಸ್ಗೆ ಹೋಗಿ ಬರುತ್ತಿದ್ದೆ, ಮುಂದೆ ಆರೇಳು ತಿಂಗಳ ನಂತರ ಹಲವಾರು ಒತ್ತಡ ಮತ್ತು ಹಣಕಾಸಿನ ತೊಂದರೆಯಿಂದ ಕೊನೆಗೆ ನನ್ನ ಆಶಯ ಪೂರ್ತಿ ಮಾಡದೆ ನಿಲ್ಲಿಸಬೇಕಾಯಿತು,ಇದರಿಂದ ಒಂದಷ್ಟು ಒಳ್ಳೆಯ ನೆನಪುಗಳು ಮತ್ತು ಅನುಭವ ಬಿಟ್ಟರೆ, ಪ್ರಯತ್ನವನ್ನಾದರು ಮಾಡಿದೆ ಎನ್ನುವ ತೃಪ್ತಿ, ಈ ಕಾರಣಕ್ಕೋ ಏನೋ ಇಂದಿಗೂ ಮಕ್ಕಳು ತೋರಿಸುವ ಇಂತಹ ಆಸಕ್ತಿಗಳನ್ನು ಪೋಷಿಸುತ್ತ ಬಂದಿದ್ದೇನೆ…ಲೈಫು ತುಂಬಾ ಚಿಕ್ಕದು ಅನ್ನಿಸಿದ್ದನ್ನು ಮಾಡಲುಮೀನಾ ಮೇಷ ಎಣಿಸುತ್ತಾ ಕುಳಿತರೆ ನಾವು ಯಾವುದನ್ನು ಮಾಡುವುದಿಲ್ಲ.
ಅನ್ನದಾತ ಅನಾಥನಾಗುವ ಮುನ್ನ……. ಅನ್ನಕ್ಕಾಗಿ ನಾವು ಪರದಾಡುವ ಮುನ್ನ……
ನಾವೆಲ್ಲರೂ ನೆನಪಿಡಬೇಕಾದ - ಪ್ರೀತಿಯಿಂದ - ಹೃದಯದಾಳದಿಂದ ಕೃತಜ್ಞತೆ ಸಲ್ಲಿಸಬೇಕಾದ ಅತ್ಯಂತ ಮಹತ್ವದ ದಿನ………. ದೀರ್ಘವಾದರು ತಿನ್ನುವ ಅನ್ನಕ್ಕೆ - ರೈತರಿಗೆ ಪ್ರತಿ ವಂದನೆ ಸಲ್ಲಿಸಲು -...