ಬೆಂಗಳೂರು: ಸಿಡಿ ವಿವಾದದ ಸುಳಿಯಲ್ಲಿ ಸಿಲುಕಿರುವ ರಮೇಶ್ ಜಾರಕಿಹೊಳಿ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿ ಮಾಜಿ ಎನ್ನಿಸಿಕೊಂಡರು ರಾಸಲೀಲೆ ಪ್ರಕರಣದ ಸದ್ದು ಮಾತ್ರ ಕಡಿಮೆಯಾಗಿಲ್ಲ.
ಮಾಜಿ ಸಚಿವರದ್ದು ಎನ್ನಲಾದ ರಾಸಲೀಲೆ ವಿಡಿಯೋ ವೈರಲ್ ಆದ ಬಳಿಕ ತನಿಖೆ ಶುರುವಿಟ್ಟುಕೊಂಡಿರುವ ಪೊಲೀಸರು ಮಾಜಿ ಸಚಿವರದ್ದು ಎನ್ನಲಾದ ಖಾಸಗಿ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದು ಯಾರು ಎಂಬ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ವಿಡಿಯೋ ಲೀಕ್..!
ಹೀಗೆ ವಿಡಿಯೋ ಅಪ್ಲೋಡ್ ಮಾಡಿದವರ ಮೂಲ ಹುಡುಕುತ್ತ ಹೊರಟ ಪೊಲೀಸರಿಗೆ ಕೆಲ ಮಾಹಿತಿಗಳು ದೊರೆತಿದ್ದು, ರಾಸಲೀಲೆ ವಿಡಿಯೋಗಳನ್ನು ಮೊದಲಿಗೆ ರಷ್ಯಾದಿಂದ ಖಾಸಗಿ ವೆಬ್ ಸೈಟ್ ಗೆ ಅಪ್ಲೋಡ್ ಮಾಡಿರುವ ಬಗ್ಗೆ ಮಹತ್ವದ ಆಧಾರಗಳು ಲಭ್ಯವಾಗಿವೆ ಎನ್ನಲಾಗಿದೆ.
ಆದರೆ, ಮಾಜಿ ಸಚಿವರ ಖಾಸಗಿ ಕ್ಷಣಗಳದ್ದು ಎನ್ನಲಾದ ಈ ವಿಡಿಯೋಗಳು ಇಲ್ಲಿಂದ ರಷ್ಯಾ ತಲುಪಿದ್ದು ಹೇಗೆ? ಅದನ್ನು ಖಾಸಗಿ ವೆಬ್ ಸೈಟ್ ಗೆ ಅಪ್ಲೋಡ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹರಿ ಬಿಟ್ಟವರು ಯಾರು? ಇದರ ಹಿಂದಿನ ಉದ್ದೇಶವೇನು ಎಂಬುದು ತನಿಖೆಯಿಂದಷ್ಟೇ ಹೊರ ಬರಬೇಕಿದೆ.
ಇದನ್ನೂ ಓದಿ: ಸಿಡಿ ವಿವಾದ; ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ ರಮೇಶ್ ಜಾರಕಿಹೊಳಿ