ಬೆಂಗಳೂರು: ರಾಸಲೀಲೆ ಸಿಡಿ ಔಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ರಮೇಶ ಜಾರಕಿಹೊಳಿ ವಿರುದ್ಧ ಎಫ್ಐಆರ್ ದಾಖಲಾಗುವ ಸಾಧ್ಯತೆಗಳಿವೆ.
ಕೆಪಿಟಿಸಿಎಲ್ ನಲ್ಲಿ ಕೆಲಸ ಕೊಡಿಸುವ ಆಮಿಷವೊಡ್ಡಿ ಯುವತಿಯನ್ನು ಲೈಂಗಿಕವಾಗಿ ಬಳಸಿಕೊಂಡಿರುವ ಹಿನ್ನೆಲೆಯಲ್ಲಿ ಬಹುತೇಕ ಎಫ್ಐಆರ್ ದಾಖಲಾಗಬಹುದು. ಕೆಲ ಕಾನೂನು ತಜ್ಞರ ಸಲಹೆಯ ಹಿನ್ನೆಲೆಯಲ್ಲಿ ಎಫ್ಐಆರ್ ದಾಖಲಾಗುವ ಸಾಧ್ಯತೆ ಇದೆ.ಲೈಂಗಿಕ ದೌರ್ಜನ್ಯದಡಿ ಈ ಎಫ್ಐಆರ್ ದಾಖಲು ಮಾಡುವ ಸಾಧ್ಯತೆ ಇದ್ದು, ಸೆಕ್ಸ್ ಸ್ಕ್ಯಾಂಡಲ್ನಲ್ಲಿ ಜಾರಕಿಹೊಳಿಗೆ ಸಂಕಷ್ಟ ಕಟ್ಟಿಟ್ಟ ಬುತ್ತಿಯಾಗಿದೆ. ಕಾನೂನು ತಜ್ಞರು ಈಗಾಗಲೇ ನಿತ್ಯಾನಂದ ಪ್ರಕರಣದ ಉದಾಹರಣೆ ನೀಡಿದ್ದಾರೆ.
– ವಿಶ್ವನಾಥ್ ಅಂಗಡಿ