ಬಿಗ್ ಬಾಸ್ ಸೀಸನ್ 8ರ ಮೊದಲ ವಾರದ ಎಲಿಮಿನೇಷನ್ ರೌಂಡ್ ನಲ್ಲಿ ಮನೆಯಿಂದ ಹೊರ ಬಂದಿರುವ ಟಿಕ್ ಟಾಕ್ ಸ್ಟಾರ್ ಧನುಶ್ರೀ, ತಾವು ಮೊದಲ ವಾರವೇ ಎಲಿಮಿನೇಟ್ ಆಗಲು ಕಾರಣವೇನು ಎಂಬುದನ್ನು ತಿಳಿಸಿದ್ದಾರೆ.
ಎಲಿಮಿನೇಟ್ ಆದ ದಿನವೇ ಮನೆಯಿಂದ ಹೊರ ಬಂದು ಕಾರ್ಯಕ್ರಮದ ಸ್ಟಾರ್ ನಿರೂಪಕ ಕಿಚ್ಚ ಸುದೀಪ್ ಜೊತೆ ವೇದಿಕೆ ಹಂಚಿಕೊಂಡಿದ್ದ ಧನುಶ್ರೀ, ಒಂದು ವಾರಗಳ ಬಿಗ್ ಬಾಸ್ ಮನೆಯ ಅನುಭವವನ್ನು ಬಿಚ್ಚಿಟ್ಟಿದ್ದರು. ಈ ವೇಳೆ ನೀವು ಎಲಿಮಿನೇಟ್ ಆಗಲು ಪ್ರಮುಖ ಕಾರಣವೇನು ಎಂಬ ಸುದೀಪ್ ಅವರ ಪ್ರಶ್ನೆಗೆ ಉತ್ತರಿಸಿದ ಧನುಶ್ರೀ ನಾನು ಬಿಗ್ ಬಾಸ್ ಮನೆಯಲ್ಲಿ ಓಪನ್ ಅಪ್ ಆಗಲು ಸ್ವಲ್ಪ ಸಮಯ ತೆಗೆದುಕೊಂಡೆ ಅದೇ ನನಗೆ ಮುಳುವಾಯಿತು ಎಂದಿದ್ದಾರೆ.
ಇದನ್ನೂ ಓದಿ: ಶುಭಾ ಪೂಂಜಾಗೆ ಕಿಚ್ಚನ ಕಡೆಯಿಂದ ಬಿಗ್ ಗಿಫ್ಟ್
ನಾವು ಸೋಷಿಯಲ್ ಮೀಡಿಯಾದಿಂದ ಬಂದವರು. ಒಂದು ಟಿಕ್ ಟಾಕ್ ವಿಡಿಯೋ ಮಾಡಿದ್ರೆ ಸಾಕು ಜನ ನಮ್ಮನ್ನು ಲೈಕ್ ಮಾಡ್ತಾರೆ.. ಫಾಲೋ ಕೂಡ ಮಾಡ್ತಾರೆ. ಆದರೆ, ಇಲ್ಲಿ ಹಾಗಲ್ಲ ಬಿಗ್ ಬಾಸ್ ಮನೆಯೊಳಗೆ ನಮಗಿಂತ ದೊಡ್ಡ ಸ್ಟಾರ್ ಕಲಾವಿದರಿದ್ದಾರೆ. ಹೀಗಾಗಿ ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ಸಾಧ್ಯವಾಗಲಿಲ್ಲ. ಈಗ ಅದೇ ಕಾರಣಕ್ಕೆ ಎಲಿಮಿನೇಟ್ ಕೂಡ ಆಗಿದ್ದೇನೆ ಎಂದರು.