ರಾಜಕಾರಣಿಗಳಿಗೆ ಸಂಸಾರದಲ್ಲೊಂದು ಕಮಿಟ್ಮೆಂಟ್ ಇಲ್ಲ, ಅವರ ಪಂಚೆಯೂ ಗಟ್ಟಿ ಇಲ್ಲ ಅನ್ನುವುದು ಹಲವು ಸಲ ಸಾಬೀತಾಗಿದೆ. ಹಾಗಂತ ಎಲ್ಲರಲ್ಲ.
ಇದಕ್ಕೆ ಸಾಕ್ಷಿ ವರ್ಷಕ್ಕೆ ನಾಲ್ಕು ಐದು ಅನ್ನುವಂತೆ ಬಿಡುಗಡೆಯಾಗುತ್ತಿರುವ ಸಿಡಿಗಳು. ಆದರೆ ಬಿಡುಗಡೆಯಾಗದೆ ಡೀಲ್ ಲೆಕ್ಕದಲ್ಲಿ ಮುಚ್ಚಿ ಹೋಗುವ ಸಿಡಿಗಳು ಎಷ್ಟಿದೆಯೋ ಗೊತ್ತಿಲ್ಲ.
ರಮೇಶ್ ಜಾರಕಿಹೊಳಿ ಕಾಮಲೀಲೆಯ ಸಿಡಿ ಬಯಲಾಗುತ್ತಿದ್ದಂತೆ ಎಸ್ಐಟಿ ಸಿಡಿಕೋರರ ಹಿಂದೆ ಬಿದ್ದಿದೆ. ಇದೀಗ ತನಿಖೆ ತೀವ್ರಗೊಳ್ಳುತ್ತಿದ್ದಂತೆ ಪತ್ರಕರ್ತರ ಮುಖವಾಡ ಹಾಕಿದ್ದ ಇವರು ಖತರ್ನಾಕ್ ಗಳು ಅನ್ನುವ ಅಂಶವೂ ಬಯಲಾಗಿದೆ.
ರಮೇಶ್ ಜಾರಕಿಹೊಳಿ ಸಿಡಿಯಲ್ಲಿ ಕೋಟಿ ಕೋಟಿ ಲೆಕ್ಕದ ವ್ಯವಹಾರಗಳು ನಡೆದಿದ್ರೆ, ಬೇರೆ ರಾಜಕಾರಣಿಗಳ ಮಂಚದಾಟದ ಸಿಡಿ ಇಟ್ಟುಕೊಂಡು ಕೋಟಿ ಕೋಟಿ ಸಂಪಾದಿಸಿದ್ದಾರೆ ಎಂದು ಗೊತ್ತಾಗಿದೆ.
ಸಿಡಿ ಸೂತ್ರದಾರರ ಹಿಂದಿನ ಖತರ್ನಾಕ್ ಹಿಸ್ಟರಿ ಇದೀಗ ಎಸ್ಐಟಿ ತಂಡಕ್ಕೆ ಲಭ್ಯವಾಗಿದ್ದು, ಈ ಗ್ಯಾಂಗ್ ಮಾಡಿರೋದು ಇದೊಂದೇ ಸಿಡಿಯಲ್ಲ ಅನ್ನುವುದು ಗೊತ್ತಾಗಿದೆ.
ಈ ಹಿಂದೆ ಇಬ್ಬರು ಪ್ರಭಾವಿ ಜನಪ್ರತಿನಿಧಿಗಳ ಸಿಡಿ ಮಾಡಿದ್ದ ಈ ಗ್ಯಾಂಗ್ ಸಿಕ್ಕಾಪಟ್ಟೆ ಕಾಸು ವಸೂಲಿ ಮಾಡಿತ್ತು ಎನ್ನಲಾಗಿದೆ.
ಸಿಡಿಕೋರರು ಖತರ್ನಾಕ್ ಗಳು ಅನ್ನುವುದರಲ್ಲಿ ಅನುಮಾನವಿಲ್ಲ. ಆದರೆ ಮನೆಯಲ್ಲಿ ಹೆಂಡತಿ ಇದ್ದರೂ ಕಾಮಲೀಲೆಯಾಡಲು ಹೋದವರಿಗೆ ಅದ್ಯಾವ ನೈತಿಕತೆ ಇದೆ. ಪಂಚೆಗಟ್ಟಿ ಇಲ್ಲದ ಮಂದಿ ನಿಜಕ್ಕೂ ಜನಪ್ರತಿನಿಧಿಯಾಗಲು ಯೋಗ್ಯರೇ ಅನ್ನುವುದು ಈಗಿರುವ ಪ್ರಶ್ನೆ.
ಕೃಪೆ: ಟೊರೆಂಟ್ ಸ್ಪ್ರೀ