ಸಿಡಿ ಪ್ರಕರಣದ ಆರೋಪಿ ಎನ್ನಿಸಿಕೊಂಡಿರುವ ಮಾಜಿ ಸಚಿವ ರಮೇಶ್ ಜಾರಕಹೊಳಿ ವಿಚಾರಣೆ ನಡೆಸಲು ಎಸ್ಐಟಿ ಅಧಿಕಾರಿಗಳು ಎಲ್ಲಾ ತಯಾರಿ ಮಾಡಿಕೊಂಡಿದ್ದಾರೆ. ಆದರೆ, ಬಂಧನ ಭೀತಿಯಲ್ಲಿರೋ ಜಾರಕಿಹೊಳಿ ಇಂದು ಎಸ್ಐಟಿ ವಿಚಾರಣೆಗೆ ಹಾಜರಾಗುವುದು ಬಹುತೇಕ ಡೌಟ್ ಎನ್ನಲಾಗ್ತಿದೆ.
ನಿನ್ನೆ ಎಸ್ಐಟಿ ಅಧಿಕಾರಿಗಳು ಸಂತ್ರಸ್ತ ಯುವತಿಯ ಸಮ್ಮಖದಲ್ಲಿ ಬರೋಬ್ಬರಿ 8 ಗಂಟೆಗಳ ಕಾಲ ಸ್ಥಳ ಮಹಜರು ನಡೆಸಿದ್ದಾರೆ. ಇವತ್ತು ಕೂಡ ಯುವತಿಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ಹೀಗಾಗಿ ಇಂದು ಬೆಳಗ್ಗೆ 10 ಗಂಟೆಗೆ ಯುವತಿ ಮತ್ತೊಂದು ಸುತ್ತಿನ ವಿಚಾರಣೆಗೆ ಹಾಜರಾಗಲಿದ್ದಾರೆ. ಸದ್ಯ ಯುವತಿಯ ವಿಚಾರಣೆ ಪೂರ್ಣಗೊಳಿಸಲು ತನಿಖಾಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.
ಯುವತಿಯ ಹೇಳಿಕೆ ಹಾಗೂ ಆಕೆಯಿಂದ ಸರಿಯಾದ ಸಾಕ್ಷ್ಯಾಧಾರಗಳು ಸಿಕ್ಕ ಬಳಿಕ ರಮೇಶ್ ಜಾರಕಿಹೊಳಿ ವಿಚಾರಣೆ ನಡೆಸುವ ಸಾಧ್ಯತೆ ಇದೆ. ಜಾರಕಿಹೊಳಿಗೆ ಏಪ್ರಿಲ್ 2ರಂದು ವಿಚಾರಣೆಗೆ ಹಾಜರಾಗುವಂತೆ ಎಸ್ಐಟಿ ನೋಟೀಸ್ ನೀಡಿತ್ತು. ಆದರೆ, ಸಂತ್ರಸ್ತೆ ಹೊರಗಡೆ ಬಂದ ಬಳಿಕ ಆರೋಪಿ ರಮೇಶ್ ಜಾರಕಿಹೊಳಿ ಸಾರ್ವಜನಕಿವಾಗಿ ಕಾಣಿಸಿಕೊಳ್ಳುತ್ತಿಲ್ಲ. ಹೀಗಾಗಿ ರಮೇಶ್ ವಿಚಾರಣೆಗೆ ಹಾಜರಾಗೋದು ಬಹುತೇಕ ಡೌಟ್ ಎನ್ನಲಾಗ್ತಿದೆ.