ಇತ್ತೀಚೆಗೆ ಮದುವೆ ವಿಚಾರದಲ್ಲಿ ರಂಪಾಟ ಮಾಡಿಕೊಂಡು ಸುದ್ದಿಯಲ್ಲಿದ್ದ ಬಿಗ್ ಬಾಸ್ ಸೀಸನ್ 7 ರ ಸ್ಪರ್ಧಿ ಚೈತ್ರಾ ಕೊಟ್ಟೂರು ಕೋಲಾರದಲ್ಲಿರುವ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಚೈತ್ರಾ ಕೊಟ್ಟೂರು ಕೋಲಾರ ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ಅವರ ತಂದೆ ನಾರಾಯಣಪ್ಪ ತಿಳಿಸಿದ್ದಾರೆ.
ಬೆಳಿಗ್ಗೆ 5 ಗಂಟೆಗೆ ಚೈತ್ರಾ ವಿಷ ಸೇವಿಸಿದ್ದು, 6 ಗಂಟೆಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪಿನಾಯಿಲ್ ಬಾಟಲ್ ನಲ್ಲಿ ಬೇರೆ ಯಾವುದೋ ವಿಷ ಸೇವಿಸಿದ್ದಾರೆ.ಮದುವೆ ಆದ ಹುಡುಗ ಕೈ ಕೊಟ್ಟಿರುವ ಹಿನ್ನೆಲೆಯಲ್ಲಿ ಚೈತ್ರಾ ಈಗಾಗಲೇ ಎರಡು ಬಾರಿ ಆತ್ಮಹತ್ಯೆಗೆ ಪ್ರಯತ್ನ ಮಾಡಿದ್ದರು ಎನ್ನಲಾಗಿದೆ.
ಇತ್ತೀಚೆಗೆ ಚೈತ್ರಾ ಮಂಡ್ಯ ಮೂಲದ ನಾಗಾರ್ಜುನ್ ಎಂಬವರನ್ನು ಮದುವೆಯಾಗಿದ್ದರು. ನಾಗಾರ್ಜುನ್ ನನಗೆ ಈ ಮದುವೆ ಇಷ್ಟವಿಲ್ಲ ಎಂದು ಹೇಳಿ ಹೋಗಿದ್ದರು. ಬಲವಂತದಿಂದ ಮದುವೆ ಮಾಡಿಕೊಂಡಿರುವುದಾಗಿ ಹೇಳಿಕೊಂಡಿದ್ದರು. ಹೀಗಾಗಿ ಕೌಟುಂಬಿಕ ಕಲಹ ಉದ್ಭವಿಸಿತ್ತು. .
ಈ ಬಗ್ಗೆ ಚೈತ್ರಾ ಅವರು ಕೋಲಾರ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ನಂತರ ಮಾತುಕತೆಗೆ ಬರೋದಾಗಿ ಹೇಳಿದ್ದ ನಾಗಾರ್ಜುನ್ ಹಾಗೂ ಪೋಷಕರು ಹೇಳಿದ್ದರು. ಮಾತುಕತೆಗೆ ಬಾರದೆ ನಿರ್ಲಕ್ಷ್ಯ ಮಾಡಿದ್ದಕ್ಕೆ ಚೈತ್ರಾ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಚೈತ್ರಾ ಪ್ರಾಣಾಪಾಯದಿಂದ ಪಾರಾಗಿದ್ದಾರೆ.