ರಾಜ್ಯದಲ್ಲಿ ಕೋವಿಡ್ 2ನೇ ಅಲೆ ಅತ್ಯಂತ ಪರಿಣಾಮವಾಗಿದೆ, ಇದನ್ನು ನಿಯಂತ್ರಿಸಲು ವಿಧಿಸಲಾಗಿದ್ದಂತ ಕೊರೋನಾ ಕರ್ಪ್ಯೂ ಹೆಚ್ಚು ಪರಿಣಾಮಕಾರಿ ಆಗಿಲ್ಲ.
ಹೀಗಾಗಿ ದಿನಾಂಕ 10-05-2021ರ ಬೆಳಿಗ್ಗೆ 6 ಗಂಟೆಯವರೆ 24-05-2021ರವರೆಗೆ ಬೆಳಿಗ್ಗೆ 6 ಗಂಟೆಯವರೆಗೆ ಸಂಪೂರ್ಣ ಲಾಕ್ ಡೌನ್ ವಿಧಿಸಲಾಗುತ್ತಿದೆ. ಈ ಅವಧಿಯಲ್ಲಿ ಅಂಗಡಿ, ಬಾರ್, ಹೋಟೆಲ್, ಪಬ್ ನಿರ್ಬಂಧಿಸಲಾಗಿದೆ.
ಆಹಾರ, ಹಾಲು, ತರಕಾರಿ ಮಾರಾಟಕ್ಕೆ ಅನುಕೂಲುವಾಗುವಂತೆ ಬೆಳಿಗ್ಗೆ 6 ರಿಂದ 10 ಗಂಟೆಯವರೆಗೆ ಅನುಮತಿ ನೀಡಲಾಗಿದೆ. ಹಾಲಿನ ಅಂಗಡಿಗಳು ಸಂಜೆ 6 ಗಂಟೆಯವರೆಗೆ ತೆರೆದಿರಲು ಅವಕಾಶ ನೀಡಲಾಗಿದೆ. ತಳ್ಳೋ ಗಾಡಿಯಲ್ಲಿ ಕೂಡ ತರಕಾರಿ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಆಸ್ಪತ್ರೆಗೆ ಹೋಗದೋದಕ್ಕೆ ಅವಕಾಶ ನೀಡಲಾಗಿದೆ. ಅಗತ್ಯ ವಸ್ತು ಕೊಂಡೊಯ್ಯೋದಕ್ಕೆ ಅವಕಾಶ ನೀಡಲಾಗಿದೆ.