ದಿನೇ ದಿನೆ ರಾಜ್ಯಾದ್ಯಂತ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಳವಾಗು ತ್ತಿದೆ. ಈ ಹಿನ್ನೆಲೆಯಲ್ಲಿ ಲಾಕ್ ಡೌನ್ ವಿಸ್ತರಣೆಯಾಗೋದು ಖಚಿತ ಎನ್ನುತ್ತಿವೆ ರಾಜಕಿಯ ಮೂಲಗಳು. ಇನ್ನು ಲಾಕ್ ಡೌನ್ ವಿಸ್ತರಣೆಯಾದರೆ ಕೊಟ್ಯಾಂತರ ಜನರ ಬದುಕುಗಳು ಬೀದಿಪಾಲಾಗಲಿವೆ. ಹೀಗಾಗಿ ಸರ್ಕಾರಗಳು ಬಡ ಮಧ್ಯಮ ವರ್ಗದವರಿಗಾಗಿ ವಿಶೇಷ ಪ್ಯಾಕೇಜ್ ಘೋಷಿಸುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ.
ಈಗಾಗಲೇ ರಾಜ್ಯದಲ್ಲಿ ವಿಧಿಸಿರುವ ಲಾಕ್ ಡೌನ್ ಜನಸಾಮಾನ್ಯರ ಬದುಕನ್ನು ದುಸ್ತರವಾಗಿಸಿದೆ. ಲಾಕ್ ಡೌನ್ ಕಳೆದ ವರ್ಷದಂತಿರದೆ ಈ ವರ್ಷ ಲ್ಲರಿಗು ಹೇರಿಕೆ ಎನ್ನಿಸಲು ಶುರುವಾಗಿದೆ. ಮೇ 10 ರಂದು ಶುರುವಾಗಿದ್ದ ಲಾಕ್ ಡೌನ್ ದೆಸೆಯಿಂದ ಸೋಕಿನ ಪ್ರಮಾಣ ಕೊಂಚ ಕಡಿಮೆಯಾಗಿದೆ ಎನಿಸಿದರೂ ಗ್ರಾಮೀಣ ಪ್ರದೇಶಗಳಲ್ಲಿ ಸೋಕು ಅಧಿಕವಾಗುತ್ತಿರುವುದು ಆತಂಕಕಾರಿಯಾಗಿದೆ.
ಈಗಾಗಲೇ ದೇಶದ ವಿವಿದ ರಾಜ್ಯಗಳು ಲಾಕ್ ಡೌನ್ ಮಾಡಿಯೇ ಕೊರೋನಾವನ್ನು ಕಟ್ಟಿಹಾಕಿವೆ.ಹಾಗಾಗಿ ಕರ್ನಾಟಕದಲ್ಲೂ ಲಾಕ್ ಡೌನ್ ಮಾಡುವುದರಿಂದ ಸೋಂಕು ಹರಡುವುದನ್ನು ತಡೆಗಟ್ಟಬಹುದು ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಈಗಾಗಲೆ ಪ್ರತಿಪಕ್ಷ ನಾಯಕರುಗಳು, ಸಚಿವರುಗಳು, ತಜ್ಞರ ಸಮಿತಿ ಲಾಕ್ ಡೌನ್ ಮುಂದುವರಿಕೆಯ ಕಡೆಗೇ ಒಲವು ತೋರಿಸುತ್ತಿದ್ದಾರೆ. ಆದ್ದರಿಂದ ನ್ನೂ ಕನಿಷ್ಟ ರಡು ಮೂರು ವಾರಗಳಾದರೂ ಲಾಕ್ ಡೌನ್ ಮುಂದುವರೆಯುತ್ತದೆ ಎನ್ನಲಾಗುತ್ತಿದೆ.
ಪ್ರಸ್ತುತ ರಾಜ್ಯದಲ್ಲಿರುವುದು ಲಾಕ್ ಡೌನ್ ಅಲ್ಲ ಬದಲಾಗಿ ಜನತಾ ಕರ್ಫ್ಯೂ ಹಾಗಾಗಿ ಅಧಿಕೃತವಾಗಿ ಲಾಕ್ ಡೌನ್ ಎಂದು ಘೋಷಿಸಿ ವಾರದಲ್ಲಿ ಎರಡು ದಿನ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶನೀ ಉಳಿದ 5 ದಿನ ಸಂಪೂರ್ಣ ಲಾಕ್ ಡೌನ್ ಘೋಷಣೆ ಮಾಡಿ ಈಗಿರುವ ನಿಯಮಗಳನ್ನು ಬಿಗಿಗೊಳಿಸುವ ಸಾಧ್ಯತೆ ಇದೆ. ಮತ್ತೆ ಲಾಕ್ ಡೌನ್ ಮುಂದುವರಿಕೆ ಎಂದರೆ ಜನರು ರಾಜ್ಯ ಸರಕಾರದ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡ ಸುವ ಅಪಾಯ ರುವುದರಿಂದ ಫ್ಯಾಕೇಜ್ ಘೋಷಣೆಗೆ ಮನಸ್ಸು ಮಾಡಿದಂತಿದೆ.
ಆಟೋ ಟ್ಯಾಕ್ಸಿ ಚಾಲಕರು, ಕಾರ್ಮಿಕ, ರೈತರಿಗೆ, ಹೂವು ಹಣ್ಣು ಮಾರುವವರಿಗೆ, ಆಶಾಕಾರ್ಯಕರ್ತೆಯರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿ ಹಣಕಾಸಿನ ನೆರವು ನೀಡುವ ಸಾಧ್ಯತೆಯಿದೆ. ಬಡ ಹಾಗೂ ಮಧ್ಯಮ ವರ್ಗದವರಿಗೆ ಮನೆ ಬಾಗಿಲಿಗೆ ಪುಡ್ ಕಿಟ್ ನೀಡುವ ಸಾಧ್ಯತೆಯೂ ಇದೆ.