ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ 2ನೇ ಅಲೆಯ ಕ್ರೂರಿ ಕೊರೊನಾ ಅಟ್ಟಹಾಸ ಮುಂದುವರೆದಿದೆ. ಕೊರೊನಾ ವಾರಿಯರ್ಸ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಸಿಬ್ಬಂದಿ ಪೈಕಿ ಸುಮಾರು 1,418 ಮಂದಿಗೆ ಸೋಂಕು ತಗುಲಿದೆ.
13 ಪೊಲೀಸರು ಸೋಂಕಿಗೀಡಾದ ಬಳಿಕ ಮೃತಪಟ್ಟಿದ್ದಾರೆ. 725 ಪೊಲೀಸ್ ಸಿಬ್ಬಂದಿ ಹೋಂ ಐಸಿಲೇಷನ್ನಲ್ಲಿ ಚೇತರಿಸಿಕೊಳ್ಳಿತ್ತಿದ್ರೆ, 655 ಮಂದಿ ವೈರಸ್ನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.