ಶ್ರೀಮತಿ ಶಶಿಕಲಾ ಜೊಲ್ಲೆ
ಮಾನ್ಯ ಸಚಿವರು
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ
ಬೆಂಗಳೂರು
ನಮಸ್ಕಾರ ಮೇಡಂ 🙏
ಕರೋನಾ ಮಹಾಮಾರಿಯಿಂದ ತತ್ತರಿಸಿರುವ ಜನರಿಗೆ ನಮ್ಮ ಸಕಾ೯ರ ಹಲವು ಯೋಜನೆಗಳ ಮೂಲಕ ಸಹಾಯವನ್ನು ಮಾಡುತ್ತಿದೆ, ನಮ್ಮ ಮಹಿಳಾ ಅಭಿವೃದ್ಧಿ ನಿಗಮದ ಉದ್ಯೋಗಿನಿ ಯೋಜನೆ ಕೂಡ ಆಥಿ೯ಕವಾಗಿ ಸಂಕಷ್ಟಕ್ಕೆ ಸಿಲುಕಿದ ಅನೇಕ ಕುಟುಂಬಗಳಿಗೆ ಊರೂಗೋಲಿನಂತೆ ಆಸರೆಯಾಗಿ ನಿಂತಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಹಲವಾರು ಜಿಲೆಗಳ ಉದ್ಯೋಗಿನಿ ಫಲಾನುಭವಿ ಮಹಿಳೆಯರು ನನಗೆ ದೂರವಾಣಿ ಕರೆ ಮಾಡಿ ಕೋವಿಡ್ ಲಾಕ್ ಡೌನ್ ಸಮಸ್ಯೆಯ ಕಾರಣ ಬ್ಯಾಂಕ್ ಸಾಲವನ್ನು ಪ್ರತಿ ತಿಂಗಳು ಮರುಪಾವತಿ ಮಾಡಲು ತುಂಬಾ ಕಷ್ಟ ಅನುಭವಿಸುತ್ತಿರುವದರ ಕುರಿತು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ, ಇನ್ನಿತರ ಬ್ಯಾಂಕ್ ಸಾಲಗಳನ್ನು ಮರುಪಾವತಿಯನ್ನು ವಿನಾಯಿತಿ ನೀಡಿರುವಂತೆ ಉದ್ಯೋಗಿನಿ ಫಲಾನುಭವಿಗಳಿಗೆ ಕೂಡ 3 ತಿಂಗಳು ಸಾಲ ಮರುಪಾವತಿಯ ವಿನಾಯಿತಿ ನೀಡಿ, ಸಾಲ ಮರುಪಾವತಿಯ ಅವಧಿಯನ್ನು ವಿಸ್ತರಿಸಬೇಕೆಂದು ಈ ಮೂಲಕ ತಮ್ಮಲ್ಲಿ ವಿನಂತಿಕೊಳ್ಳುತ್ತೇನೆ.
ಧನ್ಯವಾದಗಳು
ಶ್ರೀಮತಿ ಶಶಿಕಲಾ ಟೆಂಗಳಿ
ಅಧ್ಯಕ್ಷರು
ಮಹಿಳಾ ಅಭಿವೃದ್ಧಿ ನಿಗಮ
ಬೆಂಗಳೂರು