ಮೈಸೂರಿನಲ್ಲಿ ಕಳೆದ ತಿಂಗಳಿನಿಂದ ಪ್ರಾಮಾಣಿಕ ಅಧಿಕಾರಿ ವರ್ಸೆಸ್ ಪ್ರಾಮಾಣಿಕ ರಾಜಕಾರಣಿ, ಯಾರು ಪ್ರಾಮಾಣಿಕರು ಎಂಬ ದೊಡ್ಡ ಪೈಪೋಟಿಯೇ ನಡೆಯುತ್ತಿದೆ. ಇಲ್ಲಿ ಸಾ ರಾ ಮಹೇಶ್ ವಿರುದ್ದ ಅಂದಿನ ಮೈಸೂರು ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರೊಯವರು ಆದೇಶಿಸಿದ್ದ ಅಕ್ರಮ ಕಟ್ಟಡ ನಿರ್ಮಾಣ ಕಾರ್ಯ ಆರೋಪದಿಂದ ಸಾ ರಾ ಮಹೇಶ್ ಕ್ಲೀನ್ ಚೀಟ್ ಪಡೆದಿದ್ದರೆ, ಸಾ ರಾ ಮಹೇಶ್ ರವರು ರೋಹಿಣಿ ಸಿಂಧೂರಿ ಯವರ ವಿರುದ್ದ ಮಾಡಿದ್ದ ಈಜುಕೊಳ ನಿರ್ಮಾಣ ಕಾಮಗಾರಿ ಆರೋಪ ಸಿಂಧೂರಿಯವರಿಗೆ ಉರುಳಾಗಿದೆ. ರೋಹಿಣಿಯವರು ಜಿಲ್ಲಾಧಿಕಾರಿಗಳ ಮನೆ ಜಲದರ್ಶಿನಿಯಲ್ಲಿ ಈಜು ಕಳ ನಿರ್ಮಿಸಲು ಯಾವುದೇ ಪೂರ್ವಭಾವಿ ಅನುಮತಿ ಪಡೆದಿಲ್ಲ ಎಂದು ಪ್ರಾದೇಶಿಕ ಆಯುಕ್ತರು ಮುಖ್ಯಮಂತ್ರಿಗಳಿಗೆ ವರದಿ ಸಲ್ಲಿಸಿದ್ದಾರೆ.
ಕಲಬುರಗಿ ಕಾಂಗ್ರೆಸ್ ಮುಖಂಡ ಬಾಬುರಾವ್ ಪಾಟೀಲ್ ಮನೆ ಮೇಲೆ ED ದಾಳಿ..!
ಕಲಬುರಗಿ ಕಾಂಗ್ರೆಸ್ ಮುಖಂಡ ಬಾಬುರಾವ್ ಪಾಟೀಲ್ ಅವರ ಮನೆ ಮೇಲೆ ED ದಾಳಿ ನಡೆಸಿದ್ದು, ಚಿಂಚೋಳಿ ತಾಲೂಕಿನ ಚಂದಾಪುರ ಗ್ರಾಮದಲ್ಲಿ ರೇಡ್ ಮಾಡಿದೆ. ED ಅಧಿಕಾರಿಗಳು ಖಾಸಗಿ ಇನ್ನೋವಾ ಕಾರುಗಳಲ್ಲಿ ಬಂದಿದ್ದು, ಮಹತ್ವದ ದಾಖಲೆಯನ್ನು ವಶಕ್ಕೆ ಪಡೆದಿದ್ದಾರೆ...