2020ನೇ ಸಾಲಿನ ಡಾ.ಬೆಸಗರಹಳ್ಳಿ ರಾಮಣ್ಣ ಕಥಾ ಸಂಕಲನ ಪ್ರಶಸ್ತಿಗೆ ಡಾ.ಮಿರ್ಜಾ ಬಶೀರ್ ಅವರ ಹಾರುವ ಹಕ್ಕಿ ಮತ್ತು ಇರುವೆ ಕೃತಿ ಯನ್ನು ವಿಮರ್ಶಕ ಎಸ್.ಆರ್.ವಿಜಯಶಂಕರ, ವಿಮರ್ಶಕಿ ಡಾ.ಎಂ.ಎಸ್.ಆಶಾದೇವಿ ಮತ್ತು ಸಾಹಿತಿ ಡಾ.ಕೆ.ವೈ.ನಾರಾಯಣಸ್ವಾಮಿ ಒಳಗೊಂಡ ತೀರ್ಪುಗಾರ ಮಂಡಳಿಯು ಸರ್ವಾನುಮತದಿಂದ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಈ ಪ್ರಶಸ್ತಿಯು 25 ಸಾವಿರ ರೂ.ನಗದು, ಪ್ರಶಸ್ತಿ ಫಲಕ ಹಾಗೂ ಪತ್ರವನ್ನು ಒಳಗೊಂಡಿದೆ ಎಂದು ಪ್ರತಿಷ್ಠಾನ ಪ್ರಕಟನೆಯಲ್ಲಿ ತಿಳಿಸಿದೆ..
ಕಲಬುರಗಿ ಕಾಂಗ್ರೆಸ್ ಮುಖಂಡ ಬಾಬುರಾವ್ ಪಾಟೀಲ್ ಮನೆ ಮೇಲೆ ED ದಾಳಿ..!
ಕಲಬುರಗಿ ಕಾಂಗ್ರೆಸ್ ಮುಖಂಡ ಬಾಬುರಾವ್ ಪಾಟೀಲ್ ಅವರ ಮನೆ ಮೇಲೆ ED ದಾಳಿ ನಡೆಸಿದ್ದು, ಚಿಂಚೋಳಿ ತಾಲೂಕಿನ ಚಂದಾಪುರ ಗ್ರಾಮದಲ್ಲಿ ರೇಡ್ ಮಾಡಿದೆ. ED ಅಧಿಕಾರಿಗಳು ಖಾಸಗಿ ಇನ್ನೋವಾ ಕಾರುಗಳಲ್ಲಿ ಬಂದಿದ್ದು, ಮಹತ್ವದ ದಾಖಲೆಯನ್ನು ವಶಕ್ಕೆ ಪಡೆದಿದ್ದಾರೆ...