ಬೆಂಗಳೂರು,ಜುಲೈ,21-ನಾಯಕತ್ವದಿಂದ ಯಡಿಯೂರಪ್ಪ ಕೆಳಗಿಳಿಯುವುದು ನಿಶ್ಚಿತವಾಗುತ್ತಿದ್ದಂತೆಯೇ ಮುಖ್ಯಮಂತ್ರಿ ಹುದ್ದೆಯ ರೇಸಿನಲ್ಲಿ ಸಿ.ಟಿ.ರವಿ ಅವರ ಹೆಸರು ಮುಂಚೂಣಿಗೆ ಬಂದಿದೆ.
ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರ ಹೆಸರನ್ನು ಸಂಘಪರಿವಾರ ಸೂಚಿಸಿದ್ದು ವರಿಷ್ಟರು ಈ ಹೆಸರಿಗೆ ಗ್ರೀನ್ ಸಿಗ್ನಲ್ ನೀಡುವ ಲಕ್ಷಣಗಳು ದಟ್ಟವಾಗಿವೆ.
ಪಕ್ಷವನ್ನು ಬಹುನಾಯಕತ್ವದಡಿ ಮುಂದುವರಿಸದಿದ್ದರೆ ಕಷ್ಟ ಎಂಬ ತೀರ್ಮಾನಕ್ಕೆ ಬಂದಿರುವ ಬಿಜೆಪಿ ವರಿಷ್ಟರು,ಪಕ್ಷವನ್ನು ಸರ್ವಜಾತಿಗಳ ಹಬ್ ಅನ್ನಾಗಿ ರೂಪಿಸುವುದು ಅನಿವಾರ್ಯ ಎಂಬ ಲೆಕ್ಕಾಚಾರಕ್ಕೆ ಬಂದಿದ್ದಾರೆ.
ಒಂದು ಸಮುದಾಯವನ್ನು ಪ್ರಮುಖವಾಗಿ ಪರಿಗಣಿಸಿದರೆ ನಿರ್ಣಾಯಕ ಹಂತದಲ್ಲಿ ಮುಜುಗರ ಅನುಭವಿಸುವ ಸ್ಥಿತಿ ಬರುತ್ತದೆ.
ಹೀಗಾಗಿ ಪಕ್ಷ ಆಲ್ ಕಮ್ಯುನಿಟಿ ಹಬ್ ಆಗುವುದು ಸೂಕ್ತ ಮತ್ತು ಅನಿವಾರ್ಯ ಎಂದು ವರಿಷ್ಟರು ಭಾವಿಸಿರುವುದಾಗಿ ಉನ್ನತ ಮೂಲಗಳು ತಾರಾಪ್ರಭ ಮೀಡಿಯಾ ಹೌಸ್ ಗೆ ಹೇಳಿವೆ.
ಈ ಹಿನ್ನೆಲೆಯಲ್ಲಿ ಒಕ್ಕಲಿಗ ಸಮುದಾಯದ ಸಿ.ಟಿ.ರವಿ ಹೆಸರು ಸಿಎಂ ಹುದ್ದೆಯ ರೇಸಿನಲ್ಲಿ ಮುಂಚೂಣಿಗೆ ಬಂದು ನಿಂತಿದೆ.
ಈ ಮಧ್ಯೆ ಲಿಂಗಾಯತ ಸಮುದಾಯದ ಮುರುಗೇಶ್ ನಿರಾಣಿ,ಕೇಂದ್ರ ಸಚಿವ ಪ್ರಹ್ಲಾದ ಜೋಷಿ,ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ ಅವರ ಹೆಸರುಗಳೂ ಪ್ರಬಲವಾಗಿ ಕೇಳಿ ಬರುತ್ತಿವೆ.
ಮುಂದಿನ ಸರ್ಕಾರ ರಚನೆಯ ಸಂದರ್ಭದಲ್ಲಿ ಹಾಲಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ್ ಅವರಿಗೆ ಕೊಕ್ ನೀಡಲಿದ್ದು ಬಿ.ಶ್ರೀರಾಮುಲು ಹಾಗೂ ಬಸವರಾಜ ಬೊಮ್ಮಾಯಿ ಉಪಮುಖ್ಯಮಂತ್ರಿಗಳಾಗಿ ಸೇರ್ಪಡೆಯಾಗಲಿದ್ದಾರೆ.
ಅಲ್ಲಿಗೆ ಅಶ್ವತ್ಥನಾರಾಯಣ,ಲಕ್ಷ್ಮಣ ಸವದಿ,ಬಿ.ಶ್ರೀರಾಮುಲು ಮತ್ತು ಬಸವರಾಜ ಬೊಮ್ಮಾಯಿ ಡಿಸಿಎಂ ಹುದ್ದೆಗಳಲ್ಲಿರಲಿದ್ದಾರೆ.
ಬಸವನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಲಿಂಗಾಯತ ಒಳಸಮುದಾಯಗಳಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡುವುದು ವರಿಷ್ಟರ ಯೋಚನೆ ಎಂದು ಮೂಲಗಳು ಹೇಳಿವೆ.
ಹಾಲಿ ಸಚಿವ ಸಂಪುಟದ ಅರ್ಧ ಡಜನ್ ಗೂ ಹೆಚ್ಚು ಸಚಿವರಿಗೆ ಕೊಕ್ ನೀಡಲು ತೀರ್ಮಾನಿಸಲಾಗಿದೆ ಎಂದು ಉನ್ನತ ಮೂಲಗಳು ಹೇಳಿವೆ
ಸುಪ್ರೀಂಕೋರ್ಟ್ ಇತಿಹಾಸದಲ್ಲೇ ಇದೇ ಮೊದಲು, ಬೆಂಗಳೂರು ಮೂಲದ ಮೂಕ ವಕೀಲೆ ವಾದ!
ದೇಶದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಸುಪ್ರೀಂಕೋರ್ಟ್ ನಲ್ಲಿ ವಾಕ್- ಶ್ರವಣ ದೋಷವುಳ್ಳ ವಕೀಲೆಯೊಬ್ಬರು ಸಂಕೇತ ಭಾಷೆ (ಸಂಜ್ಞೆ ಭಾಷೆ) ಮೂಲಕ ಭಾರತದ ಮುಖ್ಯ ನ್ಯಾಯಮೂರ್ತಿ ಡಿ...